Asianet Suvarna News Asianet Suvarna News

ಶಿವಮೊಗ್ಗ: ಕರ್ತವ್ಯನಿರತ ಶಿಕ್ಷಕರ ಮೇಲೆ ಹಲ್ಲೆ

ಗುರು ದೇವರಿಗೆ ಸಮಾನ ಅಂತಾರೆ. ಆದರೆ ಶಿವಮೊಗ್ಗದ ಭದ್ರಾವತಿ ಸಮೀಪ ಕರ್ತವ್ಯದಲ್ಲಿದ್ದ ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ನಡೆದಿದೆ. ಬಡ್ತಿ ಕೇಳಿದ್ರು ಅನ್ನೋ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಲಾಗಿದೆ. ಇಬ್ಬರು ಶಿಕ್ಷಕರನ್ನೂ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

Teachers attacked by Unknown people in Shivamogga
Author
Bangalore, First Published Jul 26, 2019, 9:37 AM IST
  • Facebook
  • Twitter
  • Whatsapp

ಶಿವಮೊಗ್ಗ(ಜು.26): ಭದ್ರಾವತಿಯ ಹುಡ್ಕೋ ಕಾಲೋನಿಯಲ್ಲಿರುವ ಡಾ. ಬಿ.ಆರ್‌ ಅಂಬೇಡ್ಕರ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ನಡೆದಿರುವ ಘಟನೆ ಬುಧವಾರ ನಡೆದಿದೆ.

ಮುಖ್ಯಶಿಕ್ಷಕ ಬಿ.ಎಸ್‌ ಗಣೇಶಪ್ಪ ಮತ್ತು ಸಹ ಶಿಕ್ಷಕಿ ಆರ್‌. ಕೆಂಚಮ್ಮ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಇಬ್ಬರು ಸಹ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಸಂಬಂಧ ಕಾಗದನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನ್ಸೂರ್ ನಡೆಸುತ್ತಿದ್ದ ಶಾಲೆಗೆ 21 ಶಿಕ್ಷಕರ ನೇಮಕ

ಬಡ್ತಿ ಕೇಳಿದ್ದಕ್ಕೆ ನಡೀತು ಹಲ್ಲೆ:

ಮುಖ್ಯ ಶಿಕ್ಷಕ ಬಿ.ಎಸ್‌ ಗಣೇಶಪ್ಪ ಮತ್ತು ಸಹ ಶಿಕ್ಷಕಿ ಆರ್‌. ಕೆಂಚಮ್ಮ ಸುಮಾರು 29 ವರ್ಷಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುಮಾರು 10 ರಿಂದ 12 ವರ್ಷದ ವಾರ್ಷಿಕ ಬಡ್ತಿಯನ್ನು ಇವರಿಗೆ ಆಡಳಿತ ಮಂಡಳಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಜು.23ರಂದು ಕ್ಷೇತ್ರ ಶಿಕ್ಷಣಾಧಿ​ಕಾರಿ, ತಾಲೂಕು ಪಂಚಾಯಿತಿ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿಯವರು ಹಾಗೂ ಪ್ರೌಢಶಾಲಾ ಶಿಕ್ಷಕರು ಶಾಲಾ ವಿಚಾರವಾಗಿ ಸಭೆ ಸೇರಿದ ಸಂದರ್ಭದಲ್ಲಿ ವಾರ್ಷಿಕ ಬಡ್ತಿ ನೀಡುವಂತೆ ಈ ಇಬ್ಬರು ಶಿಕ್ಷಕರು ಕೇಳಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಮರುದಿನ ಇವರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿಜಯಗಾಂ​ ಹಾಗೂ ಅವರ ಪತ್ನಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಇಬ್ಬರು ಸೇರಿ ಸಂಬಂಧವಿಲ್ಲದವರನ್ನು ಶಾಲೆಗೆ ಕರೆಸಿ ಅವರಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

Follow Us:
Download App:
  • android
  • ios