ಮಗನ ವಯಸ್ಸಿನ ವಿದ್ಯಾರ್ಥಿ ಜತೆ ಶಿಕ್ಷಕಿಯ ಚಕ್ಕಂದ: ರೊಮ್ಯಾಂಟಿಕ್ ಕಿಸ್ ಕೊಟ್ಟ ಟೀಚರಮ್ಮ..!
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯಿಂದ ಅಸಭ್ಯ ವರ್ತನೆ, ಮುತ್ತು ಕೊಟ್ಟು, ಕೊಡಿಸಿಕೊಳ್ಳುವ ಫೋಟೋಗಳು ವೈರಲ್, ವಿದ್ಯಾರ್ಥಿ ಪೋಷಕರಿಂದ ಶಿಕ್ಷಕಿ ವಿರುದ್ಧ ಗರಂ, ಶಿಕ್ಷಕಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ.
ಚಿಕ್ಕಬಳ್ಳಾಪುರ(ಡಿ.28): ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತನ್ನ ಮಗನ ವಯಸ್ಸಿನ ಅಪ್ರಾಪ್ತ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇಷ್ಟೇ ಅಲ್ಲದೆ ಆತನೊಂದಿಗೆ ರೋಮ್ಯಾಂಟಿಕ್ ಆಗಿ ವರ್ತಿಸಿರೋ ವಿಡಿಯೋ ಹಾಗೂ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಇತ್ತೀಚೆಗೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಶಾಲಾ ಬಾಲಕನೊಂದಿಗೆ ಮುಖ್ಯ ಶಿಕ್ಷಕಿ ಈ ರೀತಿ ವರ್ತಿಸಿದ್ದು, ಇದೀಗ ಆ ಫೋಟೋಗಳು ಸೋರಿಕೆ ಆಗಿ ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಮುಖ್ಯ ಶಿಕ್ಷಕಿ ಸುಧಾ(ಹೆಸರು ಬದಲಾಯಿಸಲಾಗಿದೆ) ಎಂಬ ಶಿಕ್ಷಕಿ ಈ ರೀತಿ ತಾನೊಬ್ಬ ಗುರು ಎಂಬುದನ್ನು ಮರೆತು ಶಾಲೆಯ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ.
ಹೊಸ ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ನಿರ್ಬಂಧ! ಕಾರಣ ಇಲ್ಲಿದೆ
ಈ ವೇಳೆ ಬಾಲಕನೊಂದಿಗೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿರುವ ಶಿಕ್ಷಕಿ, ವಿದ್ಯಾರ್ಥಿ ಕೂಡ ಶಿಕ್ಷಕಿಯರನ್ನು ಮುದ್ದಾಡಿದ್ದು, ಶಿಕ್ಷಕಿ ಕೂಡ ಬಾಲಕನಿಗೆ ಕಿಸ್ ಕೊಟ್ಟಿರುವ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಶಿಕ್ಷಕಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜತೆಗೆ ಶಿಕ್ಷಕಿಯ ವರ್ತನೆ ಬಗ್ಗೆ ಪೋಷಕರು ಕಿಡಿಕಾರಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಪೋಷಕರು ಕೂಡ ಶಾಲೆ ಬಳಿ ತೆರಳಿ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆಯ ಬಗ್ಗೆ ಶಾಲೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.