SSLC ಪರೀಕ್ಷಾ ಕರ್ತವ್ಯದಲ್ಲಿದ್ದ ಶಿಕ್ಷಕಕನಿಗೆ ಸೋಂಕು: ಮಕ್ಕಳಿಗೆ ಕೊರೋನಾ ಭೀತಿ
ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿಟ್ಟಿಂಗ್ ಸ್ಕಾ್ಯಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿದ್ದ 130 ಮಕ್ಕಳಲ್ಲಿ ಈಗ ಕೊರೋನಾ ಸೋಂಕಿನ ಭೀತಿ ಉಂಟಾಗಿರುವ ಘಟನೆ ಪಾವಗಡ ತಾಲೂಕು ಅರಸೀಕೆರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ತುಮಕೂರು(ಜೂ.27): ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿಟ್ಟಿಂಗ್ ಸ್ಕಾ್ಯಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿದ್ದ 130 ಮಕ್ಕಳಲ್ಲಿ ಈಗ ಕೊರೋನಾ ಸೋಂಕಿನ ಭೀತಿ ಉಂಟಾಗಿರುವ ಘಟನೆ ಪಾವಗಡ ತಾಲೂಕು ಅರಸೀಕೆರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಸಿಟ್ಟಿಂಗ್ ಸ್ಕಾ$್ವಡ್ ಆಗಿ ಕಾರ್ಯನಿರ್ವಹಿಸಲು ಬಂದಿದ್ದ ಶಿಕ್ಷಕ 22 ನೇ ತಾರೀಖು ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಆದರೆ ತಾನು ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದನ್ನು ಮುಚ್ಚಿಟ್ಟಆತ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಈಗ ಅವರ ಗಂಟಲು ದ್ರವದ ವರದಿ ಬಂದಿದ್ದು ಅವರಿಗೆ ಪಾಸಿಟಿವ್ ಇರುವುದರಿಂದ ಪರೀಕ್ಷಾ ಕೇಂದ್ರದಲ್ಲಿನ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ.
ದೇವೇಗೌಡರ ಮಾತು ನನಗೆ ಆಶೀರ್ವಾದ: ನಾರಾಯಣ ಗೌಡ
ಪಾವಗಡ ಬಿಇಓ ಸೇರಿದಂತೆ 12 ಮಂದಿ ಶಿಕ್ಷಕರು ಈತನ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲದೇ ಆತ ಪಾವಗಡ ಸೇರಿದಂತೆ ಹಲವಾರು ಕಡೆ ಓಡಾಡಿರುವ ಬಗ್ಗೆ ಮಾಹಿತಿ ಇದ್ದು ಆತನ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚೆ ಕ್ವಾರಂಟೈನ್ ಮಾಡುವ ಪ್ರಯತ್ನ ಆರಂಭವಾಗಿದೆ. ಈ ಮಧ್ಯೆ ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗಿದೆ.
"