ಗಂಗಾವತಿ: ಎನ್‌ಟಿಎಸ್‌ಇ ಪರೀಕ್ಷೆ ವೇಳೆ ಕರ್ತವ್ಯನಿರತ ಶಿಕ್ಷಕ ಸಾವು

ಹೃದಯಾಘಾತದಿಂದ ಶಿಕ್ಷಕ ಸಾವು| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಗೊಟ್ಟಿಪಾಟಿ ವೆಂಕಟರತ್ನಂ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಮೃತಪಟ್ಟ ಗವಿಸಿದ್ದಯ್ಯಸ್ವಾಮಿ| 

Teacher Dies due to Heart attack in Gangavati in Koppal grg

ಗಂಗಾವತಿ(ಜ.26): ಎನ್‌ಟಿಎಸ್‌ಇ ಮತ್ತು ಎನ್‌ಎಂಎಂಎಸ್‌ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗಂಗಾ​ವತಿ ನಗರದಲ್ಲಿ ಸೋಮ​ವಾರ ನಡೆದಿದೆ.

ನಗರದ ಗೊಟ್ಟಿಪಾಟಿ ವೆಂಕಟರತ್ನಂ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಮುಖ್ಯ ಅಧೀಕ್ಷಕರಾಗಿದ್ದ ಹಣವಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗವಿಸಿದ್ದಯ್ಯಸ್ವಾಮಿ (55) ಮೃತಪಟ್ಟಿದ್ದಾರೆ. 

ಗಂಗಾವತಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌: ಐದು ಅಂಗಡಿ ಭಸ್ಮ, ಲಕ್ಷಾಂತರ ರೂ. ಹಾನಿ

ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧುಗ​ಳಿ​ದ್ದಾ​ರೆ. ಯಲಬುರ್ಗಾ ತಾಲೂಕಿನ ವೀರಾಪುರ ಗ್ರಾಮದ ಗವಿಸಿದ್ದಯ್ಯಸ್ವಾಮಿ ಕಳೆದ ಮೂರು ವರ್ಷಗಳಿಂದ ತಾಲೂಕಿನ ಹಣವಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios