Asianet Suvarna News Asianet Suvarna News

ಮಕ್ಕಳಿಗೆ ವಚನ, ಒಳ್ಳೆಯ ಸಂಸ್ಕಾರ ಹೇಳಿಕೊಡಿ: ನಟ ದೊಡ್ಡಣ್ಣ

ಬಣಜಿಗ ಸಮಾಜದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ವಚನ, ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು ಎಂದು ಚಿತ್ರನಟ ಹಾಗೂ ಹಾಸ್ಯ ಕಲಾವಿದ ದೊಡ್ಡಣ್ಣ ಹೇಳಿದರು. 
 

Teach the Children a Vow and Good Rites Says Actor Doddanna gvd
Author
First Published Jul 1, 2023, 1:40 AM IST

ಕುಷ್ಟಗಿ (ಜು.01): ಬಣಜಿಗ ಸಮಾಜದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ವಚನ, ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು ಎಂದು ಚಿತ್ರನಟ ಹಾಗೂ ಹಾಸ್ಯ ಕಲಾವಿದ ದೊಡ್ಡಣ್ಣ ಹೇಳಿದರು. ಪಟ್ಟಣದ ಎನ್‌ಸಿಎಚ್‌ ಪ್ಯಾಲೇಸ್‌ನಲ್ಲಿ ಕುಷ್ಟಗಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣ ಹಾಗೂ ಅಕ್ಕಮಹಾದೇವಿ ಎಂಬ ಈ ಎರಡು ಮಹಾನ್‌ ಶಕ್ತಿಗಳ ತತ್ವದಡಿ ಜೀವನ ಮಾಡುವ ಸಮಾಜದಲ್ಲಿ ಹುಟ್ಟಿದ ನಾನೇ ಅದೃಷ್ಟವಂತ. 

ಸಮಾಜದ ಮಹಿಳೆಯರು ಒಗ್ಗಟ್ಟಾಗಿ ಸಾಮಾಜಿಕ, ರಾಜಕೀಯ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು. ನಮ್ಮ ಬಣಜಿಗ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಅಂದಾಗ ಮಕ್ಕಳು ಜ್ಞಾನವಂತರಗುತ್ತಾರೆ ಎಂದರು. ಮಕ್ಕಳಿಗೆ ಮೊಬೈಲ್‌ ಕೊಡುವುದನ್ನು ಬಿಟ್ಟು ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಹೇಳಿಕೊಡಬೇಕು. ಅಂತಹ ಪುಸ್ತಕಗಳನ್ನು ಕೊಡಬೇಕು. ಬಸವಣ್ಣ, ಅಕ್ಕಮಹಾದೇವಿ ಅವರ ತತ್ವ ಆದರ್ಶಗಳನ್ನು ಬೆಳೆಸಿಕೊಳ್ಳಲು ಪೂರಕವಾಗಿರುವಂತಹ ವಚನಗಳನ್ನು ಕಲಿಸಬೇಕು. ಆಗ ಜ್ಞಾನ ಬೆಳೆಯುತ್ತದೆ ಎಂದರು. 

ಜಾತಿಗೊಂದು ಜಯಂತಿ ಮಾಡಿ ತಪ್ಪು ಗ್ರಹಿಕೆ ಬೇರೂರುತ್ತಿದೆ: ಶಾಸಕ ಜಿ.ಟಿ.ದೇವೇಗೌಡ

ಬಣಜಿಗ ಸಮಾಜದ ಎಲ್ಲ ಪಾಲಕರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡುವ ಜೊತೆಗೆ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇರುತ್ತದೆ ಅಂದು ತಿಳಿದುಕೊಂಡು ಅವರನ್ನು ಉತ್ತಮವಾಗಿ ಅದಕ್ಕೆ ಪೂರಕವಾಗಿ ಶಿಕ್ಷಣ ನೀಡುವ ಮೂಲಕ ಸಹಕಾರ ನೀಡಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡಬೇಕು ಎಂದರು. ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಹಕಾರ ನೀಡಬೇಕು. ನಾನು ಸಹ ಸಮಾಜದ ಜೊತೆಗೆ ಇರುತ್ತೇನೆ. 

ಸಂಘಟನೆಯ ಮೂಲಕ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕು. ಸಮಾಜದಲ್ಲಿ ಹಿಂದುಳಿದವರನ್ನು ಅಭಿವೃದ್ಧಿಯತ್ತ ಸಾಗುವ ಹಾಗೆ ಸಹಕಾರ ನೀಡುವ ಮೂಲಕ ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬಸವಣ್ಣ ಹಾಗೂ ಅಕ್ಕಮಹಾದೇವಿ ತತ್ವದಡಿಯಲ್ಲಿ ಕೆಲಸ ಮಾಡುವ ಸಮಾಜ ಬಣಜಿಗ ಸಮಾಜವಾಗಿದೆ. ಇವರು ಶಾಂತಿಪ್ರಿಯರಾಗಿದ್ದು, ವ್ಯಾಪಾರ ವಾಣಿಜ್ಯ ಹಾಗೂ ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಇವರ ಪಾತ್ರ ಇದೆ ಎಂದರು. 

ಕೋಲಾರ ಜನತೆಗೆ ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರಿಸಿ: ಸುದರ್ಶನ್‌ ಮನವಿ

ಹುನಗುಂದ ಕಾಲೇಜಿನ ಉಪನ್ಯಾಸಕಿ ಡಾ.ಶಿವಗಂಗಾ ರಂಜಣಗಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕರಿಬಸವ ಶಿವಾಚಾರ್ಯರು ವಹಿಸಿದ್ದರು. ನಿವೃತ್ತ ಎಸ್ಪಿ ಲೋಕಾಯುಕ್ತ ವಿಜಕುಮಾರ ಬಿಸನಳ್ಳಿ, ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ ಕನ್ನೂರು, ಬಸಟೆಪ್ಪ ಕುಂಬಳಾವತಿ, ರತ್ನಾ ಪಡಿ, ಪ್ರಭಾವತಿ ಬಂಗಾರಶೆಟ್ಟರ, ಸಚಿನ ಕುಡತೀನಿ, ಶಶಿಧರ ಕವಲಿ, ಉಮಾಪತಿ ಅಕ್ಕಿ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು, ಹನಮಸಾಗರ, ಹುಲಗೇರಿ, ನಿಲೋಗಲ್‌ ತಾವರಗೇರಾ ಸೇರಿದಂತೆ ಹತ್ತಾರು ಗ್ರಾಮಗಳ ಹಾಗೂ ಕುಷ್ಟಗಿ ಪಟ್ಟಣದ ಬಣಜಿಗ ಸಮಾಜದವರು ಇದ್ದರು.

Follow Us:
Download App:
  • android
  • ios