Asianet Suvarna News Asianet Suvarna News

ಟಾಸ್ಕ್‌ಫೋರ್ಸ್‌: ಚೀನಾದಿಂದ ಹೊರ ಹೋಗುವ ಕಂಪನಿಗಳನ್ನು ಆಕರ್ಷಿಸಲು ಯತ್ನ

ಚೀನಾದಿಂದ ಹೊರ ಹೋಗುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಆಹ್ವಾನಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್‌ ರಚನೆ ಮಾಡಲಾಗಿದೆ ಎಂದು ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

Task force to attract companies that quit from china
Author
Bangalore, First Published Jun 6, 2020, 11:57 AM IST

ಕೋಲಾರ(ಜೂ.06): ಚೀನಾದಿಂದ ಹೊರ ಹೋಗುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಆಹ್ವಾನಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್‌ ರಚನೆ ಮಾಡಲಾಗಿದೆ ಎಂದು ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ತಾಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್‌ ಸೋಂಕು ಹರಡುವಿಕೆ ವಿಷಯದಲ್ಲಿ ಇಡೀ ವಿಶ್ವವೇ ಚೀನಾ ವಿರುದ್ದ ಆಕ್ರೋಶಗೊಂಡಿವೆ. ಅನೇಕ ಮಲ್ಟಿನ್ಯಾಷನಲ್‌ ಕಂಪನಿಗಳು ಅಲ್ಲಿಂದ ಹೊರ ಹೋಗುವ ಮಾತನ್ನಾಡುತ್ತಿದ್ದು, ಇಂತಹ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯಲು ಈ ಟಾಸ್ಕ್‌ಪೋರ್ಸ್‌ ಸಮಿತಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಬದಲಾದ ಕೈಗಾರಿಕಾ ನೀತಿ

ರಾಜ್ಯದಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಕೈಗಾರಿಕಾ ನೀತಿ ಬದಲಾಗಿದೆ. ಬರುವ ಕೈಗಾರಿಕೆಗಳಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸುವುದರ ಜತೆಗೆ ಅವರಿಗೆ ಅನುಮತಿ ಪಡೆಯಲು ಇದ್ದ ನಿಯಮಗಳ ಸಡಿಲಿಕೆ ಮಾಧಿಲಾಗಿದೆ. ಇಡೀ ದೇಶದಲ್ಲೇ ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕ ನಂ.1 ಆಗಿಸಲು ಎಲ್ಲಾ ಪ್ರಯತ್ನ ನಡೆಸಲಾಗಿದೆ, ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.

ಮಂಡ್ಯ: ಕೆಎಂಎಫ್‌ ನಿರ್ದೇಶಕ ಸ್ಥಾನ ಜೆಡಿಎಸ್‌ ತೆಕ್ಕೆಗೆ

ಕೋಲಾರ- ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಬೃಹತ್‌ ಕಾರಿಡಾರ್‌ ನಿರ್ಮಾಣಗೊಳ್ಳಲಿದ್ದು, ಇದು ಪೂರ್ಣಗೊಂಡರೆ ಜಿಲ್ಲೆಗೆ ಹೆಚ್ಚಿನ ಕೈಗಾರಿಕೆಗಳು ಬರಲಿವೆ. ಈಗಾಗಲೇ ನರಸಾಪುರ, ವೇಮಗಲ್‌, ಮುಳಬಾಗಿಲು ಮತ್ತಿತರ ಭಾಗಗಳಲ್ಲಿ ಕೈಗಾರಿಕೆಗಳು ಆರಂಭಗೊಂಡಿದ್ದು, ಇನ್ನೂ ಬರಲಿವೆ ಎಂದರು.

2ನೇ ಹಂತದಲ್ಲಿ ಕೋಲಾರ, ನರಸಾಪುರ,ಬಿಜಿಎಂಎಲ್‌ ಪ್ರದೇಶಕ್ಕೆ ಕೈಗಾರಿಕೆಗಳು ಬರಲು ಪ್ರಸ್ತಾವನೆ ಇದೆ, ಮುಳಬಾಗಿಲು ತಾಲೂಕಿನ ದೇವರಾಯಸಮುದ್ರಕ್ಕೂ ಕೈಗಾರಿಕೆಗಳು ಬರಲಿವೆ ಎಂದರು.

ಕೊರೊನಾದಿಂದಾಗಿ ಆರ್ಥಿಕತೆ ಹಿನ್ನಡೆ

ಕೊರೋನಾ ಮಾರಿ ಇಡೀ ಜಗತ್ತಿನಲ್ಲೇ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ, ಆದರೂ ಇಡೀ ದೇಶದಲ್ಲೇ ಕೈಗಾರಿಕೆ ಚಟುವಟಿಕೆ ಆರಂಭಗೊಂಡಿರುವುದು ರಾಜ್ಯದಲ್ಲೇ ಮೊದಲು. ಕೊರೋನಾದಿಂದ ಜೀವ ರಕ್ಷಣೆ ಜತೆಗೆ ಜೀವನ ನಡೆಸುವುದು ಹೇಗೆ ಎಂಬುದು ಮುಖ್ಯವಾಗಿದ್ದು, ಇದನ್ನು ಗಮನಿಸಿಯೇ ಲಾಕ್‌ಡೌನ್‌ ಹಂತಹಂತವಾಗಿ ಸಡಿಲಿಕೆ ಮಾಡಲಾಗಿದೆ ಎಂದರು.

ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ವರ್ಗಾವಣೆ ದಂಧೆ

ಸುದ್ದಿಗೋಷ್ಟಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ವಿಭಾಗಾಧಿಕಾರಿ ಸೋಮಶೇಖರ್‌, ತಹಸೀಲ್ದಾರ್‌ ಶೋಭಿತಾ, ಕೈಗಾರಿಕೆ ಇಲಾಖೆ ಡಿಡಿ ರವಿಚಂದ್ರ ಮತ್ತಿತರರಿದ್ದರು.

Follow Us:
Download App:
  • android
  • ios