'ಕೊರೋನಾ ನಿಯಂತ್ರಣಕ್ಕೆ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌ '

ಕೊರೋನಾ ನಿಯಂತ್ರಣಕ್ಕೆ‌ ಹೊಸ ಟಾಸ್ಕ್‌ಪೋರ್ಸ್ ಕಮಿಟಿ ರಚನೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರೇ ಟಾಸ್ಕ್ ಪೋರ್ಸ್ ಕಮಿಟಿಯ ಅಧ್ಯಕ್ಷರಾಗಿರುತ್ತಾರೆ ಎಂದು ಸಚಿವ ಎಸ್ ಟಿ ಸೋಮಶೇಖರ್  ಹೇಳಿದರು.

Task Force For covid Control in Karnataka Says minister St Somashekar snr

ಮೈಸೂರು (ಮೇ.5): ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಮೈಸೂರಿನಲ್ಲಿಂದು ಚಾಮರಾಜ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಮಾತನಾಡಿದ ಎಸ್.ಟಿ.ಸೋಮಶೇಖರ್ ಕೊರೋನಾ ನಿಯಂತ್ರಣಕ್ಕೆ‌ ಹೊಸ ಟಾಸ್ಕ್‌ಪೋರ್ಸ್ ಕಮಿಟಿ ರಚನೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರೇ ಟಾಸ್ಕ್ ಪೋರ್ಸ್ ಕಮಿಟಿಯ ಅಧ್ಯಕ್ಷರಾಗಿರುತ್ತಾರೆ. ಎಲ್ಲರನ್ನು ವಿಶ್ವಾಸಕ್ಕೆ‌ ತೆಗೆದುಕೊಂಡು ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕೆ.ಆರ್‌.ನಗರ ಶಾಸಕ ಬದುಕಿದ್ದಾರಾ? ಸಾರಾಗೆ ಸೋಮಶೇಖರ್ ಚಾಟಿ ...

ಆಕ್ಸಿಜನ್ ವಿಚಾರದಲ್ಲಿ ಜನರು ಪ್ಯಾನಿಕ್ ಆಗಿದ್ದಾರೆ.‌ ಸ್ವಲ್ಪ ಸಮಸ್ಯೆಯಾದರೂ ಆಕ್ಸಿಜನ್ ಬೇಕು ಅಂತ ಕೇಳುತ್ತಿದ್ದಾರೆ.  ಆದರೆ ಯಾರಿಗೆ ಆಕ್ಸಿಜನ್ ಬೇಕಾಗಿದೆ ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಅವರಿಗೆ ನೀಡಿದರೆ ಸಮಸ್ಯೆ ಕಡಿಮೆಯಾಗುತ್ತದೆ ಎಂದರು. 

ಸಮಯ ಪ್ರಜ್ಞೆ: 21 ಸೋಂಕಿತರ ಜೀವ ಉಳಿಸಿದ ವೈದ್ಯರು .

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗ ತನಿಖಾಧಿಕಾರಿಗಳನ್ನು ನೇಮಿಸಿ ವಿಚಾರಣೆಗೆ ಆದೇಶಿಸಿದೆ. ವಿಚಾರಣೆಯ ಬಳಿಕ ಸರ್ಕಾರವೇ ಈ ಬಗ್ಗೆ ಕ್ರಮ ಕೈಗೋಳ್ಳಲಿದೆ. ಆಕ್ಸಿಜನ್ ಸಮಸ್ಯೆ ಬಗ್ಗೆ ಸರ್ಕಾರವೇ ಸಚಿವರಿಗೆ ಹೊಣೆ ನೀಡಿದೆ. ಶೀಘ್ರವಾಗಿ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios