'ಕೇಂದ್ರ, ರಾಜ್ಯ ಸರ್ಕಾರ ಜನರ ಹಿತ ಕಾಪಾಡಿದೆ'

ಅಲೆಮಾರಿ ಸಮುದಾಯದವರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ ವಿತರಣೆಗೆ ಚಾಲನೆ| ಲಾಕ್‌ಡೌನ್‌ ಸಂಕಷ್ಟದಲ್ಲಿ ಇರುವ ಬಡವರಿಗೆ ಪ್ರತಿಯೊಬ್ಬರೂ ಸಹಾಯ, ಸಹಕಾರ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು| 

Taluk Panchayat Member Sharanappa Iragera talks Over Central and State Government

ಯಲಬುರ್ಗಾ(ಮೇ.20): ದೇಶದೆಲ್ಲೆಡೆ ಕೊರೋನಾ ವೈರಸ್‌ನಿಂದ ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿವೆ ಎಂದು ತಾಲೂಕು ಪಂಚಾಯತ್‌ ಸದಸ್ಯ ಶರಣಪ್ಪ ಇಳಗೇರ ಹೇಳಿದ್ದಾರೆ.

ತಾಲೂಕಿನ ತುಮ್ಮರಗುದ್ದಿ ಗ್ರಾಪಂ ಆವರಣದಲ್ಲಿ ಮಂಗಳವಾರ ತಾಲೂ​ಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಸಮುದಾಯದವರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಲಾಕ್‌ಡೌನ್‌ ಸಂಕಷ್ಟದಲ್ಲಿ ಇರುವ ಬಡವರಿಗೆ ಪ್ರತಿಯೊಬ್ಬರೂ ಸಹಾಯ, ಸಹಕಾರ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

'ಅಧ್ಯಕ್ಷ ಗಾದಿಯಲ್ಲಿ ಉಳಿಯಲು ಸರ್ಕಾರ ಟೀಕಿಸು​ತ್ತಿ​ರು​ವ ಡಿ.ಕೆ. ಶಿವಕುಮಾರ'

ಎಲ್ಲವನ್ನು ಸರಕಾರವೇ ಮಾಡಬೇಕೆಂದರೆ ಆಗದು, ಭಗವಂತ ಸಂಪತ್ತು ಕೊಟ್ಟಾಗ ನಾವೆಲ್ಲರೂ ಬಡವರಿಗೆ, ನಿರ್ಗತಿಕರಿಗೆ, ಅನಾಥರಿಗೆ ಏನನ್ನಾದರೂ ಸಹಾಯ ಸಹಕಾರ ಮಾಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕು, ಅಂದಾಗ ಜೀವನದಲ್ಲಿ ಪುಣ್ಯ ಬರುತ್ತದೆ ಎಂದು ಹೇಳಿದರು.

ಪಿಡಿಒ ರವಿಕುಮಾರ ಲಿಂಗಣ್ಣನವರ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಲಿಕಾರ್ಮಿಕರಿಗೆ ಜನಧನ್‌, ಉದ್ಯೋಗ ಖಾತ್ರಿ ಯೋಜನೆ, ರೈತರಿಗೆ ಸಮ್ಮಾನ ಯೋಜನೆ ಮೂಲಕ ರೈತರ ಖಾತೆಗೆ ಹಣ ಪಾವತಿ, ಕೂಲಿಕಾರ್ಮಿಕರಿಗೆ ವೇತನ ಸೇರಿದಂತೆ ಅನೇಕ ಯೋಜನೆಗಳನ್ನು ನೀಡುವ ಮೂಲಕ ಜನರ ಸಂಕಷ್ಟಕ್ಕೆ ನಿತ್ಯ ಸ್ಪಂದಿಸುತ್ತಿವೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಸವರಾಜ ಹಳ್ಳದ, ದುರಗಪ್ಪ ಹಿರೇಮನಿ, ಬಸಪ್ಪ ಹಳ್ಳದ, ದುರಗಪ್ಪ ನಡುವಲಮನಿ, ರಾಜಪ್ಪ ಚನ್ನದಾಸರ, ಬಿಲ್‌ ಕಲೆಕ್ಟರ್‌ ಲಕ್ಷ್ಮಣ ಹರಿಜನ್‌ ಮತ್ತಿತರರು ಇದ್ದರು.
 

Latest Videos
Follow Us:
Download App:
  • android
  • ios