ಮದ್ದೂರು(ಮೇ 21): ಕೋವಿಡ್‌ ಪರೀಕ್ಷೆ ಮಾಡಿಸದ ಕಾರಣ ಶವವನ್ನು ತಾಲೂಕು ಆಡಳಿತ ವಾಪಸ್‌ ಕಳುಹಿಸಿದೆ. ತಾಲೂಕಿನ ಕೋಡಿಹಳ್ಳಿಯ ಗ್ರಾಮದ ಇಂದುಮತಿ ಬೆಂಗಳೂರಿನಲ್ಲಿ ಮೃತ ಪಟ್ಟಿದ್ದರು.

ಬೆಂಗಳೂರಿನ ಚಾಮರಾಜಪೇಟೆಯ ಲೀಲಾವತಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದ ಮಹಿಳೆ ಶವವನ್ನು ಸ್ವಗ್ರಾಮಕ್ಕೆ ಕುಟುಂಬಸ್ಥರು ತಂದಿದ್ದರು. ಶವವನ್ನು ಕೋವಿಡ್‌ ಟೆಸ್ವ್‌ ಮಾಡಿಸಿ ನಂತರ ಜಿಲ್ಲೆಗೆ ಬರುವಂತೆ ನಿಡಘಟ್ಟಚೆಕ್‌ಪೋಸ್ವ್‌ನಲ್ಲಿ ಪೊಲೀಸ್‌ ಮತ್ತು ಆರೋಗ್ಯಾಧಿಕಾರಿಗಳು ತಡೆದಿದ್ದರು.

ಹೊಟ್ಟೆತುಂಬಿಸಿಕೊಳ್ಳಲು ಹೋಗಿ, ಜೀವ ಉಳಿಸಿಕೊಳ್ಳಲು ಬಂದೆವು: ಮುಂಬೈ ವಲಸಿಗರ ಅಳಲು

ಕುಟುಂಬಸ್ಥರು ಅಧಿಕಾರಿಗಳ ಕಣ್ತಪ್ಪಿಸಿ ಸ್ವಗ್ರಾಮ ಕೆ.ಕೋಡಿಹಳ್ಳಿಗೆ ಶವವನ್ನು ತಂದಿದ್ದರು. ಈ ವಿಷಯ ತಿಳಿದ ತಾಲೂಕು ಆಡಳಿತ ಶವವನ್ನು ರಾಮನಗರ ಜಿಲ್ಲೆ ಗಡಿಭಾಗದ ಹೊರಗೆ ಕಳುಹಿಸಿದೆ.