Asianet Suvarna News Asianet Suvarna News

ಸಚಿವ ಎಂ.ಬಿ.ಪಾಟೀಲ-ಯತ್ನಾಳ್‌ ನಡುವೆ ಟಿಪ್ಪು ವಾಕ್ಸಮರ

ಸಿದ್ದರಾಮಯ್ಯ ಅವರನ್ನು ಎರಡನೇ ಟಿಪ್ಪು ಸುಲ್ತಾನ್ ಎಂದು ಹೇಳುತ್ತಿರುವ ಇದೇ ಯತ್ನಾಳ್‌ ಈ ಹಿಂದೆ ಟಿಪ್ಪು ಸುಲ್ತಾನ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳು ನನ್ನ ಬಳಿ ಇವೆ. ಹೀಗಾಗಿ, ಯತ್ನಾಳ್‌ ಅವರೇ ಮೂರನೇ ಟಿಪ್ಪು ಎನ್ನಲು ನನ್ನಲ್ಲಿ ಫೋಟೋ ದಾಖಲೆಗಳಿವೆ ಎಂದು ವಾಗ್ದಾಳಿ ನಡೆಸಿದ ಸಚಿವ ಎಂ.ಬಿ. ಪಾಟೀಲ್‌ 
 

Talk War Between Minister MB Patil and Basanagouda Patil Yatnal on Tipu Sultan Issue grg
Author
First Published Dec 26, 2023, 5:20 AM IST

ವಿಜಯಪುರ(ಡಿ.26): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್‌’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಯತ್ನಾಳ್‌ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರು, ಸಿದ್ದರಾಮಯ್ಯ ಅವರನ್ನು ಎರಡನೇ ಟಿಪ್ಪು ಸುಲ್ತಾನ್ ಎಂದು ಹೇಳುತ್ತಿರುವ ಇದೇ ಯತ್ನಾಳ್‌ ಈ ಹಿಂದೆ ಟಿಪ್ಪು ಸುಲ್ತಾನ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳು ನನ್ನ ಬಳಿ ಇವೆ. ಹೀಗಾಗಿ, ಯತ್ನಾಳ್‌ ಅವರೇ ಮೂರನೇ ಟಿಪ್ಪು ಎನ್ನಲು ನನ್ನಲ್ಲಿ ಫೋಟೋ ದಾಖಲೆಗಳಿವೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ: ಮಾಜಿ ಕಾರಜೋಳ

ಈ ಮಧ್ಯೆ, ಯತ್ನಾಳ್‌ ಮೂರನೇ ಟಿಪ್ಪು ಎಂಬ ಸಚಿವರ ಹೇಳಿಕೆಗೆ ಕಿಡಿ ಕಾರಿರುವ ಯತ್ನಾಳ್‌ ಅವರು, ಸಚಿವ ಎಂ.ಬಿ.ಪಾಟೀಲ ಅವರೇ ನಾಲ್ಕನೇ ಟಿಪ್ಪು ಸುಲ್ತಾನ್ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios