ಮಂಡ್ಯ [ಸೆ.09]: ಮಂಡ್ಯದಲ್ಲಿ ಹಾಲಿ ಹಾಗೂ ಮಾಜಿ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. 

ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರವಾಸೋದ್ಯಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಲಿ ಪ್ರವಾಸೋದ್ಯಮ ಸಚಿವ ಸಚಿವ ಸಿ.ಟಿ.ರವಿ ಹಾಗೂ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ನಡುವೆ  ಜಟಾಪಟಿ ನಡೆದಿದೆ. 

14 ತಿಂಗಳಿ ನಮಗೆ ಕೆಲಸ ಮಾಡಲು ಎಲ್ಲಿ ಬಿಟ್ರಿ ಸ್ವಾಮಿ. ಸರ್ಕಾರ ಆಗ ಬೀಳುತ್ತೆ. ಈಗ ಬೀಳುತ್ತೆ ಎಂದೇ ಹೇಳುತ್ತಿದ್ದರಿ ಎಂದ ಪುಟ್ಟರಾಜು ಮಾತಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಕುಣಿಯಲಾರದವಳು ನೆಲ ಡೊಂಕು ಎಂದರಂತೆ ಎಂದರು . 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಪುಟ್ಟರಾಜು ಕೂಡ ತಿರುಗೇಟು ನೀಡಿದ್ದು, ಇದು ರಾಜಕೀಯ ಮಾಡುವ ವೇದಿಕೆಯಲ್ಲ. ಬೇಗ ಬೇಗ ಕೆಲಸ ಮಾಡಿ ಎಂದರು. ಇದಕ್ಕೂ ಪ್ರತಿಕ್ರಿಯಿಸಿದ ಸಿಟಿ ರವಿ, ರಾಜಕೀಯ ಮಾಡಬೇಕು ಎಂದರೆ ಮಾಡೋಣ. ಅಂಜಿಕೊಂಡು ಹೋಗುವ ವ್ಯಕ್ತಿ ನಾನಲ್ಲ ಎಂದರು.

ಇದೇ ರೀತಿ ಪ್ರಗತಿ ಪರಿಶೀಲನಾ ಸಭೆಯೂ ಮಾಜಿ ಹಾಗೂ ಹಾಲಿ ಸಚಿವರಿಬ್ಬರ ನಡುವಿನ ಜಟಾಪಟಿಗೆ ಕಾರಣವಾಯ್ತು.