ಹಾಸನ [ಮಾ.14]: ಹಾಸನ ಜಿಲ್ಲಾ ಪಂಚಾಯಿತಿ ಸಭೆ ನಡೆಸಲು ಬಿಡುತ್ತಿಲ್ಲ ಎಂದು ಜಿಪಂ ಅಧ್ಯಕ್ಷೆ ಮಾಡಿದ ಆರೋಪವು ಸದನದಲ್ಲಿ ಪ್ರತಿಧ್ವನಿಸಿದ್ದು, ‘ಸಭೆ ನಡೆಸಿ ಕೊಡಪ್ಪ’ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಅವರನ್ನು ವಿನಂತಿಸಿಕೊಂಡ ಪ್ರಸಂಗ ನಡೆಯಿತು.

ಶುಕ್ರವಾರ ಸಂವಿಧಾನ ಮೇಲೆ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಮಾತನಾಡುತ್ತಿದ್ದ ವೇಳೆ ‘ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತು ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿದಂತೆ’ ಎಂದು ಹೇಳಿದರು. ಮಧ್ಯಪ್ರವೇಶಿಸಿದ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ಹಾಸನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಹೆಣ್ಣು ಮಗಳು ಸಭೆ ನಡೆಸಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ನೀವು ಇಲ್ಲಿ ನಿಂತು ಮೀಸಲಾತಿ ಕೊಡಿ ಎಂದರೆ ಯಾರು ಕೇಳುತ್ತಾರೆ’ ಎಂದು ಕಿಚಾಯಿಸಿದರು. 

'ಬೆಳಗಾವಿ ರಾಜಕಾರಣಕ್ಕೂ ಡಿಕೆಶಿಗೂ ಸಂಬಂಧ ಇಲ್ಲ!'..

ತಕ್ಷಣ ರೇವಣ್ಣ ಅವರು ‘ಮೀಸಲಾತಿ ಇಲ್ಲದಿರುವ ಅವಧಿಯಲ್ಲಿ ಹಾಸನ ಜಿಪಂನಲ್ಲಿ ಪರಿಶಿಷ್ಟರಿಗೆ ಮತ್ತು ಚಿಕ್ಕಮಗಳೂರು ಜಿಪಂನಲ್ಲಿ ಹಿಂದುಳಿದ ವರ್ಗಕ್ಕೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಸಭೆಗೆ ಅವರ ಪಕ್ಷದವರೇ (ಕಾಂಗ್ರೆಸ್) ಹೋಗಿ ಲ್ಲವೆಂದರೆ ನಾನೇನು ಮಾಡಲಿ’ ಎಂದರು. ಆಗ ಮಾಧುಸ್ವಾಮಿ ಅವರು, ಕಾಂಗ್ರೆಸ್‌ನವರತ್ತ ತಿರುಗಿ ನೀವೇ ನಮ್ಮ ರಕ್ಷಣೆಗೆ ಬರಬೇಕು ಎಂದರು. ತಕ್ಷಣ ರೇವಣ್ಣ, ನಾವು ಮತ್ತು ಅವರು ಸೇರಿ ನಿಮ್ಮನ್ನು ಎದುರಿಸುತ್ತೇವೆ ಎಂದು ಹೇಳಿದರು. 

ಆಗ ಮಾಧುಸ್ವಾಮಿ ಅವರು, ಎದುರಿಸುವುದು ಬೇಕಿಲ್ಲ. ಒಂದು ಸಭೆ ನಡೆಸಿಕೊಡಪ್ಪ ಸಾಕು. ಮೂರು ತಿಂಗಳು ಆಯ್ತು ಒಂದು ಸಭೆ ನಡೆದಿಲ್ಲ ಎಂದು ಮನವಿ ರೂಪದಲ್ಲಿ ಹೇಳಿದರು. ಇದ ಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಯಾವುದೋ ಕಾರ್ಯಕ್ರಮ ಇ ದ್ದ ಕಾರಣ ಯಾರು ಹೋಗಿಲ್ಲ. ನೀವೇ ಉಸ್ತುವಾರಿ ಸಚಿವರಲ್ಲವೇ ಎಂದು ಮೀಸಲಾತಿ ಕುರಿತು ಮಾತು ಮುಂದುವರಿಸಿದರು.