ಹಾಸನ, [ಜ.16]: ಸೂಪರ್ ಸಿಎಂ ಎಂದೇ ಬಿಂಬಿತರಾಗಿರುವ ಸಚಿವ ಎಚ್.ಡಿ. ರೇವಣ್ಣ ಅವರು ಅಧಿಕಾರಿಗಳ ಸಭೆಯಲ್ಲಿ ಮತ್ತೆ ರೇಗಾಡಿರುವ ಪ್ರಸಂಗ ನಡೆದಿದೆ.

ಇಂದು [ಬುಧವಾರ] ಹಾಸನ ಜಿಲ್ಲಾ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಲೋಕೋಪಯೋಗಿ ಸಚಿವ ರೇವಣ್ಣ ನಡುವೆ ಟಾಕ್ ವಾರ್ ನಡೆದಿದೆ.

ಸಚಿವ ರೇವಣ್ಣ ಪುತ್ರ ಪ್ರಜ್ವಲ್‌ಗೆ ಕಾದಿದೆಯಾ ‘ಡೀಸಿ’ ಬಿಸಿ?

ಕೂಲ್ ಆಗಿಯೇ ಡಿಸಿ ರೋಹಿಣಿ ಸಿಂಧೂರಿ ಗೆ ಕ್ಲಾಸ್ ತೆಗೆದುಕೊಂಡ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಅವರು, ಒಂದು ನಾಲ್ಕು ಜನ ತಹಸಿಲ್ದಾರ್ ರನ್ನ ಸಸ್ಪೆಂಡ್ ಮಾಡಿ.

ಡಿಸಿ ಬರ್ತಾರೆ ಅಂದ್ರೆ ಅಧಿಕಾರಿಗಳು ನಡುಗಬೇಕು ಹಂಗಿರಬೇಕು ನಮ್ಮ ಜಿಲ್ಲೆ. ರಾಜ್ಯದ ಚೀಫ್ ಸೆಕ್ರೇಟರಿ, ಫೈನಾನ್ಸ್  ಸೆಕ್ರೇಟ್ರಿ ಎಲ್ಲಾ ನಿಮ್ಮ‌ ಡಿಸಿ ಡೈನಾಮಿಕ್ ಹಂಗೆ ಹಿಂಗೆ ಅಂತಾರೆ. ಇಲ್ನೋಡಿದ್ರೆ ಹಿಂಗೆ ಎಂದು  ಮಾತಿನಲ್ಲೇ ಕುಟುಕಿದ್ದಾರೆ.

 ದಿನಾ ಬಂದು ಜನ ನಮ್ಮನೆ‌ ಮುಂದೆ ನಿಲ್ತಾರೆ. ನಿಮ್ಮ ಅಧಿಕಾರಿಗಳು ಏನು ಮಾಡ್ತಿದ್ದಾರೆ ಎಂದು ಡಿಸಿಗೆ ಕ್ಲಾಸ್ ತೆಗೆದುಕೊಂಡರು. ಎಲ್ಲ ಕಳ್ಳರನ್ನ ಸಸ್ಪೆಂಡ್ ಮಾಡುತ್ತಾ ಕೂತ್ರೆ ಯಾರೂ ಇರಲ್ಲ ಎಂದು ಸಚಿವರಿಗೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ.

ಇದಕ್ಕೆ ಗರಂ ಆದ ರೇವಣ್ಣ  ಮೇಡಂ ಎಲ್ಲರನ್ನೂ ಸಸ್ಪೆಂಡ್ ಮಾಡಿ ಎಂದು ನಾನು‌ ಹೇಳಿದ್ದಲ್ಲ,ಅವರಿಗೆ ಚುರುಕು ಮುಟ್ಟಿಸಿ ಎಂದರು. ಕೆಲಸ ನಡೆಯುತ್ತಿದೆಯಲ್ಲಾ. ಮೂರು ತಿಂಗಳಿಂದ ನಾಲ್ಕು ತಹಶಿಲ್ದಾರರನ್ನ ಕೇಳುತ್ತಿದ್ದೇವೆ ಕೊಟ್ಟಿಲ್ಲ ಎಂದು ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆ ಕೆಲಸ ತೊಂದರೆಗೆ ಸರ್ಕಾರವೇ ಕಾರಣ ಎನ್ನೋ ರೀತಿಯಲ್ಲಿ ರೋಹಿಣಿ ಸಿಂಧೂರಿ ಪ್ರತ್ಯುತ್ತರ ನೀಡಿದ್ದಾರೆ.