ತಾಳಗುಪ್ಪಾದಿಂದ - ಸಿದ್ದಾಪುರ - ಶಿರಸಿ - ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಟೆಂಡರ್ ಪೂರ್ಣ/ ಮಾಹಿತಿ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ/ ಸಾರ್ವಜನಿಕರ ಸಹಕಾರಕ್ಕೆ ಕೋರಿಕೆ

ಬೆಂಗಳೂರು/ ಶಿರಸಿ(ಜ. 29) ತಾಳಗುಪ್ಪಾದಿಂದ - ಸಿದ್ದಾಪುರ - ಶಿರಸಿ - ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಕಾರ್ಯದ ಟೆಂಡರ್ ಪ್ರಕ್ರಿಯೆ ಇಂದು ಪೂರ್ಣಗೊಂಡಿದ್ದು, ಒಮೇಗಾ ಅನಾಲೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಇವರಿಗೆ ಟೆಂಡರ್ ಆಗಿರುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸರ್ವೇ ಪ್ರಕ್ರಿಯೆಯಲ್ಲಿ ಯೋಜನೆಯ ವೆಚ್ಚ, ಯೋಜನೆಗೆ ಬೇಕಾಗುವ ಭೂಮಿಯ ಅವಶ್ಯಕತೆ, ಅವಶ್ಯವಿರುವ ರೈಲ್ವೇ ಸ್ಟೇಷನ್ ಗಳ ಸಂಖ್ಯೆ, ರೈಲ್ವೇ ಮಾರ್ಗ ಜೋಡಣೆ ಹಾಗೂ ಇನ್ನಿತರ ಅಂಶವು ಒಳಗೊಂಡಿರುತ್ತದೆ‌. ಈ ಸರ್ವೇ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಕೇಂದ್ರ ರೈಲ್ವೇ ಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ. ಯೋಜನೆ ಅನುಷ್ಠಾನ ಹಂತದಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿ ಕೋರುತ್ತಿದ್ದೇನೆ ಎಂದು ಶಿರಸಿ ಸಿದ್ದಾಪುರ ಶಾಸಕರಾಗಿರುವ ಕಾಗೇರಿ ಮನವಿ ಮಾಡಿಕೊಂಡಿದ್ದಾರೆ. 

ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣಕ್ಕೆ ರೈಲು..ಲಾಭಗಳು ಒಂದೇ-ಎರಡೇ

ಈ ಮಾರ್ಗ ವಿಸ್ತರಣೆ ಬಹುದಿನಗಳ ಬೇಡಿಕೆಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಭಾಗಕ್ಕೆ ರೈಲಲ್ವೆ ಸಂಪರ್ಕ ಇನ್ನುವರೆಗೆ ಕನಸಾಗಿಯೇ ಉಳಿದುಕೊಂಡಿದೆ. ಈ ಮಾರ್ಗ ಪ್ರಗತಿಯಾದರೆ ಬೇಡಿಕೆ ನೆರವೇರಲಿದೆ. ಇನ್ನೊಂದು ಕಡೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಸಹ ಬಹಳ ವರ್ಷದಿಂದ ಚರ್ಚೆಯಲ್ಲಿದೆ .