Asianet Suvarna News Asianet Suvarna News

ಅ.17ಕ್ಕೆ ತಲಕಾವೇರಿಯಲ್ಲಾಗಲಿದೆ ತೀರ್ಥೋದ್ಭವ : ಪ್ರವೇಶವಿಲ್ಲ

ಇದೇ 17 ರಂದು ತಲಕಾವೇರಿಯಲ್ಲಿ  ತೀರ್ತೋದ್ಬವವಾಗಲಿದ್ದು ಆದರೆ ಯಾವುದೇ ಭಕ್ತರಿಗೆ ಇಲ್ಲಿ ಪ್ರವೇಶ ಕಲ್ಪಿಸಲಾಗುವುದಿಲ್ಲ. 

Talacauvery Tirtodbava No Entry For Devotees snr
Author
Bengaluru, First Published Oct 14, 2020, 7:43 AM IST
  • Facebook
  • Twitter
  • Whatsapp

ಮಡಿಕೇರಿ (ಅ.14): ಅ.17ರಂದು ಬೆಳಗ್ಗೆ 7.03ಕ್ಕೆ ಪವಿತ್ರ ಕಾವೇರಿ ತೀರ್ಥೋದ್ಭವ ಸಂಭ​ವಿ​ಸ​ಲಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಜನದಟ್ಟಣೆ ನಿಯಂತ್ರಣ ಉದ್ದೇಶದಿಂದ ತೀರ್ಥೋದ್ಭವ ಮುಹೂರ್ತದ ಸಂದರ್ಭದಲ್ಲಿ ಸೀಮಿತ ವ್ಯಕ್ತಿಗಳಿಗಷ್ಟೇ ಅವಕಾಶ ನೀಡಲಾಗುವುದು. 

ತೀರ್ಥೋದ್ಭವ ಮುಗಿದ ಬಳಿಕವಷ್ಟೇ ಭಕ್ತರಿಗೆ ದೇವಾಲಯ ಪ್ರವೇಶ ನೀಡಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ. ತೀರ್ಥೋದ್ಭವ ವೇಳೆ 35 ಸ್ವಯಂ ಸೇವಕರು, ದೇವಾಲಯ ಸಮಿತಿ ಸದಸ್ಯರು, ಆಯ್ದ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 

ಜೀವ ನದಿ ಕಾವೇರಿಗೆ ‘ವಿಷಪೂರಿತ ನೀರು’! ...

ಬಳಿಕ ಎಂದಿನಂತೆ ಪೂಜಾ ಕಾರ್ಯ ಭಕ್ತರು ಮಾಡಬಹುದು. ಅರ್ಚಕರು ಮತ್ತು ಸ್ವಯಂ ಸೇವಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios