ತಲಕಾವೇರಿ ಅರ್ಚಕರ ದುರ್ಮರಣ : ಪರಿಹಾರ ವಿಚಾರಕ್ಕೆ ಭಿನ್ನಾಭಿಪ್ರಾಯ

ಗುಡ್ಡ ಕುಸಿದು ತಲಕಾವೇರಿ ಅರ್ಚಕರು ಮೃತಪಟ್ಟ ವಿಚಾರಕ್ಕೆ ಸಂಬಮಧಿಸಿದಂತೆ ಇದೀಗ ಕುಟುಂಬಸ್ಥರ ನಡುವೆ ಪರಿಹಾರದ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.

Talacauvery Priest Death Deference Of Opinion in Family Over Compensation

ಕೊಡಗು (ಸೆ.01):  ನಾರಾಯಣ ಆಚಾರ್‌ ಅವರ ಪರಿಹಾರ ವಿಚಾರದಲ್ಲೂ ಸಾಕಷ್ಟುಚರ್ಚೆಯಾಗುತ್ತಿದೆ. ನಮ್ಮ ಸಂಸ್ಕೃತಿಯ ಪ್ರಕಾರ ಹೆಣ್ಣುಮಕ್ಕಳು ಬೇರೆ ಕುಟುಂಬಕ್ಕೆ ಮದುವೆಯಾದ ನಂತರ ಗಂಡನ ಮನೆಯ ಕುಟುಂಬದ ಹೆಸರನ್ನು ಹೊಂದುತ್ತಾರೆ ಎಂದು ಆಚಾರ್‌ ಕುಟುಂಬದ ವಕ್ತಾರ ಜಯಪ್ರಕಾಶ್‌ ರಾವ್‌ ಸ್ಪಷ್ಟಪಡಿಸಿದ್ದಾರೆ.

ಅವರು ಆಚಾರ್‌ ಕುಟುಂಬದ ಒಳಗೆ ಬರುವುದಿಲ್ಲ. ನಾರಾಯಾಣ ಆಚಾರ್‌ ಪುತ್ರಿಯರು ಅನ್ಯಧರ್ಮಿಯರನ್ನು ವಿವಾಹವಾಗಿದ್ದರೂ ಹಿಂದೂ ಧರ್ಮದ ಆಚಾರ-ವಿಚಾರವನ್ನು ಪಾಲಿಸುತ್ತಾ ಬಂದಿದ್ದಾರೆ. ಇದನ್ನು ಕುಟುಂಬಸ್ಥರಾದ ನಾವೇ ನೋಡಿಕೊಳ್ಳುತ್ತೇವೆ. 

ತಲ​ಕಾ​ವೇರಿ ಅರ್ಚಕರ ಪುತ್ರಿಯರು ಮತಾಂತರ, ಬದಲಾದ ಹೆಸರು:​ ಚೆಕ್‌ ವಾಪ​ಸ್‌...

ಹೊರಗಿನವರು ಈ ವಿಚಾರದಲ್ಲಿ ತಲೆಹಾಕುವುದು ಸರಿಯಲ್ಲ. ಆದರೂ ಯಾರಿಗೆ ಭಾದ್ಯತೆ ಇರುತ್ತದೋ ಅವರಿಗೆ ಸರ್ಕಾರದ ಪರಿಹಾರ ಸಿಗಲಿ. ಆ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಆನಂದತೀರ್ಥ ಅವರ ಸಹೋದರಿ ಸುಶೀಲ ಅವರಿಗೆ ವಯಸ್ಸಾಗಿದ್ದು, ಅವರಿಗೆ ಪರಿಹಾರ ನೀಡುವ ಬಗ್ಗೆಯೂ ನಮ್ಮ ತಕರಾರಿಲ್ಲ ಎಂದು ಜಯಪ್ರಕಾಶ್‌ ರಾವ್‌ ಸ್ಪಷ್ಟಪಡಿಸಿದರು.

  ಮೃತ ತಲಕಾವೇರಿ ಅರ್ಚಕರ ವಿರುದ್ಧ ಗಂಭೀರ ಆರೋಪ : ಕುಟುಂಬ ಹೇಳೋದೆ ಬೇರೆ...
ತಲಕಾವೇರಿ ಗಜಗಿರಿ ಗುಡ್ಡ ಕುಸಿದು ಮೃತಪಟ್ಟನಾರಾಯಣಾಚಾರ್‌ ಚಾರಿತ್ರ್ಯಹರಣ ಮಾಡಲಾಗಿದ್ದು, ಪ್ರಧಾನ ಅರ್ಚಕರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಚಾರ್‌ ಕುಟುಂಬದ ವಕ್ತಾರ ಜಯಪ್ರಕಾಶ್‌ ರಾವ್‌ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನವರ ಆಮಂತ್ರಣದ ಮೇರೆಗೆ 300 ವರ್ಷಗಳ ಹಿಂದೆ ಆಚಾರ್‌ ಕುಟುಂಬದವರು ಕೊಡಗು ಜಿಲ್ಲೆಗೆ ಆಗಮಿಸಿ ತಲಕಾವೇರಿ ಪೂಜಾ ಕೈಂಕಾರ್ಯವನ್ನು ನೆರವೇರಿಸುತ್ತಾ ಬಂದಿದ್ದೆವು. ಕಳೆದ ಆ. 5ರಂದು ರಾತ್ರಿ ಸಂಭವಿಸಿದ ಗುಡ್ಡ ಕುಸಿತದಿಂದ ತಲಕಾವೇರಿಯ ಅರ್ಚಕರಾಗಿದ್ದ ನಾರಾಯಣ ಆಚಾರ್‌ ಕುಟುಂಬದ ಮೂವರು ಸೇರಿದಂತೆ ಐವರು ಭೂಸಮಾಧಿಯಾಗಿರುವುದು ಕುಟುಂಬಕ್ಕೆ ಹಾಗೂ ನಾಡಿನ ಭಕ್ತಾದಿಗಳಿಗೆ ದುಃಖ ತಂದಿದೆ. ಆದರೆ, ಇಂತಹ ಸಂದರ್ಭದಲ್ಲೂ ಕೆಲವರು ನಾರಾಯಣ ಆಚಾರ್‌ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಏನಿದು ನಾರಾಯಣ ಆಚಾರ್‌ ಪುತ್ರಿಯರ ಮತಾಂತರ ವಿವಾದ?

"

ಪರಿಹಾರಕ್ಕಾಗಿ ಕುಟುಂಬ ಕಲಹ: ಚಿಕ್ಕಪ್ಪನ ಪರಿಹಾರ ಅರ್ಚಕರ ಪುತ್ರಿಯರಿಗ್ಯಾಕೆ ಬೇಕು?

"

Latest Videos
Follow Us:
Download App:
  • android
  • ios