Asianet Suvarna News Asianet Suvarna News

ತಲಕಾವೇರಿ ಜಾತ್ರೆಗೆ ಬರುವವರಿಗೆ ಸ್ನಾನಕ್ಕಿಲ್ಲ ಅವಕಾಶ

ತಲಕಾವೇರಿಯಲ್ಲಿ ತಿರ್ತೋದ್ಭವಕ್ಕೆ ಆಗಮಿಸುವವರಿಗೆ ಈ ಬಾರಿ ಸ್ನಾನಕ್ಕೆ ಅವಕಾಶ ನೀಡುವುದಿಲ್ಲ.

Talacauvery   Fest COVID Test Mandatory For Devotees  snr
Author
Bengaluru, First Published Oct 4, 2020, 7:54 AM IST
  • Facebook
  • Twitter
  • Whatsapp

 ಮಡಿಕೇರಿ (ಅ.04):  ಅ.17ರಂದು ತಲಕಾವೇರಿಯಲ್ಲಿ ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ತೀರ್ಥೋದ್ಭವ ಜರುಗಲಿದ್ದು, ಈ ವೇಳೆ ಭಕ್ತರು ತಲಕಾವೇರಿಯ ಬ್ರಹ್ಮ ಕುಂಡಿಕೆ ಮುಂಭಾಗದ ಕಲ್ಯಾಣಿಯಲ್ಲಿ ತೀರ್ಥಸ್ನಾನಕ್ಕೆ ಅವಕಾಶ ಇಲ್ಲ. ಜಾತ್ರೆಗೆ ಬರುವವರಿಗೆ ಕೋವಿಡ್‌ ರಿಪೋರ್ಟ್‌ ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ನಿರ್ದೇಶಿಸಿದ್ದಾರೆ.

ತಲಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಲಕಾವೇರಿಗೆ ಬರುವವರು ಕೋವಿಡ್‌ ಪರೀಕ್ಷೆಯ ವರದಿ ತರಬೇಕು. ವರದಿ ನೋಡಿ ಒಳಗೆ ಬಿಡುತ್ತೇವೆ. ಹೆಚ್ಚು ಜನ ಸೇರಿದಾಗ ಸೋಂಕು ಹರಡುತ್ತದೆ. ಹೀಗಾಗಿ ಸರಳವಾಗಿ ಜಾತ್ರೆ ಆಚರಣೆ ಮಾಡಬೇಕು. ತೀರ್ಥೋದ್ಭವ ವೇಳೆ ಕಡಿಮೆ ಜನರಿಗೆ ಮಾತ್ರ ಅವಕಾಶ. ಬ್ರಹ್ಮ ಕುಂಡಿಕೆ ಮುಂಭಾಗದ ಕಲ್ಯಾಣಿಯಲ್ಲಿ ತೀರ್ಥಸ್ನಾನಕ್ಕೆ ಅವಕಾಶ ಇರುವುದಿಲ್ಲ. ತೀರ್ಥೋದ್ಭವ ಬಳಿಕ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡುತ್ತಾರೆ ಎಂದರು.

ಘನ ವಾಹನಗಳ ಪ್ರವೇಶವಿಲ್ಲ:

ಈಗಾಗಲೇ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಬೆಟ್ಟಕುಸಿದಿರುವುದರಿಂದ ತಲಕಾವೇರಿಗೆ ದೊಡ್ಡ ವಾಹನಗಳಿಗೂ ಅವಕಾಶ ನೀಡುವುದಿಲ್ಲ. ತೀರ್ಥೋದ್ಭವದ ಪೂಜಾ ವಿಧಿ ವಿಧಾನಗಳಿಗೆ ಯಾವುದೇ ಅಪಚಾರ ಆಗದಂತೆ ಸಾಂಕೇತಿಕವಾಗಿ ಪೂಜೆ ನೆರವೇರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ದಿನೇ ದಿನೆ ಕೊರೋನಾ ಸಂಖ್ಯೆ ಹೆಚ್ಚುತ್ತಿರುವುದರಿಂದ ತೀರ್ಥೋದ್ಭವಕ್ಕೆ ಮಕ್ಕಳು, ವೃದ್ಧರು ಬಾರದೆ ಇರುವುದು ಒಳಿತು ಎಂದು ಸಲಹೆ ನೀಡಿದರು.

ಸೂಚನೆಗಳು:

ಲೋಕೋಪಯೋಗಿ ಇಲಾಖೆ ವತಿಯಿಂದ ಭಾಗಮಂಡಲಕ್ಕೆ ಸೇರುವ ಎಲ್ಲ ರಸ್ತೆಗಳ ದುರಸ್ತಿ ಕಾರ್ಯವಾಗಬೇಕು. ಅಗತ್ಯ ಸ್ಥಳಗಳಲ್ಲಿ ನಾಮಫಲಕ ಅಳವಡಿಸಿ, ಸೇತುವೆಗಳಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಮತ್ತು ಅತೀ ಮುಖ್ಯವಾಗಿ ಸೂಕ್ತ ರೀತಿಯಲ್ಲಿ ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್‌ ಅಳವಡಿಸುವ ಕಾರ್ಯವಾಗಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಾಗಮಂಡಲ- ತಲಕಾವೇರಿಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು. ಪ್ರಥಮ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕು. ದೇವಾಲಯ ವ್ಯವಸ್ಥಾಪನಾ ಸಮಿತಿಯವರು ತಲಕಾವೇರಿ ಕ್ಷೇತ್ರದಲ್ಲಿ ವಿದ್ಯುತ್‌ ಬೆಳಕಿನ ವ್ಯವಸ್ಥೆ ಮತ್ತು ಶಾಮಿಯಾನ ಆಸನದ ವ್ಯವಸ್ಥೆ, ಶಿಷ್ಟಾಚಾರ ವ್ಯವಸ್ಥೆ ಧ್ವನಿ ವರ್ಧಕದ ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವರು ತಿಳಿಸಿದರು.

ಮೃತ ತಲಕಾವೇರಿ ಅರ್ಚಕರ ವಿರುದ್ಧ ಗಂಭೀರ ಆರೋಪ : ಕುಟುಂಬ ಹೇಳೋದೆ ಬೇರೆ ...

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಭಾಗಮಂಡಲ ತಲಕಾವೇರಿ ಜಾತ್ರೆಯನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಹೇಗೆ ನಿಭಾಯಿಸಬೇಕಿದೆ ಎಂದು ಯೋಚಿಸಿ ಕಾರ್ಯನಿರ್ವಹಿಸಬೇಕು ಎಂದರು. ತಲಕಾವೇರಿ ಜಾತ್ರೆಗೆ ತೆರಳುವವರು ಕೋವಿಡ್‌-19 ಪರೀಕ್ಷೆ ಮಾಡಿಸಿಕೊಂಡು ಹೋಗಬೇಕು ಎಂದು ಶಾಸಕ ಅಪ್ಪಚ್ಚು ರಂಜನ್‌ ಸಲಹೆ ಮಾಡಿದರು.

ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್‌.ತಮ್ಮಯ್ಯ ಮಾತನಾಡಿ, ಪಿಂಡ ಪ್ರದಾನ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಲಾಗುವುದು. ಕೊಳದಲ್ಲಿ ತೀರ್ಥ ಸ್ನಾನ ಬದಲಾಗಿ ತೀರ್ಥ ಪ್ರೋಕ್ಷಣೆ ಮಾಡಲಾಗುವುದು. ಈ ಬಾರಿ ಅನ್ನದಾನಕ್ಕೆ ಅವಕಾಶವಿಲ್ಲ. ತೀರ್ಥವನ್ನು ಟ್ರಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾ​ಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿ.ಪಂ. ಸಿಇಒ ಭನ್ವರ್‌ ಸಿಂಗ್‌ ಮೀನಾ, ಹೆಚ್ಚುವರಿ ಜಿಲ್ಲಾಧಿ​ಕಾರಿ ಡಾ. ಸ್ನೇಹಾ, ಉಪ ವಿಭಾಗಾ​ಧಿಕಾರಿ ಈಶ್ವರ ಕುಮಾರ್‌ ಖಂಡು, ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್‌ ದೇವಯ್ಯ ಇತರರು ಇದ್ದರು.

Follow Us:
Download App:
  • android
  • ios