Asianet Suvarna News Asianet Suvarna News

ಆಡಳಿತದಲ್ಲಿ ಹಸ್ತಕ್ಷೇಪ ಇಲ್ಲದಿದ್ದಲ್ಲಿ ಪ್ರಮಾಣ ಮಾಡಿ: ಯೋಗೀಶ್ ಸವಾಲು

ತಾಲೂಕಿನ ಆಡಳಿತದಲ್ಲಿ ತಾವು ಹಸ್ತಕ್ಷೇಪ ಮಾಡುತ್ತಿಲ್ಲ ಎಂಬುದಾದಲ್ಲಿ ತಾವು ದೇವಾಲಯದಲ್ಲಿ ಪ್ರಮಾಣ ಮಾಡಿ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಹಾಗೂ ಕಳೆದ ಬಾರಿಯ ಕಾಂಗ್ರೆಸ್ ನ ವಿಧಾನಸಭಾ ಪರಾಜಿತ ಅಭ್ಯರ್ಥಿಯಾಗಿರುವ ಬೆಮೆಲ್‌ ಕಾಂತರಾಜ್ ಅವರಿಗೆ ತಾಲೂಕು ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಅರು ಸವಾಲು ಹಾಕಿದ್ದಾರೆ.

Take an oath on non-interference in governance: Yogesh Challenge snr
Author
First Published Oct 14, 2023, 8:13 AM IST

 ತುರುವೇಕೆರೆ ;  ತಾಲೂಕಿನ ಆಡಳಿತದಲ್ಲಿ ತಾವು ಹಸ್ತಕ್ಷೇಪ ಮಾಡುತ್ತಿಲ್ಲ ಎಂಬುದಾದಲ್ಲಿ ತಾವು ದೇವಾಲಯದಲ್ಲಿ ಪ್ರಮಾಣ ಮಾಡಿ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಹಾಗೂ ಕಳೆದ ಬಾರಿಯ ಕಾಂಗ್ರೆಸ್ ನ ವಿಧಾನಸಭಾ ಪರಾಜಿತ ಅಭ್ಯರ್ಥಿಯಾಗಿರುವ ಬೆಮೆಲ್‌ ಕಾಂತರಾಜ್ ಅವರಿಗೆ ತಾಲೂಕು ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಅರು ಸವಾಲು ಹಾಕಿದ್ದಾರೆ.

ತಾಲೂಕಿನ ಆಡಳಿತ ನಡೆಸುವಲ್ಲಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಅವಕಾಶ ನೀಡದೇ ವಿನಾ ಕಾರಣ ಬೆಮಲ್ ಕಾಂತರಾಜ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಾಲೂಕು ಮಟ್ಟದ ಹಲವಾರು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ತಮಗೆ ಬೇಕಾದವರನ್ನು ಇಲ್ಲಿ ಕೂರಿಸುತ್ತಿದ್ದಾರೆ ಎಂದು ವೆಂಕಟಾಪುರ ಯೋಗೀಶ್ ದೂರಿದರು.

ಈಗಾಗಲೇ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ವರ್ಗಾವಣೆ ಮಾಡಿಸಲಾಗಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೂ ಸಹ ವರ್ಗಾವಣೆ ಮಾಡಿಸಲಾಗಿದೆ. ಈಗ ತಹಸೀಲ್ದಾರ್ ಅವರನ್ನೂ ವರ್ಗಾವಣೆ ಮಾಡಿಸಿ ತಮಗೆ ಅನುಕೂಲ ಮಾಡುವ ಅಧಿಕಾರಿಗಳನ್ನು ಇಲ್ಲಿಗೆ ಹಾಕಿಸಿಕೊಳ್ಳಲಾಗಿದೆ ಎಂದು ದೂರಿದರು.

ಹೋರಾಟ-ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಬಗ್ಗೆ ಬೆಮಲ್ ಕಾಂತರಾಜ್ ಅವರು ಬಹಳ ಲಘುವಾಗಿ ಮಾತನಾಡಿದ್ದಾರೆ. ಹಲವಾರು ಮೊಕದ್ದಮೆಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೌದು ಇವೆಲ್ಲವೂ ಜನಸಾಮಾನ್ಯರ ಪರ ಮಾಡಿದ ಹೋರಾಟದ ಫಲವಾಗಿ ಎಂ.ಟಿ.ಕೃಷ್ಣಪ್ಪನವರು ಪೋಲಿಸ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಮೊಕದ್ದಮೆ ಎದುರಿಸುತ್ತಿರುವುದು ಅಲ್ಲ ಎಂದು ವೆಂಕಟಾಪುರ ಯೋಗೀಶ್ ಬೆಮಲ್ ಕಾಂತರಾಜ್ ಗೆ ಟಾಂಗ್ ನೀಡಿದ್ದಾರೆ.

ಬೆಮಲ್ ಕಾಂತರಾಜ್‌ ಅವರು ವ್ಯವಹಾರ ಸಂಬಂಧ ಅಮಾಯಕರನ್ನು ಹೆದರಿಸಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆಂದು ಸುದ್ದಿವಾಹಿನಿಗಳು ಪುಂಖಾನುಪುಂಖವಾಗಿ ಸುದ್ದಿವಾಹಿನಿ ಪ್ರಸಾರ ಮಾಡುತ್ತಿವೆ. ಇದೇ ಪ್ರವೃತ್ತಿಯನ್ನು ತಾಲೂಕಿನಲ್ಲೂ ಮುಂದುವರೆಸಿದರೆ ಎಂಬ ಭಯಕ್ಕೆ ಶಾಸಕ ಕೃಷ್ಣಪ್ಪ ತಾಲೂಕಿನ ಜನಕ್ಕೆ ಎಚ್ಚರಿಕೆ ನೀಡಿದ್ದರು ಅಷ್ಟೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ವೆಂಕಟಾಪುರ ಯೋಗೀಶ್ ಸಮರ್ಥಿಸಿಕೊಂಡರು.

ಬೆದರೆವು : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಬೆಮಲ್ ಕಾಂತರಾಜ್ ವಿಷಯಕ್ಕೆ ಬಂದರೆ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಹೇಳಿರುವುದು ಹಾಸ್ಯಾಸ್ಪದ. ಎಂ.ಟಿ.ಕೃಷ್ಣಪ್ಪನವರು ಹುಟ್ಟು ಹೋರಾಟಗಾರರು. ರಾಜಕೀಯ ಜೀವನವೇ ಹೋರಾಟದಿಂದ ಬಂದಿರುವುದು. ಪ್ರಸನ್ನಕುಮಾರ್ ಬೆದರಿಕೆ ಒಡ್ಡುವುದು ಬಾಲಿಶತನದ ಪರಮಾವಧಿ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಜಕ್ಕನಹಳ್ಳಿ ಬಾಬು ಹೇಳಿದರು.

ಇಂತಹ ಗೊಡ್ಡು ಬೆದರಿಕೆಗಳಿಗೆ ಶಾಸಕ ಕೃಷ್ಣಪ್ಪನವರೂ ಬೆದರುವುದಿಲ್ಲ, ಇತ್ತ ಜೆಡಿಎಸ್ ಕಾರ್ಯಕರ್ತರೂ ಬೆದರುವುದಿಲ್ಲ. ಇಂತಹ ಬೆದರಿಕೆ ಹಾಕಿದವರೆಲ್ಲಾ ಮೂಲೆ ಸೇರಿದ್ದಾರೆ ಎಂದು ಹೇಳಿದರು.

ವಿನಾಕಾರಣ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬೆಮಲ್ ಕಾಂತರಾಜ್, ತಮ್ಮ ನಡೆ ಸರಿಪಡಿಸಿಕೊಳ್ಳಬೇಕು. ಆಡಳಿತದಲ್ಲಿ ಮೂಗು ತೂರಿಸಬಾರದು ಎಂದು ಜಕ್ಕನಹಳ್ಳಿ ಬಾಬು ಕಿವಿಮಾತು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಲಕ್ಷ್ಮೀಕಾಂತ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಗೊಟ್ಟೀಕೆರೆ ಪ್ರಕಾಶ್, ಭೂವನಹಳ್ಳಿ ಪುನೀತ್, ಮುದ್ದನಹಳ್ಳಿ ಸತೀಶ್, ಹರಿಕಾರನಹಳ್ಳಿ ಮಂಜಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios