Asianet Suvarna News Asianet Suvarna News

ಹಾಸನ: ಮನೆಯಿಂದ ಹೊರದಬ್ಬಲ್ಪಟ್ಟ ತಾಯಿ, ಮಕ್ಕಳನ್ನ ಕರೆಸಿ ಹಿಗ್ಗಾಮುಗ್ಗಾ ಜಾಡಿಸಿದ ತಹಸೀಲ್ದಾರ್ ಮಮತಾ

ಗ್ರಾಮಸ್ಥರ ದೂರು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಮಮತಾ ಎಂ. ವೃದ್ಧೆಯ ಸ್ಥಿತಿಗೆ ಕಾರಣರಾದ ಆಕೆಯ ಮಕ್ಕಳ ಕರೆಸಿ ತರಾಟೆ ತೆಗೆದುಕೊಂಡ ಅವರು, ಇಳಿ ವಯಸ್ಸಿನ ತಾಯಿಗೆ ನೆರವಾಗದೆ ಇರುವುದಕ್ಕೆ ಶಿಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಮಕ್ಕಳಿಗಾಗಿ ಜೀವನವನ್ನೇ ತ್ಯಾಗ ಮಾಡಿದ ತಾಯಿಯನ್ನು ನಿರ್ಲಕ್ಷ್ಯ ಮಾಡಲು ಹೇಗೆ ಮನಸ್ಸು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tahasildar Mamata Consoles Woman at Belur in Hassan grg
Author
First Published Dec 16, 2023, 2:00 AM IST

ಬೇಲೂರು(ಡಿ.16):  ಹೆತ್ತಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ತಾಯಿಯೊಬ್ಬರು ಯಾರ ನೆರವಿಲ್ಲದೆ ವಯೋಸಹಜ ಕಾಯಿಲೆ ನಡುವೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಮತಾ ಎಂ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ ವೃದ್ಧೆಗೆ ಸಾಂತ್ವನ ಹೇಳಿದ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಹೊನ್ನಮ್ಮ ಹನುಮೇಗೌಡ ಎಂಬ ವೃದ್ಧೆ ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾಗಿ ಗುಡಿಸಲೊಂದರಲ್ಲಿ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದಾರೆ. ಆಕೆಯ ಹೆಸರಲ್ಲಿನಲ್ಲಿದ್ದ ಆಸ್ತಿಯನ್ನು ತಮ್ಮಿಬ್ಬರು ಮಕ್ಕಳು ಪಡೆದು ತಾಯಿಯ ಸಾಕುವಲ್ಲಿ ಹಿಂಜರಿದು ಎಲ್ಲಾ ವಿಚಾರದಲ್ಲೂ ಈ ವೃದ್ಧೆಯದ್ದೇ ತಪ್ಪೆಂದು ಬಿಂಬಿಸಿ ಬೇರೆಡೆ ವಾಸವಿದ್ದಾರೆ ಎಂಬುದು ಗ್ರಾಮಸ್ಥರ ದೂರು. ಈ ತಾಯಿಯ ಸ್ಥಿತಿ ಕಂಡು ಮರುಗಿದ ಸುತ್ತಲಿನ ಜನರು ಆಕೆಯ ಊಟ, ಬಟ್ಟೆ ಆಸ್ಪತ್ರೆ ಖರ್ಚಿಗೆ ಸಹಾಯ ಮಾಡುತ್ತಿದ್ದಾರೆ, ಸುಮಾರು 80 ವರ್ಷ ವಯಸ್ಸಾಗಿರುವ ಹಿರಿಜೀವ ತನ್ನ ಯೌವ್ವನದಲ್ಲಿ ಮಕ್ಕಳಿಗಾಗಿ ಶ್ರಮವಹಿಸಿ ಅವರಿಗೆ ನೆಲೆ ಮಾಡಿಟ್ಟು, ಒಂದೊಳ್ಳೆ ಸಂಬಂಧ ಹಿಡಿದು ಮದುವೆ ಮಾಡಿಸಿ ಜಮೀನಿನಲ್ಲಿ ಸಮಾನವಾಗಿ ಹಂಚಿದ ತಾಯಿಗೆ ಆಸರೆಯಾಗಬೇಕಾದ ಸಮಯದಲ್ಲಿ ಮಕ್ಕಳ ಜಗಳದಿಂದಾಗಿ ಮನೆಯಿಂದ ಹೊರ ದಬ್ಬಿಸಿಕೊಂಡು ಒಂದು ಗುಡಿಸಲಿನಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.

ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ನಾಶವಾದರು: ಕಲ್ಲಡ್ಕ ಪ್ರಭಾಕರ್ ಭಟ್

ಇನ್ನೂ ಗ್ರಾಮಸ್ಥರ ದೂರು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಮಮತಾ ಎಂ. ವೃದ್ಧೆಯ ಸ್ಥಿತಿಗೆ ಕಾರಣರಾದ ಆಕೆಯ ಮಕ್ಕಳ ಕರೆಸಿ ತರಾಟೆ ತೆಗೆದುಕೊಂಡ ಅವರು, ಇಳಿ ವಯಸ್ಸಿನ ತಾಯಿಗೆ ನೆರವಾಗದೆ ಇರುವುದಕ್ಕೆ ಶಿಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಮಕ್ಕಳಿಗಾಗಿ ಜೀವನವನ್ನೇ ತ್ಯಾಗ ಮಾಡಿದ ತಾಯಿಯನ್ನು ನಿರ್ಲಕ್ಷ್ಯ ಮಾಡಲು ಹೇಗೆ ಮನಸ್ಸು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ತನ್ನ ಮಕ್ಕಳು ಸುಖವಾಗಿರಲಿ ಎಂದು ಜೀವನವಿಡಿ ಶ್ರಮಿಸುವ ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದು. ಕೊನೆಗಾಲದಲ್ಲಿ ಸಂತೋಷದಿಂದ ನೆಮ್ಮದಿಯಾಗಿ ಜೀವ ಬಿಟ್ಟರೆ ಅದೇ ಮಕ್ಕಳಿಗೆ ಆಶೀರ್ವಾದ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಂದ ಅವರು ವೃದ್ಧೆಗೆ ಸರ್ಕಾರದಿಂದ ದೊರಕಿಸಬಹುದಾದ ಪಿಂಚಣಿ ಮತ್ತು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದ ಬಗ್ಗೆ ಗಮನ ಹರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ವೃದ್ಧೆಯ ಯೋಗಕ್ಷೇಮ ವಿಚಾರಿಸುವಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸೂಚನೆ ನೀಡಿದರು.

Follow Us:
Download App:
  • android
  • ios