ಕೊರೋನಾ ಕುರಿತು ಸುಳ್ಳುಸುದ್ದಿ ಹರಿಬಿಟ್ಟ ಯುವಕನಿಗೆ ಒಂದು ವಾರ ಕಸ ಗುಡಿಸುವ ಶಿಕ್ಷೆ..!

ಸುಳ್ಳು​ಸುದ್ದಿ ಹಬ್ಬಿಸಿ​ದ ಯುವ​ಕ, ಪಟ್ಟಣ ಸ್ವಚ್ಛತೆಗೆ ನಿಯೋ​ಜನೆ| ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಯುವಕ| ಪ್ರಕಾಶ ಹನುಮಂತ ಚಳ್ಳಮರದ (24) ದಂಡನೆಗೊಳಗಾದ ಯುವಕ| ಈತ ಕೊರೋನಾ ಬಗ್ಗೆ ಇಲ್ಲಸಲ್ಲದ ಸುದ್ದಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾಮರಸ್ಯ ಹಾಗೂ ಶಾಂತಿ ಭಂಗ ಮಾಡುತ್ತಿದ್ದ|

Tahashildar Shivalingaprabhu Punishment to Young Man for Sent Fake News on Social Media

ವಿಜಯಪುರ(ಏ.30):  ಕೊರೋನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಮಾಹಿತಿ ಅಪ್‌ಲೋಡ್‌ ಮಾಡಿದ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಯುವಕನಿಗೆ ದಂಡಾಧಿಕಾರಿಯೂ ಆದ ತಹಸೀಲ್ದಾರ್‌, ಶಿವಲಿಂಗಪ್ರಭು ವಾಲಿ ಒಂದು ವಾರ ಕಾಲ ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.

ಪಟ್ಟಣದ ಪ್ರಕಾಶ ಹನುಮಂತ ಚಳ್ಳಮರದ (24) ದಂಡನೆಗೊಳಗಾದ ಯುವಕ. ಈತ ಕೊರೋನಾ ಬಗ್ಗೆ ಇಲ್ಲಸಲ್ಲದ ಸುದ್ದಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾಮರಸ್ಯ ಹಾಗೂ ಶಾಂತಿ ಭಂಗ ಮಾಡುತ್ತಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟಣದ ಪಿಎಸೈ ಸಿ.ಬಿ. ಚಿಕ್ಕೋಡಿ ಅವರು ತಾಲೂಕು ದಂಡಾಧಿಕಾರಿಯಾದ ತಹಸೀಲ್ದಾರ್‌ ವಾಲಿ ಅವರಿಗೆ ಮನವಿ ಸಲ್ಲಿಸಿದ್ದರು.

'ಚಾನೆಲ್‌ ಕ್ಯಾಮೆ​ರಾ​ಮನ್‌ಗೆ ತಗು​ಲಿದ ಕೊರೋನಾ ಸೋಂಕು ಮೂಲ ಪತ್ತೆ'

ಮನವಿ ಆಲಿಸಿದ ತಹಸೀಲ್ದಾರ್‌ ಅವರು ಪ್ರಕಾಶ ಚಳ್ಳಮರದನಿಗೆ ಏ. 30ರಿಂದ ಮೇ 5ರವರೆಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸ್ವಚ್ಛತಾ ಕೆಲಸಗಳನ್ನು ಮಾಡಿಸಲು ಪಪಂ ಮುಖ್ಯಾಧಿಕಾರಿಗೆ ಒಪ್ಪಿಸಿ ಆದೇಶಿಸಿದ್ದಾರೆ. ಮೇ 6ರಂದು ಸದರಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಿದ್ದಾರೆ.

Latest Videos
Follow Us:
Download App:
  • android
  • ios