ಬಾಗಲಕೋಟೆ(ಏ.12): ಗಜರಾಜನಿಗೂ ಕೊರೋನಾ ಲಾಕ್‌ಡೌನ್‌ ಎಫೆಕ್ಟ್ ತಟ್ಟಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದ್ದು, ಅನಾರೋಗ್ಯದಿಂದ ಹಾಗೂ ಆಹಾರವಿಲ್ಲದೆ ಪರಿದಾಡುತ್ತಿದ್ದ ಗಜರಾಜನಿಗೆ ಕೊನೆಗೂ ಚಿಕಿತ್ಸೆ ಹಾಗೂ ಆಹಾರ ಸಕಾಲದಲ್ಲಿ ದೊರೆತಿದೆ.

ಮುಧೋಳ ನಗರದ ಗವಿಮಠದಲ್ಲಿರುವ ಗಜರಾಜನಿಗೆ ನಿತ್ಯ ನಗರದಲ್ಲಿ ಸಂಚರಿಸಿ ಆಹಾರ ಸಂಗ್ರಹಿಸುತ್ತಿದ್ದ ಮಾವುತನಿಗೆ ಗಜರಾಜನ ಅನಾರೋಗ್ಯ ಹಾಗೂ ಆಹಾರ ಸಿಗದೆ ಇರುವುದರಿಂದ ಆತಂಕಗೊಂಡಿದ್ದನಲ್ಲದೆ ಆಸಹಾಯಕತೆಯನ್ನು ಸಹ ಮಾಧ್ಯಮದವರ ಎದುರು ತೋಡಿಕೊಂಡಿದ್ದ. 

ಕೋವಿಡ್‌-19 ವಿರುದ್ಧ ಹೋರಾಟ: ವೈದ್ಯರ ರಕ್ಷಣಾ ಸಾಮಗ್ರಿಗಳಿಗೆ ಕೊರತೆ ಇಲ್ಲ: DCM

ಈ ಕುರಿತು ಮುಧೋಳ ತಹಸೀಲ್ದಾರ ಸಂಗಮೇಶ ಬಾಡಗಿ ಅವರ ಗಮನಕ್ಕೆ ತರಲಾಗಿತ್ತು. ಇದೀಗ ಮುಧೋಳ ತಹಸೀಲ್ದಾರ್‌ ಸಂಗಮೇಶ ಬಾಡಗಿ ಸ್ಪಂದಿಸಿ ಗಜರಾಜನಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆಹಾರದ ಭಾಗವಾಗಿ ಕಬ್ಬನ್ನು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.