Asianet Suvarna News Asianet Suvarna News

ಕುಷ್ಟಗಿ: ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣ, ತಹಶೀಲ್ದಾರ್‌ ಸಸ್ಪೆಂಡ್‌

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್‌ ಕಚೇರಿ ಚೇಂಬರ್‌ನಲ್ಲೇ ತಮ್ಮ‌ ಮಹಿಳಾ‌ ಸಿಬ್ಬಂದಿಗೆ ಮುತ್ತಿಟ್ಟಿದ್ದ ತಹಶೀಲ್ದಾರ್‌ ಗುರುಬಸವರಾಜ| ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ನೊಂದ ಮಹಿಳೆ| ಪ್ರಕರಣ‌ವನ್ನ ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಅಧಿಕಾರ ಘನತೆಗೆ ಚ್ಯುತಿ ತಂದಿದ್ದ ಹಿನ್ನಲೆಯಲ್ಲಿ ತಹಶೀಲ್ದಾರ್‌ ಅಮಾನತ್ತು| 

Tahashildar K M Nagarj Suspended for Misbehave With Woman Staff Case grg
Author
Bengaluru, First Published Nov 28, 2020, 12:35 PM IST

ಕೊಪ್ಪಳ(ನ.28): ಕಚೇರಿಯಲ್ಲಿಯೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ ಕೆ.ಎಂ.ಗುರುಬಸವರಾಜ ಅವರನ್ನ ಅಮಾನತ್ತು ಮಾಡಿ ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿ ನಾಗರಾಜ ಅವರು ಆದೇಶ ಹೊರಡಿಸಿದ್ದಾರೆ. 

Tahashildar K M Nagarj Suspended for Misbehave With Woman Staff Case grg

ಬಡ ವಿದ್ಯಾರ್ಥಿ ವೈದ್ಯನಾಗುವ ಕನಸಿಗೆ ನೀರೆರದ ಸುವರ್ಣ ನ್ಯೂಸ್‌: ಹರಿದು ಬಂದ ನೆರವಿನ ಮಹಾಪೂರ

ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್‌ ಕಚೇರಿ ಚೇಂಬರ್‌ನಲ್ಲೇ ತಮ್ಮ‌ ಮಹಿಳಾ‌ ಸಿಬ್ಬಂದಿಗೆ ತಹಶೀಲ್ದಾರ್‌ ಕೆ.ಎಂ.ಗುರುಬಸವರಾಜ ಮುತ್ತಿಟ್ಟಿದ್ದರು. ಗುರುಬಸವರಾಜ ಅವರು ಕುಷ್ಟಗಿಯಿಂದ ವರ್ಗಾವಣೆಗೊಂಡು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ಕಾರ್ಯನಿರ್ವಹಿಸುವಾಗ ಪ್ರಕರಣ ಬೆಳಕಿಗೆ ಬಂದಿತ್ತು. 

Tahashildar K M Nagarj Suspended for Misbehave With Woman Staff Case grg

ಈ ಸಂಬಂಧ ನೊಂದ ಮಹಿಳೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ‌ವನ್ನ ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಅಧಿಕಾರ ಘನತೆಗೆ ಚ್ಯುತಿ ತಂದಿದ್ದ ಹಿನ್ನಲೆಯಲ್ಲಿ ತಹಶೀಲ್ದಾರ್‌ ಕೆ.ಎಂ.ಗುರುಬಸವರಾಜ ಅವರನ್ನ ಅಮಾನತು ಮಾಡಲಾಗಿದೆ. ಅಮಾನತ್ತುಗೊಂಡ ಗುರುಬಸವರಾಜ ಸದ್ಯ ಬೀದರ್‌ನಲ್ಲಿ ಚುನಾವಣಾ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
 

Follow Us:
Download App:
  • android
  • ios