ಪ್ಲಾಸ್ಟಿಕ್ ಬೇಡ, ಬಾಳೆ ಎಲೆ ಬಳಸಿ: ತುಳುನಾಡಿನ ಶಾಸಕರ ಮನವಿಗೆ ಸೈ ಎಂದ ಸ್ವಿಗ್ಗಿ!

ಪ್ಲಾಸ್ಟಿಕ್ ಬೇಡ, ಬಾಳೆ ಎಲೆ ಬಳಸಿ| ಶೀಘ್ರವೇ ನಿಮ್ಮ ಸಲಹೆ ಜಾರಿಗೊಳಿಸುತ್ತೇವೆ| ಮಂಗಳೂರು ದಕ್ಷಿಣ ಶಾಸಕರ ಮನವಿಗೆ ಸ್ಪಂದಿಸಿದ ದೇಶದ ಪ್ರತಿಷ್ಠಿತ ಅನ್ ಲೈನ್ ಫುಡ್ ಡೆಲಿವರಿ ಸಂಸ್ಥೆ| 

Swiggy To Drop Plastic Containers After Mangalore South MLA Vedavyas Kamath Appeal

ಮಂಗಳೂರು[ಜೂ.20]: ಪ್ಲಾಸ್ಟಿಕ್ ಬಳಕೆ ವಿರುದ್ದ ದಿಟ್ಡ ಹೆಜ್ಜೆ ಇಟ್ಟಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರಿನ ಹೊಟೇಲ್ ‌ಮತ್ತು ಆನ್ ಲೈನ್ ಫುಡ್ ಡೆಲಿವೆರಿ ಸಂಸ್ಥೆಗಳು ಆಹಾರಗಳ ಪ್ಯಾಕಿಂಗ್ ಗೆ ಬಾಳೆ ಎಳೆ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ತಮ್ಮ ಫೇಸ್ ಬುಕ್ ಪೇಜ್ ನಲ್ಲಿ 'ಮಂಗಳೂರಿನ ಹೊಟೇಲ್‌ ಮತ್ತು ಆನ್ ಲೈನ್ ಆಹಾರ ಪೂರೈಕೆ ಸಂಸ್ಥೆಗಳು ಆಹಾರ ಪ್ಯಾಕಿಂಗ್ ಗೆ ಪ್ಲಾಸ್ಟಿಕ್ ಬಳಸಬೇಡಿ. ಬದಲಾಗಿ ಬಾಳೆ ಎಲೆ ಬಳಸಿ. ಇದು ನಮ್ಮ ತುಳುನಾಡಿನ ‌ಸಂಸ್ಕೃತಿಯೂ ಆಗಿದೆ' ಎಂದು  ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡಿದ್ದರು. 

ತುಳುನಾಡಿನ ಶಾಸಕರ ಸಲಹೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ದೇಶದ ಪ್ರತಿಷ್ಠಿತ ಅನ್ ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಇದಕ್ಕೆ ಪ್ರತಿಕ್ರಿಯಿಸುತ್ತಾ 'ನಮ್ಮ ಹೊಟೇಲ್ ಪಾಲುದಾರರ ಜೊತೆ ಮಾತುಕತೆ ನಡೆಸಿ ಇದನ್ನು ಜಾರಿಗೊಳಿಸಲು ಮುಂದಾಗುತ್ತೇವೆ' ಎಂದು ತಿಳಿಸಿದೆ.

Swiggy To Drop Plastic Containers After Mangalore South MLA Vedavyas Kamath Appeal

ಸದ್ಯ ಶಾಸಕರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ

Latest Videos
Follow Us:
Download App:
  • android
  • ios