ಆಲೂರು (ನ.26): ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾರ್ಜುವಳ್ಳಿಯಲ್ಲಿರುವ ರಂಭಾಪುರಿ ಶಾಖಾ ಮಠದ ಹಿರಿಯ ಮಠಾಧೀಶರಾದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ (39) ಮಠದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

 ತಾಲೂಕಿನ ಕಣತೂರು ಸಮೀಪದ ಕಾರ್ಜುವಳ್ಳಿ ಗ್ರಾಮದಿಂದ ಒಂದು ಕಿ ಮೀ ದೂರವಿರುವ ಮಠ ಏಕಾಂತ ಸ್ಥಳದಲ್ಲಿದೆ. 

ಸ್ಥಳೀಐ ಭಕ್ತರೊಬ್ಬರು ಬುಧವಾರ ಬೆಳಗ್ಗೆ ಮಠದ ಬಳಿ ಬಂದಾಗ ಆತ್ಮಹತ್ಯೆ ಪ್ರಕರಣ ಗೊತ್ತಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಹಣ ವಾಪಸ್‌ ಕೊಡುತ್ತಿಲ್ಲ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಯತ್ನ . 

ಸ್ಥಳಕ್ಕೆ ಧಾವಿಸಿದ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ  ನನ್ನ ಸಾವಿಗೆ ನಾನೇ ಕಾರಣ ಎಂಬ ಡೆತ್ ನೋಟ್ ಸಿಕ್ಕಿದೆ. 

ಮಠದ ಆವರಣದಲ್ಲೇ ಸಂಪ್ರದಾಯದಂತೆ ವಿಧಿವಿಧಾನಗಳು ನೆರವೇರಲಿದೆ.