Asianet Suvarna News Asianet Suvarna News

ರಾಮ​ನ​ಗರ: ಪೊಲೀ​ಸರ ವಿರುದ್ಧ ಸ್ವಾಮೀ​ಜಿ​ ಏಕಾಂಗಿ ಪ್ರತಿ​ಭ​ಟನೆ

ಪೊಲೀಸರು ಕ್ರೇನ್‌ ಬಳಸಿ ವಾಹನಗಳನ್ನು ಅದೇ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗ​ಮಿ​ಸಿದ ಆಶ್ರ​ಮದ ಸ್ವಾಮೀಜಿ ವಾಹನ ತೆರವು ಮಾಡು​ವಂತೆ ಹೇಳಿ​ದರೂ ಕೇಳ​ದಿ​ದ್ದಾಗ ಏಕಾಂಗಿ ಪ್ರತಿ​ಭ​ಟನೆ ನಡೆ​ಸಿ​ದ​ರು. ಇದ​ರಿಂದ ಎಚ್ಚೆತ್ತ ಪೊಲೀಸರು ವಾಹನಗಳ ಸ್ಥಳಾಂತರ ಮಾಡುವ ಕೆಲಸವನ್ನು ಕೈಬಿಟ್ಟಿದ್ದಾರೆ.

Swamiji Alone Protest against the Police in Ramanagara grg
Author
First Published Aug 3, 2023, 10:30 PM IST

ರಾಮ​ನ​ಗರ(ಆ.03):  ಬೆಂಗ​ಳೂರು ದಕ್ಷಿಣ ತಾಲೂ​ಕಿನ ಕುಂಬ​ಳ​ಗೂ​ಡಿ​ನಲ್ಲಿರುವ ವಿಶ್ವ ಕಲ್ಯಾಣ ಮಿಷನ್‌ ಬಸವ ಗಂಗೋತ್ರಿ ಆಶ್ರಮ ಹಾಗೂ ಪೊಲೀ​ಸರ ನಡುವೆ ಜಾಗದ ವಿಚಾ​ರ​ವಾಗಿ ಜಟಾ​ಪಟಿ ನಡೆ​ದಿದ್ದು, ಇದ​ರಿಂದ ಆಕ್ರೋ​ಶ​ಗೊಂಡ ಆಶ್ರ​ಮದ ಶ್ರೀ ಬಸ​ವ​ಯೋಗಿ ಸ್ವಾಮೀಜಿ ಏಕಾಂಗಿ ಪ್ರತಿ​ಭ​ಟನೆ ನಡೆ​ಸಿ​ದರು.

ಕುಂಬ​ಳ​ಗೂಡು ಪೊಲೀಸ್‌ ಠಾಣೆ ಹಿಂಭಾ​ಗ​ದ​ಲ್ಲಿಯೇ ಬಸವ ಗಂಗೋತ್ರಿ ಆಶ್ರಮವಿದ್ದು, ಇದಕ್ಕೆ ಸೇರಿದ 6 - 7 ಎಕರೆ ಜಮೀ​ನಿನ ಜೊತೆಗೆ ಪೊಲೀಸ್‌ ಠಾಣೆ ಪಕ್ಕ​ದಲ್ಲಿ 3 ಗುಂಟೆ ಜಾಗವೂ ಇದೆ. ಈ ಜಾಗದ ವಿಚಾ​ರ​ವಾಗಿ ಆಶ್ರಮ ಮತ್ತು ಪೊಲೀ​ಸರ ನಡುವೆ ಸಂಘರ್ಷ ನಡೆ​ಯು​ತ್ತಲೇ ಬಂದಿದೆ. ಈ ವಿವಾ​ದಿತ ಜಾಗ​ದಲ್ಲಿ ಪೊಲೀ​ಸರು ಅಪ​ಘಾ​ತಕ್ಕೆ ಒಳ​ಗಾದ ವಾಹ​ನ​ಗ​ಳನ್ನು ನಿಲ್ಲಿ​ಸುತ್ತಿ​ದ್ದರು. ಹಲವು ಬಾರಿ ವಾಹನಗಳನ್ನ ತೆರವು ಮಾಡಿ ಎಂದು ಸ್ವಾಮೀಜಿ ಪೊಲೀಸರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಮಠದ ವತಿಯಿಂದ ಕಳೆದ 4 ದಿನಗಳ ಹಿಂದೆ ಅಪಘಾತ ವಾಹನಗಳನ್ನು ತೆರವು ಮಾಡಿ ಪೊಲೀಸ್‌ ಠಾಣೆ ಪಕ್ಕಕ್ಕೆ ನಿಲ್ಲಿಸಲಾಗಿತ್ತು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ವಕ್ಷೇ​ತ್ರ​ದಲ್ಲಿ ಸಾರಿಗೆ ಬಸ್ಸಿ​ನ ಅವ್ಯ​ವಸ್ಥೆ

ಇದೀಗ ಪೊಲೀಸರು ಮತ್ತೆ ಕ್ರೇನ್‌ ಬಳಸಿ ವಾಹನಗಳನ್ನು ಅದೇ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗ​ಮಿ​ಸಿದ ಆಶ್ರ​ಮದ ಸ್ವಾಮೀಜಿ ವಾಹನ ತೆರವು ಮಾಡು​ವಂತೆ ಹೇಳಿ​ದರೂ ಕೇಳ​ದಿ​ದ್ದಾಗ ಏಕಾಂಗಿ ಪ್ರತಿ​ಭ​ಟನೆ ನಡೆ​ಸಿ​ದ​ರು. ಇದ​ರಿಂದ ಎಚ್ಚೆತ್ತ ಪೊಲೀಸರು ವಾಹನಗಳ ಸ್ಥಳಾಂತರ ಮಾಡುವ ಕೆಲಸವನ್ನು ಕೈಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿದ ಶ್ರೀ ಬಸ​ವ​ಯೋಗಿ ಸ್ವಾಮೀಜಿ, ಗೋಮಾಳ ಜಾಗ​ದ​ಲ್ಲಿಯೇ ಅಕ್ರ​ಮ​ವಾಗಿ ಪೊಲೀಸ್‌ ಠಾಣೆ ನಿರ್ಮಾಣ ಮಾಡ​ಲಾ​ಗಿ​ದೆ. ಆಶ್ರ​ಮದ ಆವ​ರ​ಣ​ದಲ್ಲಿ ಅಪ​ಘಾ​ತ​ಕ್ಕೀ​ಡಾದ ವಾಹ​ನ​ಗ​ಳನ್ನು ಇಡ​ದಂತೆ ಹೇಳಿ​ದರು ಕೇಳದ ಪೊಲೀ​ಸರು ಆಶ್ರ​ಮದ ಶಾಂತಿಯುತ ವಾತಾ​ವ​ರ​ಣಕ್ಕೆ ಧಕ್ಕೆ ತರುವ ಪ್ರಯತ್ನ ಮಾಡು​ತ್ತಿ​ದ್ದಾರೆ. ನಾವೇ ಸರ್ಕಾ​ರ​ವೆಂದು ದರ್ಪ ಮೆರೆ​ಯು​ತ್ತಿ​ದ್ದಾರೆ ಎಂದು ದೂರಿ​ದ​ರು.

50 ವರ್ಷ​ದಿಂದ ಆಶ್ರ​ಮ​ವಿ​ದ್ದರೂ ಈಗ ಗೋಮಾಳು ಎಂದು ಪೊಲೀ​ಸರು ಹೇಳು​ತ್ತಿ​ದ್ದಾರೆ. ಸರ್ವೆ ಮಾಡಿ​ದ್ದರೂ ತಹ​ಸೀ​ಲ್ದಾರ್‌ ದಾಖಲೆ ಕೊಡು​ತ್ತಿಲ್ಲ. ಆಶ್ರ​ಮದ ಜಾಗ ಕಬ​ಳಿ​ಸಲು ಕಂದಾಯ ಹಾಗೂ ಪೊಲೀಸ್‌ ಇಲಾಖೆ ಶಾಮೀ​ಲಾ​ಗಿವೆ ಎಂದು ಆರೋ​ಪಿ​ಸಿ​ದ​ರು.

Follow Us:
Download App:
  • android
  • ios