ಸ್ವಾಮಿ ವಿವೇಕಾನಂದರು ಜಾತಿಯ ಐಕಾನ್‌ ಅಲ್ಲ  ರಾಷ್ಟ್ರದ ಐಕಾನ್‌ ಮಹಾರಾಜರೇ ಅವರನ್ನ ಪ್ರೀತಿಯಿಂದ ಗೌರವದಿಂದ ಕಂಡಿದ್ದಾರೆ ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿಕೆ

ಮೈಸೂರು (ಜು.03): ಸ್ವಾಮಿ ವಿವೇಕಾನಂದರು ಜಾತಿಯ ಐಕಾನ್‌ ಅಲ್ಲ, ಅವರು ರಾಷ್ಟ್ರದ ಐಕಾನ್‌. ಮಹಾರಾಜರೇ ಅವರನ್ನ ಪ್ರೀತಿಯಿಂದ ಗೌರವದಿಂದ ಕಂಡಿದ್ದಾರೆ. ಇದನ್ನ ನಾವು ಮೊದಲು ನೆನಪಿಟ್ಟುಕೊಳ್ಳಬೇಕು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ಮೈಸೂರಿನ ಎನ್‌ಟಿಎಂ ಶಾಲೆ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣ ವಿವಾದ ಸಂಬಂಧ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿವೇಕಾನಂದರು ಯಾವ ಪ್ರಬಲ ಜಾತಿಗೆ ಸೇರಿದವರಲ್ಲ. ಒಂದು ವೇಳೆ ಅವರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ. ಈ ವಿವಾದವೇ ಇಂದು ಬರುತ್ತಿರಲಿಲ್ಲ. ಇಷ್ಟೊತ್ತಿಗೆ ಸ್ಮಾರಕ ನಿರ್ಮಾಣ ಆಗಿ ವರ್ಷಗಳೇ ಕಳೆಯುತ್ತಿದ್ದವು. ಅವರಿಗೆ ಜಾತಿ ಬೆಂಬಲ ಇಲ್ಲದ ಕಾರಣ ಈ ರೀತಿಯಾಗಿ ವಿವಾದ ಸೃಷ್ಟಿಮಾಡಲಾಗಿದೆ. ಇದು ಮೈಸೂರಿಗೆ ಆಗುತ್ತಿರುವ ಅವಮಾನ ಎಂದರು.

ನನಗೆ ಸಚಿವ ಸ್ಥಾನ ಎಂಬುದು ಗಾಳಿಸುದ್ದಿ: ಪ್ರತಾಪ್‌ ಸಿಂಹ

ವಿವೇಕ ಸ್ಮಾರಕವನ್ನ ವಿರೋಧ ಮಾಡುತ್ತಿರುವುದು ನಾಚೀಕೆಗೇಡಿನ ಸಂಗತಿ. ಸಂಕುಚಿತ ಮನೋಭಾವದ ಜನ ಸ್ಮಾರಕದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ಅಲ್ಲಿರುವ ಶಾಲೆಯನ್ನು ಮುಂಭಾಗದ ಕಟ್ಟಡಕ್ಕೆ ಸ್ಥಳಾಂತರಿಸಬಹುದು. ಅಥವಾ ಕೂಗಳತೆಯ ದೇವರಾಜ ಅರಸು ಶಾಲೆಗೆ ವರ್ಗಾಯಿಸಬಹುದು. ಸರ್ಕಾರ ಶಾಲೆಯ ಜಾಗ ಹಸ್ತಾಂತರಕ್ಕೆ ಆದೇಶ ಮಾಡಿಕೊಡಲಿ. ನಾನು ಕೇವಲ ಎರಡೇ ಗಂಟೆಯಲ್ಲಿ ಕನ್ನಡ ಮಕ್ಕಳಿಗೆ ಅನ್ಯಾಯವಾಗದಂತೆ ಶಾಲೆಯನ್ನ ಸ್ಥಳಾಂತರಿಸಿ ಮಾಡಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದು ಅವರು ಹೇಳಿದರು.