* ನನ್ನ ಮೇಲೆ ವಿಶ್ವಾಸ ಇಟ್ಟ ಮೈಸೂರು- ಕೊಡಗಿನ ಜನ * ನನಗಿಂತಲೂ ಹಿರಿಯರು, ಅನುಭವಿಗಳು ರಾಜ್ಯದಲ್ಲಿ ಸಂಸದರಾಗಿದ್ದಾರೆ* ಸಂಸದನಾಗಿ ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದು ಇಲ್ಲ 

ಮೈಸೂರು(ಜು.03): ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ. 

ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನನಗಿಂತಲೂ ಹಿರಿಯರು, ಅನುಭವಿಗಳು ರಾಜ್ಯದಲ್ಲಿ ಸಂಸದರಾಗಿದ್ದಾರೆ. ಅವರೆಲ್ಲರಿಗೂ ನಾನು ಶುಭಾಶಯ ತಿಳಿಸುತ್ತೇನೆ ಎಂದರು. 

ಕರ್ನಾಟಕದಿಂದ ಯಾರಿಗೆ ಕೇಂದ್ರ ಸಚಿವ ಸ್ಥಾನದ ಭಾಗ್ಯ?

ಮೈಸೂರು- ಕೊಡಗಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಸಂಸದನಾಗಿ ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದು ಇಲ್ಲ ಎಂದರು.

ಇದಕ್ಕಿಂತ ನಾನು ಬೇರೆನು ನಿರೀಕ್ಷೆ ಮಾಡಿಲ್ಲ. ನನಗೆ ಇನ್ನು ಕೆಲಸ ಮಾಡೋಕೆ ಸಮಯ ಬೇಕು. ಕ್ಷೇತ್ರದ ಜನರ ನಿರೀಕ್ಷೆಗಳನ್ನ ಈಡೇರಿಸುವ ಜವಬ್ದಾರಿ ಇದೆ. ಹೀಗಾಗಿ, ಈ ಬಗ್ಗೆ ಇನ್ನು ಹೆಚ್ಚೇನು ಹೇಳಲ್ಲ ಎಂದು ಹೇಳಿದ್ದಾರೆ.