ಬೆಂಗಳೂರು [ಆ.22]:  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಸಹಯೋಗದಲ್ಲಿ ನಡೆಯುತ್ತಿರುವ ವೈವಿಧ್ಯಮಯ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್ ಡೆಕೊರ್‌ನ 4ನೇ ಆವೃತ್ತಿಯ ಎಕ್ಸ್‌ಪೋ- 2019’ ಆ.23ರಿಂದ 26ರವರೆಗೆ ನಡೆಯಲಿದೆ.

ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನ ಗೇಟ್‌ ನಂ.4ನಲ್ಲಿ ಹಮ್ಮಿಕೊಂಡಿರುವ ಈ ಪ್ರದರ್ಶನದಲ್ಲಿ ದೇಶದ ಅತ್ಯುತ್ತಮ ಪೀಠೋಪಕರಣ ಮತ್ತು ಗೃಹ ಅಲಂಕಾರಿಕ ಉತ್ಪನ್ನಗಳು ಲಭ್ಯವಿರಲಿವೆ. ಎಕ್ಸ್‌ಪೋದಲ್ಲಿ ದೇಶ ವಿದೇಶಗಳ ಪೀಠೋಪಕರಣ ಮತ್ತು ಗೃಹ ಅಲಂಕಾರಕ ಉತ್ಪನ್ನಗಳ ಉತ್ಪಾದಕರು, ಡೀಲರ್ಸ್‌, ಸಗಟು ಮಾರಾಟಗಾರರು, ವಿನ್ಯಾಸಗಾರರು ಭಾಗವಹಿಸಲಿದ್ದಾರೆ.

ವಿದೇಶಿ ಪಿಠೋಪಕರಣಗಳು, ಗ್ರಾಹಕರಿಗೆ ಮೆಚ್ಚುಗೆಯಾಗುವ ಪಿಠೋಪಕರಣಗಳು, ಲೆದರ್‌ ಪೀಠೋಪಕರಣಗಳು, ಆಕರ್ಷಕ ಹಾಸಿಗೆ ಮತ್ತು ಸೋಫಾಗಳು, ಡೈನಿಂಗ್‌ ಟೇಬಲ್ಸ್‌, ಪಿಲ್ಲೋಗಳು, ಕರಕುಶಲ ವಸ್ತುಗಳು, ಕಾರ್ಪೆಟ್ಸ್‌, ದೇಹದಾಢ್ರ್ಯ ವಸ್ತುಗಳು, ಆಧುನಿಕ ಅಡುಗೆ ಮನೆಗೆ ಬೇಕಾದ ವಸ್ತುಗಳು, ಗೋಡೆ ಗಡಿಯಾರಗಳು, ಹಸ್ತಕೃತಿಗಳು, ಕಲಾಕೃತಿಗಳು, ಕಚೇರಿಗೆ ಅಗತ್ಯವಿರುವ ಸುಂದರವಾದ ಪೀಠೋಪಕರಣಗಳು, ಗೃಹ ಅಲಂಕಾರ ವಸ್ತುಗಳು ಒಂದೇ ವೇದಿಕೆಯಲ್ಲಿ ಗ್ರಾಹಕರಿಗೆ ಲಭ್ಯವಿರಲಿವೆ. ಅಲ್ಲದೆ, ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಾಗಲಿವೆ. ಆಗಸ್ಟ್‌ 23ರಿಂದ ಪ್ರಾರಂಭವಾಗುತ್ತಿರುವ ಎಕ್ಸ್‌ಫೋವನ್ನು ಖ್ಯಾತ ಕನ್ನಡ ಚಲನಚಿತ್ರ ನಟಿ ಹರಿಪ್ರಿಯಾ ಉದ್ಘಾಟಿಸಲಿದ್ದಾರೆ.