ವಿಷ ಪ್ರಸಾದದ ದುರಂತ ಕಣ್ಣಾರೆ ಕಂಡೇವು...ಈ ಜಿಲ್ಲಾಸ್ಪತ್ರೆಯ ದುಸ್ಥಿತಿಯೂ ಅಷ್ಟೆ

ಇದು ಚಿಕ್ಕಬಳ್ಳಾಪುರ ಸರಕಾರಿ ಆಸ್ಪತ್ರೆಯ ಘೋರ ಕತೆ. ರಾಜಧಾನಿ ಬೆಂಗಳೂರಿಗೆ ತುಂಬಾ ಹತ್ತಿರವಿರುವ ಜಿಲ್ಲೆಯ ಜಿಲ್ಲಾಸ್ಪತ್ರೆಯ ದುಸ್ಥಿತಿ ಇದು. ಚಾಮರಾಜನಗರದ ವಿಷ ಪ್ರಸಾದದ ಘೋರ ದುರಂತದ ವೇಳೆ ತಾಲೂಕು ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆಯನ್ನು ಕಣ್ಣಾರೆ ಕಂಡಿದ್ದೇವೆ.

Suvarna BIG 3 lack of facility in Chikkaballapur Hospital

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ. ಜಿಲ್ಲಾಸ್ಪತ್ರೆಯ ಈ ದುಸ್ಥಿತಿಗೆ ಯಾರು ಹೊಣೆ? ಸದ್ಯಕ್ಕೆ ಉತ್ತರ ಗೊತ್ತಿಲ್ಲ. ಆದರೆ ಈ ವ್ಯವಸ್ಥೆ ಮಾತ್ರ ಹಾಗೆ ಮುಂದುವರಿದಿದೆ.

ಖುದ್ದು ಜಿಲ್ಲಾ ವೈದ್ಯಾಧಿಕಾರಿಗಳೆ ಹೇಳುವ ಪ್ರಕಾರ ವೆಂಟಿಲೇಟರ್ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಒಟ್ಟಿನಲ್ಲಿ ಭಾಷಣ ಮಾಡುವ ದೊಡ್ಡವರ ದಂಡಿನ ನಡುವೆ ಜಿಲ್ಲಾಸ್ಪತ್ರೆಯ ಕೂಗು ಮಾತ್ರ ಯಾರಿಗೂ ಕೇಳುತ್ತಿಲ್ಲ.

"

 

"

Latest Videos
Follow Us:
Download App:
  • android
  • ios