ಕಾರವಾರ [ಜ.04]:  ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯಲ್ಲಿ ನಡೆದ ವೃದ್ಧ ದಂಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಾಸ್ಪದ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಡಿ.21 ರಂದು ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಈ ಸಂಬಂಧ ಸುಕೇಶ್ ನಾಯಕ್ ಎಂಬಾತನನ್ನು ಬಂಧಿಸಲಾಗಿದೆ. 

DYSP ಶಂಕರ ಮಾರಿಹಾಳ ತಂಡವು, ಕೊಲೆಯಾದ ನಾರಾಯಣ ನಾಯಕ್ ಅವರ ತಮ್ಮನ ಮಗನಾದ ಸುಕೇಶ್ ನಾಯಕ್ ನ್ನು ಬಂಧಿಸಿದ್ದು, ತನಿಖೆ ಚುರಕುಗೊಳಿಸಿದ್ದಾರೆ. 

ಊರಿಗೆ ಆಗಮಿಸಿದ್ದ ಆತನನ್ನು ವಿಚಾರಣೆಗೆ ಕರೆದಿದ್ದು, ಆದರೆ ಆತ ಸ್ಥಳದಿಂದ ಪರಾರಿಯಾಗಿದ್ದ. 

ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ ...

ಪೊಲೀಸರು ತನಿಖೆಗೆ ಕರೆದಿದ್ದರೂ ಆತ ತನ್ನ ಬೈಕ್ ಬಿಟ್ಟು ಪರಾರಿಯಾಗಿದ್ದ. ಈ ನಿಟ್ಟಿನಲ್ಲಿ ಆತನ ಮೇಲೆ ಅನುಮಾನಗೊಂಡ ಪೊಲೀಸ್ ತಂಡ ಸುಕೇಶ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. 

ಡಿಸೆಂಬರ್ 21ರಂದು ಉತ್ತರ ಕನ್ನಡದ ಅಂಕೋಲದ ಆಂದ್ಲೆಯಲ್ಲಿ  ಜೋಡಿ ಕೊಲೆ ನಡೆದಿತ್ತು. ನಾರಾಯಣ ನಾಯಕ, ಸಾವಿತ್ರಿ ನಾಯಕ ದಂಪತಿ ಕೊಲೆ ನಡೆದಿದ್ದು, ಈ ವೇಳೆ ಮನೆಯಲ್ಲಿದ್ದ ಕೆಲ ವಸ್ತುಗಳನ್ನು ದರೋಡೆ ಮಾಡಲಾಗಿತ್ತು.