Asianet Suvarna News Asianet Suvarna News

ಬೆಳಗಾವಿ: ಕ್ರೈಂ ಸೆರೆ ಹಿಡಿಯಬೇಕಾದ ಸಿಸಿ ಕ್ಯಾಮೆರಾ ಕಣ್ಣುಗಳೇ ಕುರುಡು..!

ಸುಮಾರು 25 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ಅಳವಡಿಸಲಾದ 107 ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಹುತೇಕ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಐದು ಕ್ಯಾಮೆರಾಗಳು ಸಂಪೂರ್ಣ ಹಾಳಾಗಿವೆ. ಕೆಲವು ತಿಂಗಳಿಂದ 47 ಕ್ಯಾಮೆರಾಗಳು ಕಾರ್ಯವನ್ನೇ ಮಾಡುತ್ತಿಲ್ಲ. ಸದ್ಯ 55 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಇದೇ ಕಾರಣದಿಂದ ಬೆತ್ತಲೆ ರೈಡಿಂಗ್ ಪ್ರಕರಣದ ಬಗ್ಗೆಯೂ ಸಾಕ್ಷಿ ಲಭ್ಯವಾಗುತ್ತಿಲ್ಲ.

 

Surveillance Cameras in Belagavi are not Working
Author
Bangalore, First Published Aug 20, 2019, 11:47 AM IST
  • Facebook
  • Twitter
  • Whatsapp

ಬೆಳಗಾವಿ(ಆ.20): ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆ ಹಾಗೂ ಶಾಂತಿ ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೋಟಿ ವೆಚ್ಚದಲ್ಲಿ ಅಳವಡಿಸಿರೋ ಸಿಸಿಟಿವಿ ಕ್ಯಾಮೆರಾಗಳು ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ.

ನಗರದಲ್ಲಿ ಪ್ರತಿಯೊಂದು ಕಾರ್ಯಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕಾದ ಕೋಟ್ಯಂತರ ರು. ವೆಚ್ಚದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಸ್ತಬ್ದಗೊಂಡಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಸಮಾಜಘಾತುಕ ಚಟುವಟಿಕೆಗಳನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ.

25ಕೋಟಿ ಅನುದಾನದಲ್ಲಿ ಸಿಸಿಟಿವಿ ವ್ಯವಸ್ಥೆ:

ನಗರದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2014ರಲ್ಲಿ ಬೆಲ್‌ಟ್ರ್ಯಾಕ್‌ ಯೋಜನೆಗೆ 25 ಕೋಟಿ ಅನುದಾನ ನೀಡಿದೆ. ಅಲ್ಲದೆ ಇನ್ನಿತರ ಮೂಲಗಳಿಂದ ನಗರದ ಪ್ರಮುಖ ಕೇಂದ್ರ, ವೃತ್ತ ಹಾಗೂ ಬೀದಿಗಳಲ್ಲಿ ಅತ್ಯಾಧುನಿಕ ಉಪಕರಣ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದರಿಂದ ಬಹುತೇಕ ಕ್ಯಾಮೆರಾಗಳು ಸ್ತಬ್ದಗೊಂಡಿವೆ.

ಬೆತ್ತಲೆ ರೈಡಿಂಗ್ ಪ್ರಕರಣ ಪತ್ತೆ ಹಚ್ಚೋಕೆ ಸಾಕ್ಷಿಯೇ ಇಲ್ಲ:

ಆ.13 ರಂದು ರಾತ್ರಿ ನಗರದಲ್ಲಿ ಯುವತಿಯೋರ್ವಳು ಬೆತ್ತಲೆಯಾಗಿ ದ್ವಿಚಕ್ರ ವಾಹನ ಚಲಾಯಿದ್ದಾಳೆ ಎಂದು ಹೇಳಲಾಗುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಸಾಕ್ಷಿಯಾಗಬೇಕಿದ್ದ ಕ್ಯಾಮೆರಾಗಳು ಇಲ್ಲದಿರುವುದೇ ಈಗ ಪೊಲೀಸರಿಗೆ ಸಂಕಷ್ಟಸ್ಥಿತಿ ತಂದೊಡ್ಡಿದ್ದು, ವಿಫಲತೆಯನ್ನು ತಂದೊಡ್ಡಿದೆ.

107 ಸಿಸಿ ಕ್ಯಾಮೆರಾ ಅಳವಡಿಕೆ:

ಬೆಲ್‌ಟ್ರ್ಯಾಕ್‌ ಯೋಜನೆಗೂ ಮುಂಚೆ ಸಿದ್ದಗೊಂಡಿದ್ದ ‘ಸೇಫ್‌ಸಿಟಿ’ ಯೋಜನೆಯ ಪ್ರಮುಖ ಅಂಶಗಳನ್ನೂ ಬೆಲ್‌ಟ್ರ್ಯಾಕ್‌ನಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸಂಚಾರ ನಿಯಂತ್ರಣಕ್ಕೆ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಎನ್‌ಫೋರ್ಸ್‌ಮೆಂಟ್‌ ಕ್ಯಾಮರಾ, ಟ್ರಾಫಿಕ್‌ ಮ್ಯಾನೇಜಮೆಂಟ್‌ ಸೆಂಟರ್‌, ಸರ್ವೆಲೆನ್ಸ್‌ ಕ್ಯಾಮೆರಾ, ವೆಹಿಕಲ್ ಆ್ಯಕ್ಟಿವೇಟೆಡ್‌ ಸಿಗ್ನಲ್ ಅಳವಡಿಕೆಗೆ ಒತ್ತು ನೀಡಲಾಗಿತ್ತು. ಈ ಮೂಲಕ ನಗರದಲ್ಲಿ ಒಟ್ಟು 107 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಐದು ಕ್ಯಾಮೆರಾಗಳು ಸಂಪೂರ್ಣ ಹಾಳಾಗಿವೆ. ಕೆಲವು ತಿಂಗಳಿಂದ 47 ಕ್ಯಾಮೆರಾಗಳು ಕಾರ್ಯವನ್ನೇ ಮಾಡುತ್ತಿಲ್ಲ. ಸದ್ಯ 55 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ.

ಬೆಳಗಾವಿ: ಪೊಲೀಸ್ ಮನೆಯಲ್ಲೇ ಕಳ್ಳತನ..!

ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರಕ್ಕೆ, ಅಕ್ರಮ ಚಟುವಟಿಕೆಗಳು ತಳ ಊರದಿರಲಿ ಎಂಬ ಆಶಾಭಾವನೆ ನಗರದ ಜನತೆಯದ್ದಾಗಿತ್ತು. ಆದರೆ. ಪೊಲೀಸ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳು ಹಾಳಾಗಿವೆ. ಅಲ್ಲದೇ ನಗರದಲ್ಲಿ ನಡೆದ ಸಮಾಜ ಸ್ವಾಸ್ಥ್ಯ ಹಾಳು ಮಾಡುವಂತಹ ಘಟನೆಗಳು ನಡೆದರೂ, ಸಿಸಿಟಿವಿ ದೃಶ್ಯಾವಳಿಗಳು ಇಲ್ಲದಿರುವುದರಿಂದ ಪತ್ತೆ ಹಚ್ಚಲು ತಿಣುಕಾಡುವಂತಹ ಪರಿಸ್ಥಿತಿ ಸದ್ಯ ಎದುರಾಗಿದೆ.

ಕಾರ್ಯನಿರ್ವಹಿಸದ ಸಿಗ್ನಲ್‌:

ನಗರದ ಬೋಗಾರವೆಸ್‌ ವೃತ್ತದಲ್ಲಿರುವ ಸಿಗ್ನಲ್‌ ಲೈಟ್‌ಗೆ ಸೋಲಾರ ಮೇಲೆ ಅಳವಡಿಸಲಾಗಿದ್ದ ಬ್ಯಾಟರಿಯನ್ನು ಕಳೆದ ಕೆಲವು ದಿನಗಳ ಹಿಂದೆಯೇ ಕಳ್ಳತನ ಮಾಡಲಾಗಿದೆ. ಇದರಿಂದ ಕಳೆದ ನಾಲ್ಕು ದಿನಗಳಿಂದ ಸಿಗ್ನಲ್‌ ಕಾರ್ಯನಿರ್ವಹಿಸುತ್ತಿಲ್ಲ. ಕ್ಯಾಮೆರಾ ಹಿಂಭಾಗದಲ್ಲಿ ಬ್ಯಾಟರಿ ಅವಳವಡಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ದುಷ್ಕರ್ಮಿಗಳು ಕಳ್ಳತನ ಮಾಡಿದ್ದರಿಂದ ಸಂಚಾರಿ ಪೊಲೀರು ಖಡೆಬಜಾರದಿಂದ ಕ್ಯಾಂಪ ಪ್ರದೇಶ ಕಡೆಗೆ ಹೋಗುವ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಸಂಚಾರಿ ಪೊಲೀಸರೇ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಳ್ಳತನ ಘಟನೆಯಿಂದ ಪೊಲೀಸರು ತಮ್ಮ ವಸ್ತುಗಳನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಅಂತಹದರಲ್ಲಿ ನಗರದ ಸುರಕ್ಷತೆ ಎಲ್ಲಿಂದ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ನಗರದ ಜನತೆಯಲ್ಲಿ ಮೂಡಿದೆ.

-ಜಗದೀಶ ವಿರಕ್ತಮಠ ಬೆಳಗಾವಿ

Follow Us:
Download App:
  • android
  • ios