Asianet Suvarna News Asianet Suvarna News

ಮಂಡ್ಯ ಜಿಲ್ಲೆಯ ದೇವರುಗಳಿಗೆ ಸಂಕಟ, ಬೇರೆ ದಾರಿ ಇಲ್ಲ ಇದು ಸುಪ್ರೀಂ ಆದೇಶ!

ಜಿಲ್ಲಾಡಳಿತಕ್ಕೆ ತಲೆನೋವು ತಂದ ಸುಪ್ರೀಂ ಕೋರ್ಟ್ ಆದೇಶ/ ಮಂಡ್ಯ ಜಿಲ್ಲೆಯಲ್ಲಿನ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ/ ಒಟ್ಟು 140 ಕಟ್ಟಡಗಳಿಗೆ ನೋಟಿಸ್

Supreme court orders to vacate illegal religious structures Mandya District
Author
Bengaluru, First Published Jan 27, 2020, 11:31 PM IST

ಮಂಡ್ಯ[ಜ.27] ಸಂಕಟ ಬಂದಾಗ ವೆಂಕಟರಮಣ  ಎಂದು ಮನುಷ್ಯ ಏನಾದ್ರು ತೊಂದರೆ ಬಂದರೆ ದೇವಾಲಯಕ್ಕೆ ಹೋಗಿ ದೇವರ ಮುಂದೆ ಕೂತು ಬಿಡ್ತಾನೆ. ಸಮಸ್ಯೆ ಬಗೆಹರಿಯುತ್ತೋ‌ ಇಲ್ವೋ ಗೊತ್ತಿಲ್ಲ. ದೇವಾಲಯಕ್ಕೆ ಹೋದ್ರೆ ಮನಸ್ಸಿಗೆ ನೆಮ್ಮದಿ ಅಂತು ಸಿಗುತ್ತೆ. ಆದ್ರೆ ನಾವೀಗ ತೋರಿಸುವ ಸ್ಟೋರಿ ಮಂಡ್ಯದ ದೇವಾಲಯಗಳಿಗೆ ಎದುರಾಗಿರುವ ತೊಂದರೆಗಳ ಬಗ್ಗೆ. ಅರೇ ಏನದು ತೊಂದರೆ ಅಂತೀರಾ..?

ಹೌದು, ನಮ್ಮದೇಶದಲ್ಲಿ ಅದೇಷ್ಟೋ ಮಂದಿರಗಳು, ಮಸೀದಿ, ಚರ್ಚ್‌ಗಳಿವೆ. ಜನರು ಅವರವರ ಭಾವನೆಗೆ ತಕ್ಕಂತೆ ದೇವಾಲಯಗಳನ್ನ ನಿರ್ಮಿಸಿಕೊಂಡಿದ್ದಾರೆ. ಕೆಲವೊಂದು ಸ್ವಂತ ಜಾಗದಲ್ಲಿ ಕಟ್ಟಲಾಗಿದ್ರೆ. ಮತ್ತೆ ಕೆಲವು ರಸ್ತೆ, ಪಾರ್ಕ್, ಸರ್ಕಾರಿ ಜಾಗಗಳಲ್ಲಿ ನಿರ್ಮಿಸಲಾಗಿದ್ದು ಅಂತಹ ಧಾರ್ಮಿಕ ಕಟ್ಟಡಗಳಿಗೆ ಇದೀಗ ಕಂಟಕ ಎದುರಾಗಿದೆ.ಸುಪ್ರೀಂ ಕೋರ್ಟ್ 2009 ನವೆಂಬರ್ 7 ಮತ್ತು 2010 ಫೆಬ್ರವರಿ 16ರ ನಿರ್ದೇಶನದಂತೆ ಮಂಡ್ಯ ಜಿಲ್ಲೆ ವ್ಯಾಪ್ತಿಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ  ಜಿಲ್ಲಾಡಳಿತ ರೆಡಿಯಾಗಿದ್ದು. ಮಂದಿರ ಮಸೀದಿಗಳು ಸೇರಿದಂತೆ ಒಟ್ಟು 140 ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ.

ಅದರಲ್ಲಿ ಈಗಾಗಲೇ 71ಕಟ್ಟಡಗಳನ್ನ ತೆರವು ಗೊಳಿಸಲಾಗಿದ್ದು. ಉಳಿದ 69 ಕಟ್ಟಡಗಳಿಗೆ ನೋಟೀಸ್ ನೀಡಲಾಗಿದೆ. ಕಳೆದ ಎರಡು ವಾರದಲ್ಲಿ 3 ಅನಧಿಕೃತ ಕಟ್ಟಡ ತೆರವು ಮಾಡಲಾಗಿದೆ. ಇನ್ನುಳಿದ 66 ಕಟ್ಟಡಗಳ ನಿರ್ವಹಣಾ ಮಂಡಳಿಗೆ ನೋಟೀಸ್ ನೀಡಲಾಗಿದ್ದು ಅವರಿಂದ ಪ್ರತಿಕ್ರಿಯೆ ಪಡೆದ ನಂತರ ಅದು ಅನಧಿಕೃತ ಕಟ್ಟಡವಾದಲ್ಲಿ ಅವರ ಮನವೊಲಿಸಿ ತೆರವುಗೊಳಿಸಲಾಗುವುದು ಕಾನೂನು ಪಾಲನೆ ನಮ್ಮ ಗುರಿ ಎಂದು ಮಂಡ್ಯ ಡಿಸಿ ಎಂ.ವಿ ವೆಂಕಟೇಶ್ ತಿಳಿಸಿದ್ದಾರೆ.

ನಿಖಿಲ್ ಮದುವೆ ಬಗ್ಗೆ ಬ್ರೇಕಿಂಗ್ ಸುದ್ದಿ ಕೊಟ್ಟ ಕುಮಾರಸ್ವಾಮಿ

ಇನ್ನೂ ಜನರ ಭಾವನೆಗಳ ಪ್ರತೀಕವಾಗಿರುವ ಧಾರ್ಮಿಕ ಕಟ್ಟಡಗಳ ತೆರವು ವಿಚಾರ ಮಂಡ್ಯ ಜಿಲ್ಲಾಡಳಿತಕ್ಕೆ ಅತಿದೊಡ್ಡ ಸವಾಲಾಗಿದ್ದು. ತೆರವಿಗೆ ಮುಂದಾದರೇ ಜನರ ಆಕ್ರೋಶ ಎದುರಿಸಬೇಕಾದ ಸಾಧ್ಯತೆ ಹೆಚ್ಚಾಗಿದೆ. ದೇವಾಲಯಗಳ ತೆರವಿನ ಪಟ್ಟಿಯಲ್ಲಿ ಮಂಡ್ಯ ನಗರದ ಪ್ರಮುಖ ದೇವಾಲಯಗಳ ಹೆಸರಿದ್ದು. ರೈಲ್ವೆ ಸ್ಟೇಷನ್ ಹತ್ತಿರದ ಅಯ್ಯಪ್ಪಸ್ವಾಮಿ ಟೆಂಪಲ್. ಡಿಸಿ ಆಫೀಸ್ ಹಿಂಭಾಗದ ಸುಬ್ರಹ್ಮಣ್ಯ ನಾಗರಕಟ್ಟೆ. ಹಳೇ ತಾಲೂಕು ಕಚೇರಿ ಆವರಣದ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ನಗರದಲ್ಲೇ 12 ದೇವಾಯಯಗಳಿಗೆ ನೋಟೀಸ್ ನೀಡಲಾಗಿದೆ. ಆದ್ರೆ ದೇವಾಲಯದ ಟ್ರಸ್ಟ್‌ಗಳ ಮಾತ್ರ ಯಾವುದೇ ಕಾರಣಕ್ಕೂ ತೆರವಿಗೆ ಅವಕಾಶ ಕೊಡಲ್ಲ ಎನ್ನುತ್ತಿದ್ದು. ಪಾರಂಪರಿಕ ದೇವಾಲಯಗಳನ್ನ ಕೆಡವಿ ಜನರ ಭಾವನೆಗೆ ಧಕ್ಕೆ ತರಬಾರದು ಎನ್ನಲಾಗುತ್ತಿದೆ.

ಒಟ್ಟಾರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿದ್ದು.ಜನರ ವಿರೋಧದ ನಡುವೆ ತೆರವು ಕಾರ್ಯಾಚರಣೆ ಹೇಗೆ ನಡೆಯಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ.

Follow Us:
Download App:
  • android
  • ios