Asianet Suvarna News Asianet Suvarna News

Peripheral Ring Road: ಬೆಂಗ್ಳೂರು ಪೆರಿಫೆರಲ್ ರಿಂಗ್ ರೋಡ್‌ಗೆ ಹಸಿರು ನಿಶಾನೆ

*   ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಇದೀಗ ಮರುಜೀವ
*   ರಿಂಗ್ ರೋಡ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು 
*   ಸಂಪುಟ ಸಭೆಯಲ್ಲಿ ನಿರ್ಧರಿಸಿದ ಬಳಿಕ ಜಾಗತಿಕ ಟೆಂಡರ್‌ಗೆ ಆಹ್ವಾನ
 

Supreme Court Green Light to Bengaluru Peripheral Ring Road Project grg
Author
Bengaluru, First Published Jan 17, 2022, 12:44 PM IST

ಬೆಂಗಳೂರು(ಜ.17): ನಗರದಿಂದ ತುಮಕೂರು(Tumakuru) ರಸ್ತೆ ಹಾಗೂ ಹೊಸೂರು(Hosur) ರಸ್ತೆಯನ್ನ ಸಂಪರ್ಕಿಸುವ ಎಂಟು ಪಥದ ಬೈಪಾಸ್‌ ಪೆರಿಫೆರಲ್ ರಿಂಗ್ ರೋಡ್‌ಗೆ(Peripheral Ring Road) ಹಸಿರು ನಿಶಾನೆ ಸಿಕ್ಕಿದೆ.  ಹೌದು, ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಭೂಸ್ವಾಧೀನ ಅಡೆತಡೆ ಮತ್ತು ಹಣಕಾಸಿನ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿದ್ದ ಯೋಜನೆ ಇದೀಗ ಮರುಜೀವ ಸಿಕ್ಕಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ(Land Acquisition) ಪ್ರಕ್ರಿಯೆ ಮುಂದಾಗುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(BDA) ಸುಪ್ರೀಂಕೋರ್ಟ್‌(Supreme Court) ಆದೇಶಿಸಿತ್ತು. 

ಈ ಯೋಜನೆಯನ್ನ(PRR) ಕಾರ್ಯಗತಗೊಳಿಸಲು ಅನಕೂಲವಾಗುವಂತೆ ಬಹಳ ಉತ್ಸುಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವಿವರಗಳು ಹಾಗೂ ಟೆಂಡರ್‌ಅನ್ನು ಅಂತಿಮಗೊಳಿಸಲು ಎರಡು ಬಾರಿ ಸಭೆಯಗಳನ್ನ ಮಾಡಿರುವುದಾಗಿ ರಾಜ್ಯ ಸರ್ಕಾರ(Government of Karnataka) ಸುಪ್ರೀಂಕೋರ್ಟ್‌ಗೆ ಹೇಳಿದೆ ಎಂದು ತಿಳಿದು ಬಂದಿದೆ.

Karnataka  Govt; ಜೋಗ ರೋಪ್ ವೇ, ಬೆಂಗಳೂರು ರಿಂಗ್ ರೋಡ್,  52  ಯೋಜನೆಗೆ ಖಾಸಗಿ ಸಹಭಾಗಿತ್ವ

21,091 ಕೋಟಿ ಮೊತ್ತದ ಯೋಜನೆಯನ್ನ ರಾಜ್ಯ ಸರ್ಕಾರ ಹಾಗೂ ಬಿಡಿಎ ಎರಡೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲು ನಿರ್ಧರಿಸಿವೆ. ತಜ್ಞರ ಸಲಹೆಯ ಮೇರೆಗೆ ಟೆಂಡರ್‌(Tender) ಪ್ರಕ್ರಿಯೆ ದಾಖಲೆಯನ್ನಿ ಬಿಡಿಎ ಸಿದ್ಧಪಡಿಸಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. 

ಸಂಪುಟ ಸಭೆಯಲ್ಲಿ ನಿರ್ಧರಿಸಿದ ಬಳಿಕ ಜಾಗತಿಕ ಟೆಂಡರ್‌ಗೆ ಆಹ್ವಾನ

ಈ ಸಂಬಂಧ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌(SR Vishwanath) ಅವರು,  ಕಳೆದು ಒಂದು ತಿಂಗಳ ಹಿಂದೆಯೇ ಈ ಯೋಜನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ(Cabinet Meeting) ಚರ್ಚಿಸಲಾಗಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಸ್ಪಷ್ಟತೆ ಇರುವುದರಿಂದ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ ಅಂತ ತಿಳಿಸಿದ್ದಾರೆ. ಇದೀಗ ಪೆರಿಫೆರಲ್ ರಿಂಗ್ ರೋಡ್‌ ಯೋಜೆನೆಗೆ ಸುಪ್ರೀಂಕೋರ್ಟ್‌ ಹಸಿರು ನಿಶಾನೆ ತೋರಿದೆ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಬಳಿಕ ಜಾಗತಿಕ ಟೆಂಡರ್‌ಗೆ(Global Tender) ಆಹ್ವಾನಿಸಲಾಗುವುದು ಅಂತ ಹೇಳಿದ್ದಾರೆ.

73 ಕಿಮಿ ಉದ್ದದ ಈ ರಸ್ತೆಯು ಬೆಂಗಳೂರಿನ(Bengaluru) ಈಶಾನ್ಯ, ಪೂರ್ವ ಮತ್ತು ಆಗ್ನೇಯ ಭಾಗಗಳನ್ನು ಸಂಪರ್ಕಿಸಲಿದೆ. ಇದರೊಂದಿಗೆ ಬೆಂಗಳೂರು ತನ್ನ ಪರಿಧಿಯಲ್ಲಿ 116-ಕಿಮೀ ಉದ್ದದ ಬೈಪಾಸ್ ಅನ್ನು ಹೊಂದಿದ ನಗರವಾಗಲಿದೆ. 

2007 ರಲ್ಲಿ ಬಿಡಿಎ PRR ಮಾರ್ಗವನ್ನು ಪ್ರಸ್ತಾಪಿಸಿದ್ದ ವೇಳೆ, ಪೆರಿಫೆರಲ್ ರಿಂಗ್ ರೋಡ್‌ ಯೋಜನೆಗೆ 1,810 ಎಕರೆ  ಭೂಸ್ವಾಧೀನಕ್ಕೆ ಸೂಚಿಸಿತ್ತು.  ಆದರೆ ನಂತರದ ವಿನ್ಯಾಸದಲ್ಲಿನ ಬದಲಾವಣೆಗಳಿಂದಾಗಿ 750 ಎಕರೆಗಳಷ್ಟು ಭೂಮಿ ಹೆಚ್ಚುವರಿಯಾಗಿ ಬೇಕಾಗಿದೆ. 

ಪೆರಿಫೆರಲ್ ರಿಂಗ್ ಯೋಜನೆಗೆ ದಾರಿಯುದ್ದಕ್ಕೂ ಟೋಲ್ ಪ್ಲಾಜಾಗಳು ಮತ್ತು ವಿಶ್ರಾಂತಿ ಕೊಠಡಿಗಳಂತಹ ಸೌಲಭ್ಯಗಳನ್ನು ಒದಗಿಸಲು ಹೆಚ್ಚುವರಿ ಭೂಮಿಯ ಅಗತ್ಯವಿದೆ ಅಂತ ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ಇನ್ನು ಈಗಾಗಲೇ ಅಧಿಸೂಚಿತ ಭೂಮಿಯನ್ನು ಬಳಸಿಕೊಂಡು ಹಾಗೂ ಹೆಚ್ಚುವರಿ ಭೂಮಿಯನ್ನು ನಂತರ ಸ್ವಾಧೀನಪಡಿಸಿಕೊಂಡು ಯೋಜನೆ ಪ್ರಾರಂಭಿಸುವಂತೆ ಈ ಹಿಂದೆಯೇ ಹೈಕೋರ್ಟ್ ಬಿಡಿಎಗೆ ಸೂಚಿಸಿತ್ತು. ನೈಸ್‌ ರಸ್ತೆಯೊಂದಿಗೆ PRR ಅನ್ನು ಸಂಯೋಜಿಸಲು ಪೆರಿಫೆರಲ್ ರಿಂಗ್ ಯೋಜನೆಯ ವಿನ್ಯಾಸವನ್ನ ಬಿಡಿಎ ಬದಲಾಯಿಸಿದೆ.  ರಸ್ತೆಯ ಉದ್ದವನ್ನ 65 ಕಿಮೀ ನಿಂದ 73 ಕಿಮೀಗೆ ಹೆಚ್ಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರು- ಚೆನ್ನೈ, ರಿಂಗ್‌ ರೋಡ್‌ಗೆ 2024ರ ಗಡುವು

ರಿಂಗ್ ರೋಡ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು : 

ಪೆರಿಫೆರಲ್ ರಿಂಗ್ ರೋಡ್‌ ಯೋಜನೆಯಲ್ಲಿ ಏರ್ ಆಂಬ್ಯುಲೆನ್ಸ್‌ಗಳಿಗೆ(Air Ambulance) ಹೆಲಿಪ್ಯಾಡ್‌ಗಳು ಮತ್ತು ಇತರ ಸೌಲಭ್ಯಗಳ ಜೊತೆಗೆ ವಿದ್ಯುತ್‌ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದಗಳನ್ನ ಹೊಂದಿರುತ್ತದೆ. ಇದು ಸಿಗ್ನಲ್ ಮುಕ್ತವಾಗಿರುತ್ತದೆ ಮತ್ತು ವಿವಿಧ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳು ಮತ್ತು ಫ್ಲೈಓವರ್‌ಗಳನ್ನು ಒಳಗೊಂಡಿರುವ ಹಲವಾರು ಕ್ಲೋವರ್‌ಲೀವ್‌ಗಳನ್ನು ಹೊಂದಿರುತ್ತದೆ ಎಂದು ಹಿರಿಯ ಬಿಡಿಎ ಎಂಜಿನಿಯರ್‌ವೊಬ್ಬು ತಿಳಿಸಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ಯೋಜನೆಗೆ ಸುಮಾರು 3000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ನಿರ್ಮಾಣದಲ್ಲಿನ ದೀರ್ಘ ವಿಳಂಬದಿಂದ ಭಾರಿ ವೆಚ್ಚವನ್ನು ಮೀರಿದೆ ಎಂದು ತಿಳಿದು ಬಂದಿದೆ ಇತ್ತೀಚಿನ ಅಂದಾಜಿನ ಪ್ರಕಾರ, ಭೂಸ್ವಾಧೀನಕ್ಕೆ 15,475 ಕೋಟಿ ರೂ.ವೆಚ್ಚವಾಗಲಿದ್ದು ಹಾಗೂ ಸಂಪೂರ್ಣ ಯೋಜನಾ ವೆಚ್ಚ 21,091 ಕೋಟಿ ರೂ.ವೆಚ್ಚವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
 

Follow Us:
Download App:
  • android
  • ios