ನವದೆಹಲಿ(ಆ.14): ರಸ್ತೆ ಕಾಮಗಾರಿಗಳು ಆರಂಭವಾಗಿ ಎಷ್ಟೋ ವರ್ಷಗಳು ಆದರೂ ಅವು ಪೂರ್ಣಗೊಳ್ಳುವುದೇ ಇಲ್ಲ. ಹೀಗಾಗಿ ರಸ್ತೆ ಕಾಮಗಾರಿಗಳಿಗೆ ಚುರುಕು ನೀಡುವ ನಿಟ್ಟಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು- ಚೆನ್ನೈ ಸೇರಿದಂತೆ 23 ನೂತನ ಹೆದ್ದಾರಿಗಳ ಪೂರ್ಣಕ್ಕೆ ಗಡುವು ನಿಗದಿಪಡಿದ್ದು, 2025ರ ಮಾರ್ಚ್ ವೇಳೆಗೆ ಎಲ್ಲಾ ರಸ್ತೆಗಳು ಮುಗಿದು ಸಂಚಾರಕ್ಕೆ ಲಭ್ಯವಾಗಲಿವೆ.

272 ಕಿ.ಮೀ. ಉದ್ದದ ಬೆಂಗಳೂರು- ಚೆನ್ನೈ ಹೆದ್ದಾರಿಯನ್ನು 2024ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಅದೇ ರೀತಿ 281 ಕಿ.ಮೀ. ಉದ್ದದ ಬೆಂಗಳೂರು ಸ್ಯಾಟಲೈಟ್‌ ಟೌನ್‌ ವರ್ತುಲ ರಸ್ತೆ 2024ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ; ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ಸರ್ಕಾರ

ಈ ಎಲ್ಲಾ ರಸ್ತೆಗಳ ಒಟ್ಟೂಉದ್ದ 7,800 ಕಿ.ಮೀ. ಆಗಲಿದ್ದು, ಮುಂದಿನ 5 ವರ್ಷಗಳಲ್ಲಿ ಅಂದಾಜು 3.3 ಲಕ್ಷ ಕೋಟಿ ರು. ವೆಚ್ಚವಾಗಲಿದೆ. ಎಕ್ಸ್‌ಪ್ರೆಸ್‌ ಹೆದ್ದಾರಿಗಳ ಜಾಲ ದೇಶದೆಲ್ಲೆಡೆ ಹರಡಿಕೊಂಡಿದ್ದು, ಸೂರತ್‌, ಲಖನೌ, ವಿಶಾಖಪಟ್ಟಣ, ಚೆನ್ನೈ, ಬೆಂಗಳೂರು, ವಿಜಯವಾಡ, ರಾಯ್‌ಪುರ, ಕೋಟಾ, ಖರಗ್‌ಪುರ, ಸಿಲಿಗುರಿಗಳಿಗೆ ಸಂಪರ್ಕ ಕಲ್ಪಿಸಲಿದೆ.

ರಾಜ್ಯದ 2 ಹೆದ್ದಾರಿಗೆ ಗಡುವು

- ಬೆಂಗಳೂರು- ಚೆನ್ನೈ: 272 ಕಿ.ಮೀ. ಉದ್ದ. 2024ರ ಮಾರ್ಚ್‌ಗೆ ಪೂರ್ಣ

- ಬೆಂಗಳೂರು ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ: 281 ಕಿ.ಮೀ. ಉದ್ದ. 2024ರ ಮಾರ್ಚ್‌ಗೆ ಪೂರ್ಣ