ನ.1ರಿಂದಹಾಲಿಗೆ .2.50 ಪ್ರೋತ್ಸಾಹ ಧನ ಹೆಚ್ಚಳ

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿ ನವೆಂಬರ್‌ 1ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ವಿಶೇಷ ಪೋ›ತ್ಸಾಹ ಧನವಾಗಿ 2.50 ರು. ಹೆಚ್ಚಳ ಮಾಡಲು ನಿರ್ಧರಿಸಿದೆ.

Supporting Price For Milk  Raises from Nov 1 snr

 ತುಮಕೂರು (ಅ.29):  ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿ ನವೆಂಬರ್‌ 1 ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ವಿಶೇಷ ಪೋ›ತ್ಸಾಹ ಧನವಾಗಿ 2.50 ರು. ಹೆಚ್ಚಳ ಮಾಡಲು ನಿರ್ಧರಿಸಿದೆ.

ನಗರದ ಹೊರ ವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್‌ ನಿರ್ದೇಶಕ ಎಂ . ಕೆ. ಪ್ರಕಾಶ್‌, ಕೊಂಡವಾಡಿ ಚಂದ್ರ ಶೇಖರ್‌. ಎಚ್‌.ಬಿ. ಶಿವನಂಜಪ್ಪ, ಜಿ. ಚಂದ್ರಶೇಖರ್‌, ಎಚ್‌.ಕೆ. ರೇಣುಕಪ್ರಸಾದ್‌, ಎಸ್‌ . ಆರ್‌. ಗೌಡ, ಚನ್ನಮಲ್ಲಪ್ಪ, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ರಜನಿ ಬಿ ತ್ರಿಪಾಠಿ, ಎಚ್‌.ಕೆ. ರಾಘವೇಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್‌ ಅವರೊಂದಿಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿರುವ ತುಮುಲ್‌ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ, ಜಿಲ್ಲೆಯಲ್ಲಿ ಅತಿ ವೃಷ್ಠಿ, ಮೇವಿನ ಕೊರತೆ, ಜಾನುವಾರುಗಳಲ್ಲಿ ಕಂಡು ಬಂದಿರುವ ಚರ್ಮದ ಗಂಟು ರೋಗದಿಂದ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಒಕ್ಕೂಟವು ನವೆಂಬರ್‌ 1ರಿಂದ ಹಾಲಿನ ದರ ಹೆಚ್ಚಿಸಿ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್‌ ಹಾಲಿಗೆ 2.50 ರು..ನಂತೆ ವಿಶೇಷ ಪೋ›ತ್ಸಾಹ ಧನ ನೀಡಲು ತೀರ್ಮಾನ ಕೈಗೊಂಡಿದೆ. ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚು ವರಿ ಇರುವುದಿಲ್ಲ. 3.5 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 30 ರು., ಸಂಘಗಳಿಗೆ 30.93 ರು. ಹಾಗೂ 41 ಜಿಡ್ಡಿ ನಾಂಶ ಇರುವ ಹಾಲು ಉತ್ಪಾದಕರಿಗೆ 31.54 ರು., ಸಂಘಗಳಿಗೆ 32.47 ರು.ಗಳನ್ನು ನೀಡಲಾಗುವುದು. ಪ್ರಸ್ತುತ ಒಕ್ಕೂಟದಲ್ಲಿ 2022 ಅಕ್ಟೋಬರ್‌ 26ರ ಅಂತ್ಯಕ್ಕೆ 167.42 ಮೆಟ್ರಿಕ್‌ ಟನ್‌ ಬೆಣ್ಣೆ, 243 ಮೆಟ್ರಿಕ್‌ ಟನ್‌ ಕೆನೆ ರಹಿತ ಹಾಲಿನ ಪುಡಿ ಹಾಗೂ 72.40 ಮೆಟ್ರಿಕ್‌ ಟನ್‌ಗಳಷ್ಟುಕೆನೆಭರಿತ ಹಾಲಿನ ಪುಡಿ ದಾಸ್ತಾನು ಇದ್ದು, ಇದರ ಅಂದಾಜು ದಾಸ್ತಾನು ಮೌಲ್ಯ 13.69 ಕೋಟಿ ರೂ.ಗಳಷ್ಟಾಗಲಿದೆ ಎಂದರು.

ಒಕ್ಕೂಟವು ನೀಡುತ್ತಿರುವ ಹಾಲಿನ ದರದ ಜತೆಗೆ ಸರ್ಕಾರದ 5 ರು.ಗಳ ಪೋ›ತ್ಸಾಹ ಧನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಹಾಲು ಉತ್ಪಾದನೆ ಮಾಡಲು ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಜಿಲ್ಲೆಯ ರೈತರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.

ಸೆಪ್ಟೆಂಬರ್‌ ಅಂತ್ಯಕ್ಕೆ 3.48 ಕೋಟಿ ರು. ಲಾಭ

ಒಕ್ಕೂಟದಲ್ಲಿ ಮಾರಾಟದ ಜಾಲವನ್ನು ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ 2022-23ನೇ ಸಾಲಿನ ಅಕ್ಟೋಬರ್‌ 26ರ ಅಂತ್ಯಕ್ಕೆ 286812 ಲೀ. ಮತ್ತು ಆಗಸ್ಟ್‌ 4ರಂದು 313861 ಲೀ. ಹಾಲನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಅದೇ ರೀತಿ ಮುಂಬೈ ಮಹಾನಗರದಲ್ಲಿ ಪ್ರಸ್ತುತ ದಿನವಹಿ ಸರಾಸರಿ 200800 ಲೀ. ಹಾಲು ಮಾರಾಟವಾಗುತ್ತಿದ್ದು, ಆಗಸ್ಟ್‌ 8ರಂದು ಅತಿ ಹೆಚ್ಚು ಅಂದರೆ 239020 ಲೀ.ಹಾಲು ಮಾರಾಟವಾಗಿದೆ. 2022ರ ಸೆಪ್ಟೆಂಬರ್‌ ಮಾಹೆಯಲ್ಲಿ ಲಾಭ-ನಷ್ಟದ ತಃಖ್ತೆ ಪ್ರಕಾರ 2.20 ಕೋಟಿ ರು.ಲಾಭವನ್ನು ಹೊಂದಿದ್ದು, 2022-23ನೇ ಸಾಲಿನ ಸೆಪ್ಟೆಂಬರ್‌ ಅಂತ್ಯಕ್ಕೆ 3.48 ಕೋಟಿ ರು.ಗಳ ಕ್ರೋಢೀಕೃತ ನಿವ್ವಳ ಲಾಭವನ್ನು ಒಕ್ಕೂಟ ಹೊಂದಿದೆ ಎಂದು ಮಹಾಲಿಂಗಯ್ಯ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios