Breaking: ದಾಂಡೇಲಿ ಬಳಿಯ ಕಾಳಿ ನದಿಯಲ್ಲಿ ಮುಳುಗಿ ಹುಬ್ಬಳ್ಳಿ ಒಂದೇ ಕುಟುಂಬದ 6 ಮಂದಿ ಸಾವು!
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ದಾಂಡೇಲಿಗೆ ಪ್ರವಾಸಕ್ಕೆಂದು ತೆರಳಿದ್ದ ಒಂದೇ ಕುಟುಂಬದ 6 ಮಂದಿ ಕಾಳಿ ನದಿ ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ.
ಉತ್ತರ ಕನ್ನಡ (ಏ.21): ರಾಜ್ಯದ ಕರಾವಳಿ ಜಿಲ್ಲೆ ಉತ್ತರ ಕನ್ನಡದ ದಾಂಡೇಲಿ ತಾಲೂಕಿನಲ್ಲಿ ಹರಿಯುವ ಕಾಳಿ ನದಿಯಲ್ಲಿ ಈಜಾಡಲು ತೆರಳಿದ್ದ ಒಂದೇ ಕುಟುಂಬದ 6 ಮಂದಿ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕೋಡಾ ಗ್ರಾಮದ ಬಳಿ ಹರಿಯುವ ಕಾಳಿ ನದಿಯಲ್ಲಿ ಘಟನೆ ನಡೆದಿದೆ. ಹುಬ್ಬಳ್ಳಿಯ ಈಶ್ವರ ನಗರದಿಂದ ಪ್ರವಾಸಕ್ಕೆಂದು ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಹುಬ್ಬಳ್ಳಿಯವರಾಗಿದ್ದು, ಇನ್ನು ಮೂವರು ಬೆಂಗಳೂರಿಗರಾಗಿದ್ದಾರೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ನೆಂಟರ ಮನೆಗೆ ಬಂದಿದ್ದು, ಎಲ್ಲರೂ ಸೇರಿ ಪ್ರವಾಸಕ್ಕೆಂದು ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ನೀರಿನಲ್ಲಿ ಮುಳುಗುತ್ತಿದ್ದ ಒಬ್ಬರನ್ನೊಬ್ಬರು ರಕ್ಷಣೆ ಮಾಡುವುದಕ್ಕೆಂದು ತೆರಳಿ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೀದರ್‌ನಲ್ಲಿ ಮತ್ತೊಂದು ಲವ್ ಜಿಹಾದ್? ಪ್ರೀತಿ ಹೆಸರಲ್ಲಿ ಅನ್ಯಕೋಮಿನ ಯುವಕನಿಂದ 9ನೇ ತರಗತಿ ಬಾಲಕಿಯ ಅತ್ಯಾಚಾರ
ಮೃತರನ್ನು ನಜೀರ್ ಅಹ್ಮದ್ (40), ರೇಷ್ಮಾ ಉನ್ನಿಸಾ (38), ಇಫ್ರಾ ಅಹ್ಮದ್ (15), ಅಲ್ಛೀಯಾ ಅಹ್ಮದ್ (10), ಆಬೀದ್ ಅಹ್ಮದ್ (12) ಹಾಗೂ ಮೋಹಿನ್ ಅಹ್ಮದ್ (6) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಿಂದ ಒಟ್ಟು 8 ಮಂದಿ ಪ್ರವಾಸಕ್ಕೆಂದು ಅಕ್ವಾಡಕ್ಕೆ ಬಂದಿದ್ದರು. ಈ ಪೈಕಿ 6 ಮಂದಿ ಕಾಳಿ ನದಿಯಲ್ಲಿ ಈಜಲು ತೆರಳಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ನುರಿತ ಈಜುಗಾರರ ಸಹಾಯದಿಂದ ಪೊಲೀಸರು ಮೃತ ದೇಹಗಳನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ. ಪ್ರವಾಸಕ್ಕೆಂದು ಬಂದವರ ಪೈಕಿ ನೀರಿಗಿಳಿಯದ ಇಬ್ಬರು ಮಹಿಳೆಯರು ಮಾತ್ರ ಬದುಕುಳಿದಿದ್ದಾರೆ.
ಬೆಳಗಾವಿಯಲ್ಲಿ ಮತ್ತೊಂದು ಲವ್ ಜಿಹಾದ್: ಹಿಂದೂ ಮಹಿಳೆಯನ್ನು ಪ್ರೀತಿಸಿ ಮತಾಂತರಕ್ಕೆ ಯತ್ನ; ಮುಸ್ಲಿಂ ದಂಪತಿ ಅರೆಸ್ಟ್
ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿ ರಕ್ಷಿಸಲು ಹೋಗಿ ಐವರ ಸಾವು:
ಅಕೋಡಾದಲ್ಲಿ ಈಜಾಡಲೆಂದು ನದಿಗಳಿದಿದ್ದ 6 ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗಿದ್ದಳು. ಇದನ್ನು ಗಮನಿಸಿದ ಉಳಿದ 5 ಜನರು ಆಕೆಯನ್ನು ರಕ್ಷಣೆ ಮಾಡಲು ನೀರಿಗಿಳಿದಿದ್ದರು. ಆದರೆ, ರಕ್ಷಣೆ ಮಾಡಲು ಸಾಧ್ಯವಾಗದೇ ನೀರಿನ ಸೆಳೆತದಿಂದಾಗಿ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದರು. ದಾಂಡೇಲಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದಾಂಡೇಲಿ ನಗರದ ಜಂಗಲ್ ಲಾಡ್ಜ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ. ಈ ಘಟನೆ ಕುರಿತಂತೆ ಮುಂದುವರಿದ ತನಿಖೆ ಮುಂದುವರೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.