ಭಾರತೀನಗರ (ನ.10):  ಗ್ರಾಮಗಳ ವಿಚಾರದಲ್ಲಿ ರಾಜಕೀಯ ಬದಿ ಗಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಸಂಸದೆ ಸುಮಲತಾ ಕಿವಿಮಾತು ಹೇಳಿದರು.

ಯಲಾದಹಳ್ಳಿಯಲ್ಲಿ ಪ್ರಧಾನ ಮಂತ್ರಿ ಸಡಕ್‌ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರು ಒಗ್ಗಟಾಗಿ ನಿಂತು ಕೊಂಡರೆ ಗ್ರಾಮ ಸ್ವರಾಜ್ಯದ ಕನಸು ನನಸಾಗಲಿದೆ ಎಂದರು.

ಕೆ.ಆರ್‌.ನಗರ ತಾಲೂಕು ಸೇರಿದಂತೆ ಮಂಡ್ಯ ಲೋಕ ಸಭಾ ಕ್ಷೇತ್ರದ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಸಡಕ್‌ ಯೋಜನೆಯಿಂದ ಅನುದಾನದಿಂದ 289 ಕಿ.ಮೀ ವರೆಗೆ 151 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿದೆ. ಗುಣಮಟ್ಟಕಾಮಗಾರಿಯನ್ನು ಕಾಯ್ದುಕೊಳ್ಳುವಂತೆ ತಿಳಿಸಿದ್ದೇನೆ ಎಂದರು.

ಜೆಡಿಎಸ್ ನಾಯಕರ ವಿರುದ್ಧ ಗರಂ ಆದ ಸುಮಲತಾ : ದಬ್ಬಾಳಿಕೆ ಎಂದು ಅಸಮಾಧಾನ ...

ಜಿಪಂ ಸದಸ್ಯ ಎ.ಎಸ್‌. ರಾಜೀವ್‌ ಮಾತನಾಡಿ, ಸಮುದಾಯ ಭವನ, ರಂಗಮಂದಿರ, ಶಾಲಾಭಿವೃದ್ಧಿ ಕಾಮಗಾರಿಗೆ ಸಂಸದೆ ಸುಮಲತಾ ಅವರು 1.5 ಕೋಟಿ ರು. ಹಣ ಬಿಡುಗಡೆಗೊಳಿಸಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಹಳ್ಳಿಗಳ ಅಭಿವೃದ್ಧಿಗೆ ಕಾಯಕಲ್ಪ ಹಾಕಿ ಉತ್ತಮ ಕೆಲಸ ಮಾಡಲು ಪಣ ತೊಟ್ಟಿದ್ದಾರೆ ಎಂದರು.

ಈ ವೇಳೆ ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ತಾಪಂ ಸದಸ್ಯರಾದ ದೇವೇಗೌಡ, ಬಿ.ಗಿರೀಶ್‌, ಮೆಣಸಗೆರೆ ಮಧುಕುಮಾರ್‌, ಶಶಿ, ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್‌, ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯಧ್ಯಕ್ಷ ಬೇಲೂರು ಸೋಮಶೇಖರ್‌, ಮುಖಂಡರಾದ ಮುಟ್ಟನಹಳ್ಳಿ ಮಹೇಂದ್ರ, ಶಿವಲಿಂಗಯ್ಯ, ತೊರೆಬೊಮ್ಮನಹಳ್ಳಿ ವೆಂಕಟೇಶ್‌ ಇದ್ದರು.