Asianet Suvarna News Asianet Suvarna News

ಜೆಡಿಎಸ್ ನಾಯಕರ ವಿರುದ್ಧ ಗರಂ ಆದ ಸುಮಲತಾ : ದಬ್ಬಾಳಿಕೆ ಎಂದು ಅಸಮಾಧಾನ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅಸಮಾಧಾನ ಹೊರಹಾಕಿದ್ದಾರೆ. ದಬ್ಬಾಳಿಕೆ ಎಂದು ಗರಂ ಆಗಿದ್ದಾರೆ. 

Mandya MP Sumalatha unhappy over JDS Leaders snr
Author
Bengaluru, First Published Nov 10, 2020, 12:24 PM IST

ಭಾರತೀನಗರ (ನ.10):  ಎಂಪಿ ಅನುದಾನದಿಂದ ಈಗಾಗಲೇ ಜಿಲ್ಲಾದ್ಯಂತ ಅಪೂರ್ಣ ಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜಿಸಿದ್ದೇನೆ ಎಂದು ಸಂಸದೆ ಸುಮಲತಾ ಹೇಳಿದರು.

ಪಟ್ಟಣದ ಚಾಂಷುಗರ್‌ ಕಾರ್ಖಾನೆಯ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಹಲವು ಯೋಜನೆಗಳನ್ನು ಸಿದ್ಧಪಡಿಸಿದ್ದೇನೆ ಎಂದರು.

ಶ್ರೀರಂಗಪಟ್ಟಣ, ಮೇಲುಕೋಟೆ ಸೇರಿದಂತೆ ಹಲವು ಜಿಲ್ಲೆಯ ಪ್ರಾಚೀನ ಇತಿಹಾಸವುಳ್ಳ ಸ್ಥಳಗಳನ್ನು ಆಯ್ದು ಟೂರಿಸ್ವ್‌ ಹಬ್ ಸ್ಥಾಪಿಸಲು ಯೋಜಿಸಿದ್ದೇನೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಿ ಜಿಲ್ಲೆಯ ಜನರಿಗೆ ಉದ್ಯೋಗವಕಾಶಗಳು ಲಭಿಸಲಿವೆ. ಜಿಲ್ಲೆಯ ಯುವಜನರಿಗೆ ಅನುಕೂಲವಾಗಲು ಅತ್ಯುತ್ತಮ ಸುಸಜ್ಜಿತ ಕ್ರೀಡಾಂಗಣ ಸ್ಥಾಪಿಸಲು ಕ್ರೀಡಾ ಸಚಿವರೊಂದಿಗೆ ಮಾತನಾಡಿದ್ದೇನೆ. ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಬಂಡವಾಳಗಾರರನ್ನು ಸೆಳೆಯುವುದು ಮುಖ್ಯವಾಗಿದೆ ಎಂದರು.

ಮಹಿಳೆ ಮೇಲೆ ದಬ್ಬಾಳಿಕೆ:  ಜಿಪಂ ಅಧ್ಯಕ್ಷ ಸ್ಥಾನ ಸಂಬಂಧಿಸಿದಂತೆ ಇದು ನಿಜಕ್ಕೂ ಅರ್ಥವಾಗದೇ ಇರುವ ವಿಚಾರ. ಜೆಡಿಎಸ್‌ನವರದ್ದು ಮೇಲ್ನೋಟಕ್ಕೆ ತಪ್ಪು ಎಂದು ಕಂಡು ಬರುತ್ತದೆ. ಇದನ್ನು ಅವರೇ ಹೇಳಬೇಕು. ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡುತ್ತೇನೆ. ಮಹಿಳೆ ಏನಾದರೂ ಸಾಧನೆ ಮಾಡಬೇಕು. ಯಶಸ್ಸು ಸಾಧಿಸಬೇಕು ಎಂದರೆ ಹಲವರು ದಬ್ಬಾಳಿಕೆ ತೋರಿ ಅಡ್ಡಿಪಡಿಸುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ..

ಶಿಷ್ಟಾಚಾರ ಉಲ್ಲಂಘನೆ:  ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುವಾಗ ರಾಜಕೀಯ ಉದ್ದೇಶ ಇಟ್ಟುಕೊಂಡು ಮಾಡಬಾರದು. ನಾನೇ ಮಾಡಿಸಿದೆ ಎಂದು ಲಾಭ ಪಡೆಯುವ ಉದ್ದೇಶ ಶಾಸಕ ಡಿ.ಸಿ.ತಮ್ಮಣ್ಣರವರದ್ದಾಗಿದೆ. ಇದು ನಮ್ಮ ಸ್ವಂತ ಹಣ ಅಲ್ಲ. ಸಾರ್ವಜನಿಕರ ಹಣ ಎಂಬುದನ್ನು ಮರೆಯಬಾರದು ಎಂದರು.

ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗ ಶಾಸಕ ಡಿ.ಸಿ.ತಮ್ಮಣ್ಣ ಈ ಭಾಗದಲ್ಲಿ ಕ್ರಿಯಾಯೋಜನೆ ಮಾಡಿಸಿದ್ದರ ಫಲವಾಗಿ ಜನಸಂಖ್ಯೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿದ್ದಾರೆಂದು ಹೇಳಿ ಗುದ್ದಲಿಪೂಜೆ ಮಾಡಿದ್ದಾರೆ. ಶಿಷ್ಠಾಚಾರದ ಪ್ರಕಾರ ಕ್ಷೇತ್ರದ ಸಂಸದರು ಪಿಎಂಜಿಎಸ್‌ಐ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಆದರೆ, ಡಿ.ಸಿ.ತಮ್ಮಣ್ಣ ಶಿಷ್ಠಾಚಾರ ಉಲ್ಲಂಘಿಘಿಸಿ ಅನಧಿಕೃತವಾಗಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದರು. ಈ ವೇಳೆ ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಸದಸ್ಯ ಎ.ಎಸ್‌. ರಾಜೀವ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios