ಧರ್ಮಸ್ಥಳ ಪ್ರಕರಣದಲ್ಲಿ ಸುಜಾತಾ ಭಟ್‌ ಅವರ ಹೇಳಿಕೆಗಳು ಸುಳ್ಳೆಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲು ಮಾಡಿದೆ. ಮಗಳು ಅನನ್ಯಾ ಭಟ್‌ ಅವರ ಫೋಟೋ ಕೂಡ ಸುಳ್ಳೆಂದು ತನಿಖೆಯಿಂದ ಬಹಿರಂಗವಾಗಿದೆ. ವಾಸಂತಿಯ ಫೋಟೋವನ್ನೇ ಅನನ್ಯಾ ಎಂದು ಬಿಂಬಿಸಿದ್ದಾರೆ.

ಬೆಂಗಳೂರು (ಆ.19): ಧರ್ಮಸ್ಥಳ ಕೇಸ್‌ನಲ್ಲಿ ತನ್ನದೊಂದು ನಾಪತ್ತೆ ಸ್ಟೋರಿಯನ್ನು ತೇಲಿಸಿಬಿಟ್ಟಿದ್ದ ಸುಜಾತಾ ಭಟ್‌ ಹೇಳಿದ್ದ ಸುಳ್ಳುಗಳನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎಳೆ ಎಳೆಯಾಗಿ ಬಿಡಿಸಿ ಇಟ್ಟಿತ್ತು. ಅಸಲಿಗೆ ಸುಜಾತಾ ಭಟ್‌ಗೆ ಅನನ್ಯಾ ಭಟ್‌ ಎನ್ನುವ ಮಗಳೇ ಇರಲಿಲ್ಲ. ಇದರಿಂದಾಗಿ ತನ್ನ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಆಕೆ ನೀಡಿರುವ ಎಲ್ಲಾ ದೂರುಗಳು ಸುಳ್ಳು ಎನ್ನುವುದು ಏಷ್ಯಾನೆಟ್‌ ನ್ಯೂಸ್‌ನ ತನಿಖಾ ವರದಿಯಲ್ಲಿ ಬಹಿರಂಗವಾಗಿತ್ತು. ಅಸಲಿಗೆ ಆಕೆಗೆ ಅನನ್ಯಾ ಭಟ್‌ ಎನ್ನುವ ಮಗಳೇ ಇರಲಿಲ್ಲ. ತನ್ನ ಮಗಳು ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಿದ್ದ ಆಕೆಯ ಸುಳ್ಳುಗಳು ಕಾಲೇಜಿನ ದಾಖಲೆಯಲ್ಲಿ ಬಹಿರಂಗವಾಗಿತ್ತು. ಈಗಾಗಲೇ ಸುಜಾತಾ ಭಟ್‌ ಕುರಿತಾಗಿ ಎರಡು ಎಕ್ಸ್‌ಕ್ಲೂಸಿವ್‌ ವರದಿ ಬಿತ್ತರಿಸಿದ್ದ ಏಷ್ಯಾನೆಟ್‌ ಸುವರ್ಣನ್ಯೂಸ್‌ ಈಗ ಮತ್ತೊಂದು ಬ್ರೇಕಿಂಗ್‌ ಸುದ್ದಿಯೊಂದಿಗೆ ಸುಜಾತಾ ಭಟ್‌ ಸುಳ್ಳುಗಳನ್ನು ಜನರ ಮುಂದಿಟ್ಟಿದೆ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ವರದಿ ರಾಜ್ಯಾದ್ಯಂತ ವೈರಲ್‌ ಆದ ಬೆನ್ನಲ್ಲಿಯೇ ಸುಜಾತಾ ಭಟ್‌ ತನ್ನ ಮಗಳು ಎನ್ನಲಾಗುವ ಅನನ್ಯಾ ಭಟ್‌ ಅವರ ಫೋಟೋವನ್ನು ರಿಲೀಸ್ ಮಾಡಿದ್ದರು. ತನ್ನ ವಕೀಲರ ಮೂಲಕ ಈ ಫೋಟೋ ನೀಡಿದ್ದರು. ಆದರೆ, ಈ ಫೋಟೋದ ಅಸಲಿಯತ್ತು ಈಗ ಬಹಿರಂಗವಾಗಿದೆ.

ಇದು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಮೆಗಾ ಟ್ಚಿಸ್ಟ್ ಕೊಡೋ ಸ್ಟೋರಿ. ಸಂಚಿನ ಕತೆ ಹೆಣೆದವರ ಅಸಲಿಯತ್ತು ಮತ್ತೊಮ್ಮೆ ರಾಜ್ಯದ ಜನರ ಮುಂದೆ ಬಟಾಬಯಲಾಗಿದೆ.

ಸುವರ್ಣ ನ್ಯೂಸ್ ಸುದ್ದಿ ಸರಣಿಗೆ ರಿಯಾಕ್ಟ್ ಮಾಡಿದ್ದ ಸುಜಾತ ಭಟ್ ಮಗಳ ಪೋಟೋ ತೋರಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅನನ್ಯಾ ಹುಟ್ಟೇ ಇಲ್ಲದಿದ್ದರೂ ಪೋಟೋ ಎಲ್ಲಿಂದ ಬಂತು ಅಂತ ಹುಡುಕಿತ್ತು ಸುವರ್ಣ ನ್ಯೂಸ್. ಅದರ ಬೆನ್ನುಬಿದ್ದಾಗ ಸುಜಾತಾ ಭಟ್‌ ತೋರಿಸಿದ ಯುವತಿಯ ಫೋಟೋದ ಸತ್ಯ ಗೊತ್ತಾಗಿದೆ.

2006 ರಿಂದ 2015ರವರೆಗೆ ಸುಜಾತಾ ಭಟ್‌ ಎಲ್ಲಿದ್ದರು ಅನ್ನೋದೇ ಎಲ್ಲರಿಗೂ ಕುತೂಹಲ ಹುಟ್ಟಿಸಿದ ಅಂಶ. ಕೊನೆ ಇದ್ದಕ್ಕಿದ್ದಂತೆ ಬಂದು ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಯೂಟ್ಯೂಬ್ ಒಂದಕ್ಕೆ ಮಾತಾಡುವಾಗ ಸುಜಾತಾ ಭಟ್‌ ಈ ವಿಚಾರ ತಿಳಿಸಿದ್ದರು.

2006ರಲ್ಲಿ ಪ್ರಭಾಕರ್ ಬಾಳಿಗ ತೊರೆದ ಸುಜಾತ ಭಟ್ ಬಂದು ಸೇರಿದ್ದು ಬೆಂಗಳೂರಿಗೆ. ಜೀವನಕ್ಕಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಜಾತಾ ಭಟ್‌ ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ಬರುತ್ತಿದ್ದ ರಂಗಪ್ರಸಾದ್ ಎನ್ನುವ ವ್ಯಕ್ತಿ ಈಕೆಗೆ ಪರಿಚಯವಾಗಿದ್ದ. ಆಸ್ಪತ್ರೆಯಲ್ಲಿ ಆದ ಪರಿಚಯ ಸುಜಾತ ಭಟ್ ಅವರನ್ನ ಮನೆಗೆ ಕರೆತರುವವರೆಗೂ ಬೆಳೆದಿತ್ತು. ರಂಗಪ್ರಸಾದ್ ಅವರ ಹೆಂಡತಿ ಅದಾಗಲೇ ತೀರಿ ಹೋಗಿದ್ದ ಕಾರಣದಿಂದ ಇವರ ಸಂಬಂಧ ಕೂಡ ಲಿವಿಂಗ್‌ ಟುಗೆದರ್‌ಗೆ ತಿರುಗಿತ್ತು. ಈ ರಂಗಪ್ರಸಾದ್‌ಗೆ ಶ್ರೀವತ್ಸ ಹೆಸರಿನ ಮಗ ಹಾಗೂ ಒಬ್ಬ ಮಗಳು ಇದ್ದರು.

ಮಗಳು ಮದುವೆಯಾಗಿ ಗಂಡನ ಮನೆಗೆ ಹೋದರೆ. ಮಗ ಶ್ರೀವತ್ಸ ಕೊಡಗು ಮೂಲದ ವಾಸಂತಿ ಎನ್ನುವ ಯುವತಿಯನ್ನು ಮದುವೆಯಾಗಿದ್ದ. ಶ್ರೀವತ್ಸ ಅವರ ಪತ್ನಿ ವಾಸಂತಿ ರಾಮಯ್ಯ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ವಿವಾಹವಾಗಿ ಹಲವು ವರ್ಷ ಕಳೆದರೂ ಗಂಡ-ಹೆಂಡತಿ ಮಧ್ಯೆ ಸಮರಸ ಮೂಡದ ಹಿನ್ನೆಲೆ ವಾಸಂತಿ ಕೊಡಗಿಗೆ ವಾಪಸಾಗಿದ್ದರು. 2007ರಲ್ಲಿ ಖಿನ್ನತೆಯಿಂದಾಗಿ ವಾಸಂತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಅನಾರೋಗ್ಯದಿಂದಾಗಿ 2015ರಲ್ಲಿ ರಂಗಪ್ರಸಾದ್‌ ಅವರ ಮಗ ಶ್ರೀವತ್ಸ ಕೂಡ ಸಾವು ಕಂಡಿದ್ದಾರೆ.

ಅನನ್ಯಾ ಭಟ್‌ ಆದ ವಾಸಂತಿ!

ಈಗ ಸುಜಾತಾ ಭಟ್‌ ಅದೇ ವಾಸಂತಿ ಪೋಟೋವನ್ನೇ ಅನನ್ಯಾ ಭಟ್ ಪೋಟೋ ಅಂತ ಸುಜಾತ ಭಟ್ ರಿಲೀಸ್‌ ಮಾಡಿದ್ದಾರೆ. ವಾಸಂತಿ ಸಾವನ್ನಪ್ಪಿ 18 ವರ್ಷ ಕಳೆದಿದ್ದು ಯಾರೂ ಕೇಳಲ್ಲ ಅಂತ ವಾಸಂತಿ ಪೋಟೋ ರಿಲೀಸ್ ಮಾಡಿದ್ದಾರೆ. ಹಾಗಂತ ಸುಜಾತಾ ಭಟ್‌ ರಿಲೀಸ್‌ ಮಾಡಿದ್ದು ವಾಸಂತಿ ಅವರ ವಯಸ್ಕ ಫೋಟೋ ಅಲ್ಲ. ವಾಸಂತಿ ಅವರು 20 ವರ್ಷದ ಆಸುಪಾಸು ಇದ್ದ ಫೋಟೋವನ್ನು ಅವರು ರಿಲೀಸ್‌ ಮಾಡಿದ್ದರು. ಈ ಪೋಟೋ ರಿಲೀಸ್ ಆಗ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಆ್ಯಕ್ಟೀವ್ ಆಗಿದ್ದರು. ಇನ್ನೊಂದೆಡೆ ಸುವರ್ಣ ನ್ಯೂಸ್ ವಾಸಂತಿ ಅವರ ಫೋಟೋವನ್ನು ಹಿಡಿದು ಸುಜಾತಾ ಭಟ್‌ ಸುಳ್ಳಗಳನ್ನು ಜನರ ಮುಂದೆ ಇಟ್ಟಿದೆ.