ಕಬ್ಬು ಹೆಚ್ಚುವರಿ ದರ . 150 ಪಾವತಿಯಾಗದಿದ್ದರೆ ಡಿಸಿ ಕಚೇರಿ ಮುತ್ತಿಗೆ
ಕಬ್ಬು ಹೆಚ್ಚುವರಿ ದರ . 150 ಪಾವತಿಯಾಗದಿದ್ದರೆ ಫೆ.28 ರಂದು ಸಾವಿರಾರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ಮೈಸೂರು: ಕಬ್ಬು ಹೆಚ್ಚುವರಿ ದರ . 150 ಪಾವತಿಯಾಗದಿದ್ದರೆ ಫೆ.28 ರಂದು ಸಾವಿರಾರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ಮೈಸೂರಿನ ಗನ್‌ಹೌಸ್ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರೈತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಫ್‌ಆರ್‌ಪಿ ಹೆಚ್ಚುವರಿ ದರ . 150 ಏರಿಕೆ ಮಾಡಿ, ಎರಡು ತಿಂಗಳದರೂ ಕಾರ್ಖಾನೆ ಮಾಲೀಕರು ರೈತರಿಗೆ ಹಣ ಪಾವತಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಫೆ.28 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ರೈತರಿಗೆ ಪೂರಕವಾದ ರೈತರು ಕೇಳಿದ ರಸಗೊಬ್ಬರಗಳು ದೊರೆಯುತ್ತಿಲ್ಲ. ಇದೆಲ್ಲ ಗೊತ್ತಿದ್ದರೂ ಕೃಷಿ ಇಲಾಖೆ ಕಣ್ಣು ಮುಚ್ಚಿಕೊಳ್ಳುತ್ತಿರುವುದು ರೈತರಿಗೆ ತೊಂದರೆ ಆಗುತ್ತಿದೆ ಎಂದು ಅವರು ದೂರಿದರು.
ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರದಲ್ಲಿ ಒಂದು ಕ್ವಿಂಟಾಲ್‌ಗೆ 4 ರಿಂದ 5 ಕೆ.ಜಿ ಕಡಿತ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಬೇಸಿಗೆ ಸಮಯ ದನಕರುಗಳಿಗೆ ಕುಡಿಯಲು ಕೆರೆಕಟ್ಟೆತುಂಬಿಸಲು ಕಬಿನಿ ಕಾವೇರಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಹಗಲು ಸಮಯದಲ್ಲೇ ವಿದ್ಯುತ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡರಾದ ಕುರುಬೂರು ಸಿದ್ದೇಶ್, ಹಾಡ್ಯ ರವಿ, ಕೆಂಡಗಣ್ಣಸ್ವಾಮಿ, ಬಿ.ಪಿ. ಪರಶಿವಮೂರ್ತಿ, ಕುರುಬೂರು ಮಂಜು, ಹಂಪಾಪುರ ರಾಜೇಶ್, ಹೆಗ್ಗೂರು ರಂಗರಾಜ್, ಕಮಲಮ್ಮ, ಪುಷ್ಪಲತಾ, ಕಾಟೂರು ಮಹದೇವಸ್ವಾಮಿ, ಪ್ರಭುಸ್ವಾಮಿ, ಬನ್ನೂರು ಶ್ರೀನಿವಾಸ, ಪುಟ್ಟೇಗೌಡನಹುಂಡಿ ರಾಜು, ನಾಗರಾಜು, ಪಾಳ್ಯ ಸ್ವಾಮಿ ಮೊದಲಾದವರು ಇದ್ದರು.
ರಾಸಾಯನಿಕ ಮುಕ್ತ ಆಹಾರ ಬೆಳೆಯೋಣ
ಹೊಸಪೇಟೆ (ಫೆ.14): ಇಡೀ ಪ್ರಪಂಚದ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಅಹಾರ ಬೆಳೆಯುವ ಸಂಕಲ್ಪ ರೈತರು ಮಾಡಬೇಕು. ಸಾವಯವ ಕೃಷಿಯತ್ತ ಚಿತ್ತ ಹರಿಸಬೇಕು. ಮಾರ್ಕೆಟ್ ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ. ರೈತರ ಬೆನ್ನುಲುವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಆರ್ಟ್ ಆಫ್ ಲಿವೀಂಗ್ ನ ಶ್ರೀ ಶ್ರೀ ರವುಶಂಕರ ಗುರೂಜಿ(Ravishankar Guruji) ನುಡಿದರು.
ನಗರದಲ್ಲಿ ಮಂಗಳವಾರ ನಡೆದ ಆನಂದ ವಿಜಯೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಾವಯವ ಕೃಷಿ(Organic farming)ಯಿಂದ ಬೆಳೆದ ಭತ್ತದಿಂದ ಮಧುಮೇಹ(diabetes) ಕೂಡ ಬರುವುದಿಲ್ಲ. ನಮ್ಮ ಮುಂದಿನ ಪೀಳಿಗೆಗೆ ನಾವು ಉತ್ತಮ ಆರೋಗ್ಯ(Good health) ಕೋಡೋಣ. ಇದಕ್ಕಾಗಿ ದೇಸಿ ತಳಿಯ ವಿವಿಧ ಬಗೆಯ ೧೭೦ ತಳಿಯ ಬಿತ್ತನೆ ಬೀಜ ಸಂಗ್ರಹಿಸಲಾಗಿದ್ದು, ಬೆಂಗಳೂರಿನಲ್ಲಿ ಬಿತ್ತನೆ ಬೀಜ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ತಲೆ ಓಡಿಸಿದ್ರೆ ಹೀಗೂ ಹಣ ಗಳಿಸಬಹುದು, ಏನೇನೋ ಚಿಂತಿಸುವ ಅಗತ್ಯವಿಲ್ಲ
ರೈತರು(Farmerrs) ಸಾವಯವ ಕೃಷಿಯಿಂದ ಜನರ ಅರೋಗ್ಯ ಸಂರಕ್ಷಣೆ ಮಾಡಬಹುದು. ರೈತರು ಉದಾಸೀನ ಹೊಂದಬಾರದು. ಬದಲಾವಣೆಯತ್ತ ಹೊರಳಬೇಕು. ತುಂಗಭದ್ರಾ ಜಲಾಶಯದ ಪ್ರದೇಶದಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಭತ್ತ ಬೆಳೆಯುವ ಸಂಕಲ್ಪತೊಡಬೇಕು ಎಂದರು.
ರೈತರು ಕಣ್ಣೀರು ಹಾಕಬಾರದು:
ದೇಶ ಆರ್ಥಿಕ ಸದೃಢತೆ ಸಾಧಿಸಲು ರೈತರು ಸದೃಢರಾಗಬೇಕು.ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ರೈತರು ಕಣ್ಣೀರು ಹಾಕಬಾರದು. ಹಾಗಾಗಿ ರೈತರಲ್ಲಿ ಅತ್ಮಸ್ಥೈರ್ಯ ತುಂಬಲು ಆರ್ಟ್ ಆಫ್ ಲಿವೀಂಗ್ ಆಶ್ರಮ ರೈತರ ಪರ ನಿಂತಿದೆ. ಕರ್ನಾಟಕದ ರೈತರು ಸ್ವಾವಲಂಬಿ ಜೀವನ ನಡೆಸಬೇಕು. ಉತ್ತರ ಭಾರತ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೂ ನಾವು ಸಾವಯವ ಆಹಾರ ಕಳುಹಿಸಬೇಕು. ನಮ್ಮ ಭೂಮಿಯಲ್ಲಿ ಸಾವಯವ ಬೆಳೆ ಬೆಳೆಯೋಣ. ಮಹಾರಾಷ್ಟ್ರದ ವಿದರ್ಭದಲ್ಲಿ ಜಲತಾರಾ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಅಲ್ಲಿನ ರೈತರು ಖುಷಿಯಾಗಿದ್ದಾರೆ. ರೈತರ ತಲಾ ಆದಾಯವೂ ಹೆಚ್ಚಿದೆ ಎಂದರು.
ಮೂರು ಅಂತಸ್ತಿನ ಮನೆಯಲ್ಲಿ ಸಾವಯವ ಕೃಷಿ, ವರ್ಷಕ್ಕೆ ಭರ್ತಿ 70 ಲಕ್ಷ ಆದಾಯ
ಆರ್ಟ್ ಆಫ್ ಲಿವೀಂಗ್(Art of Living) ನ ಶೇಷಗಿರಿ ಗುಬ್ಬಿ, ವಕೀಲೆ ಹೇಮಾದ್ರಿಬಾಯಿ ಸೇರಿದಂತೆ ಕೃಷಿಪಂಡಿತರು, ರೈತರು ಇದ್ದರು. ರೈತರು ಆರೋಗ್ಯಕರ ಭತ್ತ ಬೆಳೆಯಬೇಕು ಎಂದು ಕೃಷಿಕರಿಗೆ ಗುರೂಜಿ ಸಂಕಲ್ಪ ಮಾಡಿಸಿದರು