ಖಾನಾಪುರ(ಡಿ.28): ಸ್ಥಳೀಯ ಲೈಲಾ ಶುಗರ್ಸ್ ಕಾರ್ಖಾನೆಯಿಂದ ಪ್ರತಿ ಟನ್ ಕಬ್ಬಿಗೆ 2200 ದರದಂತೆ ಮೊದಲ ಕಂತಿನ ಮೊತ್ತವನ್ನು ಕಾರ್ಖಾನೆಗೆ ಡಿ.7ರ ವರೆಗೆ ಕಬ್ಬು ಪೂರೈಸಿದ ರೈತರಿರ ಖಾತೆಗಳಿಗೆ ಪಾವತಿಸಲಾಗಿದೆ ಎಂದು ಕಾಖಾನೆರ್ಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಿ.26ರವರೆಗೆ ಕಾರ್ಖಾನೆ ಒಟ್ಟು 95 ಸಾವಿರ ಟನ್ ಕಬ್ಬು ನುರಿಸಿದೆ. ಡಿ.7ರವರೆಗಿನ ಬಿಲ್ಲು ಈಗಾಗಲೇ ಕಬ್ಬು ಬೆಳೆಗಾರರ ಖಾತೆಗೆ ಜಮಾ ಮಾಡಲಾಗಿದ್ದು, ಡಿಸೆಂಬರ್ ಮುಗಿಯುವದರೊಳಗೆ ಡಿ.15 ರ ವರೆಗಿನ ಬಿಲ್ಲನ್ನು ಜಮಾ ಮಾಡಲಾಗುತ್ತದೆ. ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಎರಡು-ಮೂರು ವಾರಗಳ ಒಳಗೆ ಮೊದಲ ಕಂತು ಪಾವತಿಸುವ ಗುರಿಯನ್ನು ಕಾರ್ಖಾನೆ ಹೊಂದಿದೆ ಎಂದರು. 
ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಮುಗಿಯುವುದರ ಒಳಗಾಗಿ ಎರಡನೇ ಕಂತನ್ನೂ ಪಾವತಿಸಲಾಗುತ್ತದೆ. ತಾವು ಬೆಳೆದ ಕಬ್ಬನ್ನು ಲೈಲಾ ಕಾರ್ಖಾನೆಗೆ ಸಾಗಿಸುವ ಮೂಲಕ ತಮ್ಮೊಂದಿಗೆ ಸಹಕರಿಸ ಬೇಕು ಎಂದು ರೈತರನ್ನು ಕೋರಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲೈಲಾ ಶುಗರ್ಸ್ ಕಾರ್ಖಾನೆಗೆ ಕಳೆದ ವರ್ಷದ ಹಂಗಾಮನಲ್ಲಿ ಕಬ್ಬು ಪೂರೈಸಿರುವ ರೈತರಿಗೆ ಕಾರ್ಖಾನೆಯಿಂದ ಶೀಘ್ರದಲ್ಲೇ ಅಂತಿಮ ಬಿಲ್ಲನ್ನೂ ಪಾವತಿಸಲಾಗುತ್ತದೆ. ಕಳೆದ ವರ್ಷದ ಹಂಗಾಮಿನಲ್ಲಿ ಕಾರ್ಖಾನೆಯ ಕಬ್ಬಿನ ರಿಕವರಿ 11.8 ಪ್ರಮಾಣದಷ್ಟಿದೆ. ಇದರ ಪ್ರಕಾರ ಸರ್ಕಾರ ನಿಗದಿಪಡಿಸಿದ ದರ ಪ್ರತಿ ಟನ್ ಕಬ್ಬಿಗೆ 2099 ಇದ್ದು, ಈಗಾಗಲೇ 2200 ದರ ಪಾವತಿಸಲಾಗಿದೆ. ಪ್ರತಿ ಟನ್ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವಾದ 740 ಇದ್ದು, ಇದನ್ನು ಒಟ್ಟು ಬಿಲ್ಲಿನಲ್ಲಿ ಕಳೆದು ಇನ್ನುಳಿದ ಬಾಕಿ 159 ಬಿಲ್ಲನ್ನು ಕಾರ್ಖಾನೆ ರೈತರಿಗೆ ನೀಡಬೇಕಿದೆ. 

ಸರ್ಕಾರಕ್ಕೆ ಕಬ್ಬಿನ ಸಬ್ಸಿಡಿ ಹಣ ಬಿಡುಗಡೆಗಾಗಿ ಪತ್ರ ಬರೆ ಯಲಾಗಿದ್ದು, ಸಬ್ಸಿಡಿ ಹಣ ಬಿಡುಗಡೆಗೊಂಡ ಕೂಡಲೇ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ಈ ಬಿಲ್ಲನ್ನು ಪಾವತಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.