ಆಪರೇಷನ್ ಸಕ್ಸಸ್... ಮೂರು ದಿನದ ವೈದ್ಯರ ಆರೈಕೆ ಬಳಿಕ ಕಾಡಿಗೆ ಹೊರಟ ನಾಗಪ್ಪ
- ಜಮೀನಿನಲ್ಲಿ ಉಳುಮೆ ಮಾಡುವಾಗ ಗಾಯಗೊಂಡಿದ್ದ ಹಾವು
- ಚಾಮರಾಜನಗರ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
- ಮೂರು ದಿನ ಆರೈಕೆ ಬಳಿಕ ಕಾಡಿಗೆ ಹೊರಟ ನಾಗಪ್ಪ
ಚಾಮರಾಜನಗರ(ಮಾ.4):ಚಾಮರಾಜನಗರದ (chamarajanagara) ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಹಾವೊಂದಕ್ಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ(Surgery) ಮಾಡಿದ ಬಳಿಕ ಮೂರು ದಿನ ಆರೈಕೆ ನಡೆಸಿದ ನಂತರ ಹಾವು ಸಂಪೂರ್ಣ ಚೇತರಿಸಿಕೊಂಡಿದ್ದು, ಈಗ ಕಾಡಿಗೆ ಬಿಡಲಾಗಿದೆ. ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ಆಪರೇಷನ್ ಮಾಡಿದ್ದನ್ನು ನೀವು ಕೇಳಿರಬಹುದು. ಆದರೆ ಹಾವಿಗೆ ಹೌದು ಚಾಮರಾಜನಗರದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಬುಸುಗುಡುವ ಹಾವಿಗೂ ಪಶು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, ವೈದ್ಯರ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ.
ಚಾಮರಾಜನಗರದ ಸೋಮವಾರಪೇಟೆ (Somawarpet) ಬಳಿಯ ಜಮೀನಿನಲ್ಲಿ ಉಳುಮೆ ಮಾಡು ವೇಳೆ ಈ ಹಾವು ಗಾಯಗೊಂಡಿತ್ತು. ಗಾಯಗೊಂಡ ಹಾವನ್ನು ಉರಗ ಪ್ರೇಮಿ(Snake Lover) ಅಶೋಕ್ (Ashok) ಎಂಬುವವರು ಚಾಮರಾಜನಗರದ ಪಶು ವೈದ್ಯಕೀಯ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ವೈದ್ಯರಾದ ಡಾ.ಮೂರ್ತಿ (Dr. Moorthy)ಎಂಬುವವರು ಹಾವಿಗೆ ಚಿಕಿತ್ಸೆ ನೀಡಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಿದ್ದು, ಹಾವು ಈಗ ಗುಣಮುಖವಾಗಿದೆ. ಹುಷಾರಾದ ಹಾವನ್ನು ನಂತರ ಕಾಡಿಗೆ ಬಿಡಲಾಗಿದೆ.
"
Health Tips : ಹಾವು ಕಚ್ಚಿದ್ರೆ ಭಯ ಪಡ್ಬೇಡಿ, ತಕ್ಷಣ ಮಾಡಿ ಈ ಕೆಲಸ
ಹಾವಿನ ಸ್ವರ್ಗ ಪಶ್ಚಿಮ ಘಟ್ಟ:
ಪಶ್ಚಿಮ ಘಟ್ಟವನ್ನು ಹಾವುಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಅದರಲ್ಲೂ ಆಗುಂಬೆ ಮಳೆಕಾಡು ಹತ್ತಾರು ಕೌತುಕಗಳ ಆಗರ ಇದೀಗ ಇಲ್ಲಿ ಗಂಡು ಕಾಳಿಂಗ ಹಾವುಗಳ ಸಂಖ್ಯೆ ಹೆಚ್ಚು. ಆಗುಂಬೆಯಲ್ಲಿರುವ ಗಂಡು ಹೆಣ್ಣು ಕಾಳಿಂಗ (King Cobra( ಸರ್ಪಗಳ ಲಿಂಗಾನುಪಾತ ಹೆಚ್ಚುಕಡಿಮೆ 85:15. ಅಂದರೆ ಇಲ್ಲಿ 100 ಕಾಳಿಂಗ ಸರ್ಪಗಳನ್ನು ಪತ್ತೆಯಾದರೆ ಅವುಗಳಲ್ಲಿ 85 ಗಂಡು ಕಾಳಿಂಗ ಸರ್ಪಗಳು ಮತ್ತು ಕೇವಲ 15 ಹೆಣ್ಣು ಕಾಳಿಂಗ ಸರ್ಪಗಳು ಸಿಗುತ್ತಿವೆ. ಇದು ಯಾಕೆ ಹೀಗೆ ಆಯಿತು ಎಂಬುದಕ್ಕೆ ನಿಖರವಾದ ಕಾರಣಗಳು ಗೊತ್ತಾಗಿಲ್ಲ, ಈ ವ್ಯತ್ಯಾಸ ಹಿಂದೆಯೂ ಹೀಗೆ ಇತ್ತೇ ಅಥವಾ ಇತ್ತೀಚೆಗೆ ಹೀಗಾಯಿತೇ ಅಥವಾ ಇದೊಂದು ಪ್ರಾಕೃತಿಕ ನಿಯಮವೇ ಎಂಬ ಬಗ್ಗೆ ಇದೀಗ ಆಗುಂಬೆಯಲ್ಲಿರುವ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್ (ಎಆರ್‌ಎಫ್‌ಆರ್‌ಎಸ್) ಸಂಶೋಧನೆ (Research) ನಡೆಸುತ್ತಿದೆ.
ಹಾವಗುಲ ಬುದ್ಧಿವಂತಿಕೆ:
ಪ್ರತಿಯೊಂದು ಪ್ರಾಣಿಗೂ ವಂಶವಾಹಿಯ ಮೂಲಕ ಪ್ರಕೃತಿಯಲ್ಲಿ (Nature) ಬದುಕುವ ಬುದ್ಧಿವಂತಿಕೆ ಹರಿದು ಬರುತ್ತದೆ. ಹಾವುಗಳಿಗೂ ಬೇಟೆಯಾಡುವ, ಸಂತಾನೋತ್ಪತ್ತಿ ಮಾಡುವ, ತನ್ನ ವಾಸಸ್ಥಾನದ ವ್ಯಾಪ್ತಿಯನ್ನು ಗುರುತಿಸುವ ಜ್ಞಾನ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ಕಾಳಿಂಗ ಸರ್ಪ ಮಾತ್ರ ಹಾವುಗಳಲ್ಲಿಯೇ ಅತ್ಯಂತ ಬುದ್ಧಿವಂತ ಹಾವು ಎನ್ನುವುದು ಇಲ್ಲಿನ ಆಗುಂಬೆಯ ಮಳೆಕಾಡುಗಳಲ್ಲಿ ನಡೆದ ಸಂಶೋಧನೆಯಲ್ಲಿ ಪತ್ತೆಯಾಗಿದೆ. ತನ್ನ ಆಹಾರವನ್ನು ಹುಡುಕುವ, ಸಂತಾನೋತ್ಪತ್ತಿ ಮಾಡುವ ಇತ್ಯಾದಿ ಜನ್ಮದತ್ತ ಜ್ಞಾನದೊಂದಿಗೆ, ಇನ್ನೂ ಕೆಲವು ಜ್ಞಾನಗಳೊಂದಿಗೆ ಕಾಳಿಂಗ ಸರ್ಪಗಳು ಅತ್ಯಂತ ವ್ಯವಸ್ಥಿತವಾಗಿ ಬದುಕುತ್ತವೆ.
ಅವುಗಳು ಸುಮಾರು 8 - 10 ಕಿ.ಮೀ. ವಿಸ್ತೀರ್ಣ ಪ್ರದೇಶವನ್ನು ತನ್ನ ವಾಸದ ವ್ಯಾಪ್ತಿ (Home Area)ಯನ್ನಾಗಿ ಗುರುತಿಸಿಕೊಳ್ಳುತ್ತದೆ, ಅದರೊಳಗೆ ಸಿಕ್ಕುವ ಹಾವುಗಳನ್ನು ತಿನ್ನುತ್ತವೆ ಮತ್ತು ಅಲ್ಲಿಯೇ ಬದುಕುತ್ತದೆ, ಆ ಪ್ರದೇಶವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ. ಅದು ತಿನ್ನುವುದರಲ್ಲಿಯೂ ಶಿಸ್ತು ಪಾಲಿಸುತ್ತದೆ, ಹಪ್ಪಟೆ ಹಾವುಗಳು (ಕನ್ನಡಿ ಹಾವು) ಸಿಕ್ಕಿದರೆ ದಿನಕ್ಕೊಂದು ಎರಡು ತಿನ್ನುತ್ತವೆ. ಆದರೆ ಕೇರೆಯಂತಹ ದೊಡ್ಡ ಹಾವು ಸಿಕ್ಕಿದರೆ ಅದನ್ನು ತಿಂದು ಮತ್ತೆ ಒಂದು ತಿಂಗಳು ಬೇರೆನೂ ಆಹಾರ ತಿನ್ನುವುದಿಲ್ಲ, ಸುಮ್ಮನೆ ಒಂದು ಕಡೆ ಬಿದ್ದುಕೊಂಡಿರುತ್ತದೆ, ಬಿಸಿಲು ಬಿದ್ದರೆ ಹೊರಗೆ ಬಂದು ಮೈಕಾಯಿಸಿಕೊಂಡು ಮತ್ತೆ ಹೋಗಿ ಮಲಗಿಬಿಡುತ್ತದೆ.