Tumakuru: 20 ಮತ್ತು 90 ದಿನಗಳ ನವಜಾತ ಶಿಶುಗಳಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ: ವೈದ್ಯರ ಸಾಧನೆಯನ್ನು ಶ್ಲಾಘಿಸಿದ ಪರಂ

ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ ಸಮಸ್ಯೆ( TAPVC) ಹಾಗೂ ಟ್ರಂಕಸ್ (Truncus) ರೋಗಕ್ಕೆ ತುತ್ತಾಗಿದ್ದ 20 ಮತ್ತು 90 ದಿನದ ಎರಡು ನವಜಾತ ಶಿಶುಗಳಿಗೆ ಯಶಸ್ವಿಯಾಗಿ  ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 

Successful heart operation For 20 and 90 days childs at tumakuru gvd

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಫೆ.04): ‌ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ ಸಮಸ್ಯೆ( TAPVC) ಹಾಗೂ ಟ್ರಂಕಸ್ (Truncus) ರೋಗಕ್ಕೆ ತುತ್ತಾಗಿದ್ದ 20 ಮತ್ತು 90 ದಿನದ ಎರಡು ನವಜಾತ ಶಿಶುಗಳಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಸಿದ್ದಾರ್ಥ ಕಾಲೇಜಿನ  ಸಿದ್ದಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನ ವೈದ್ಯಕೀಯ ತಂಡ ಈ ಸಾಧನೆ ಮಾಡಿದೆ.‌ 

ವೈದ್ಯಕೀಯ ಲೋಕದಲ್ಲೇ ತೀರಾ ಸಂಕೀರ್ಣವಾದ ಈ ಶಸ್ತ್ರಚಿಕಿತ್ಸೆ ನಡೆಸಿರುವುದು ಭಾರತದಲ್ಲಿ ಅದರಲ್ಲೂ ತುಮಕೂರಿನ‌ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಲ್ಲಿ ನಡೆದಿರುವುದು ಹೆಮ್ಮೆ ತಂದಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ವೈದ್ಯರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಆ ಮಕ್ಕಳಿಗೆ ಮರುಹುಟ್ಟು ನೀಡಿರುವ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ. ಹೈದರಾಬಾದ್ ನಗರದ ನಿವಾಸಿಗಳ ದಂಪತಿಗೆ ಹುಟ್ಟಿದ್ದ ಮಗುವಿಗೆ 20 ದಿನದ ಮಗುವಿಗೆ  TAPVC ಸಮಸ್ಯೆ ಕಾಣಿಸಿಕೊಂಡಿದೆ.  

ಧಾರವಾಡ ಜಿಲ್ಲೆಯಲ್ಲಿ ಕ್ಯಾನ್ಸರ್ ತಪಾಸಣೆಗೆ ಹೆಚ್ಚು ಒತ್ತು: ಸಿಇಓ ಡಾ.ಸುರೇಶ ಇಟ್ನಾಳ

ಇನ್ನೊಂದೆಡೆ ತುಮಕೂರು ಗ್ರಾಮಾಂತರದ ದಂಪತಿಯೊಬ್ಬರಿಗೆ ಜನಿಸಿದ ಮಗುವಿಗೂ ಹೃದಯ ಸಂಬಂಧಿ ಟ್ರಂಕಸ್ (Truncus)  ರೋಗಕ್ಕೆ ತುತ್ತಾಗಿದೆ.‌ ಈ ಮಗು ಕೂಡ ಮೂರು ತಿಂಗಳಲಾಗಿದ್ದು, ಎರಡು ಮಕ್ಕಳು ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಕ್ಕಳಿಗೆ ಪುನರ್ ಜನ್ಮ ನೀಡಲಾಗಿದೆ.  ಈ ಇಬ್ಬರು ಮಕ್ಕಳಿಗೆ ಆಗಿರುವ ಹೃದಯ ಶಸ್ತ್ರಚಿಕಿತ್ಸೆ ಅತೀಸೂಕ್ಷ್ಮವಾಗಿದ್ದು, ಅದು ಯಶಸ್ವಿಯಾಗಿದೆ. ಈ ಮೂಲಕ ತುಮಕೂರು ನಂತರ ನಗರಗಳಲ್ಲೂ ಹೃದಯ ಸಂಬಂಧಿ ಖಾಯಿಲೆಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ಸಿಗುವಂತಾಗಿದೆ. 

ಮಕ್ಕಳ ರೋಗ ಪತ್ತೆಯ ಹಿನ್ನೆಲೆ: ತುಮಕೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಕೃಷಿಕ ಕುಟುಂಬವೊಂದರ 90 ದಿನಗಳ ಮಗುವಿಗೆ  ಸಮಸ್ಯೆ ಕಂಡು ಬಂದಿದೆ. ದಂಪತಿಗಳು  ತುಮಕೂರಿನ 'ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್‌ ಗೆ ಮಗುವನ್ನು ದಾಖಲಿಸಿದ್ದಾರೆ. ಡಾ.ತಮೀಮ್ ಅಹಮ್ಮದ್ ‌ಹಾಗೂ ಅವರ ತಂಡ ಹೃದಯರೋಗದ ಮೂಲವನ್ನು ಪತ್ತೆ ಹಚ್ಚಿದ್ದಾರೆ.‌ ಮಗು ಹುಟ್ಟಿನಿಂದಲೇ ಟ್ರಂಕಸ್ (Truncus) ರೋಗ ಜನ್ಮಜಾತವಾಗಿ ಬಂದಿರುವುದು ವೈದ್ಯ ತಂಡಕ್ಕೆ ಗೊತ್ತಾಗಿದೆ. ಮಗುವಿಗೆ ಶ್ವಾಸಕೋಸದಲ್ಲಿ ಉಸಿರಾಟಕ್ಕೆ ತೊಂದರೆಯಾಗಿದೆ. ಅಲ್ಲದೆ, ರಕ್ತದ ಹರಿಯುವಿಕೆಯಲ್ಲಿ ಒತ್ತಡ ಉಂಟಾಗಿ ಹೃದಯಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿ ಕಾಂಜೆನೈಟಲ್ ಸಮಸ್ಯೆಯನ್ನು ಕುರಿತು ಆಸ್ಪತ್ರೆಯ ವೈದ್ಯರ ತಂಡ, ಸುದೀರ್ಘ ಅವಧಿ ಸಮಾಲೋಚನೆ ನಡೆಸಿ ಉನ್ನತ ತಂತ್ರಜ್ಞಾನ ಮತ್ತು ಆಧುನಿಕ ಉಪಕರಣದ ಮೂಲಕ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಜನ್ಮಜಾತ ರೋಗವನ್ನು ಗುಣಪಡಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಮಂಗಳೂರಿನ ಮೂವರು ಸಾವು!

ಉಳಿದಂತೆ ಹೈದ್ರಬಾದ್ ಮೂಲದ ದಂಪತಿಗಳು ತಮ್ಮ ಮಗುವಿಗೆ ಉಂಟಾದ ಉಸಿರಾಟದ ಸಮಸ್ಯೆಗೆ ಅಲ್ಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಖಾಯಿಲೆ ಗುಣಮುಖವಾಗದ ಪರಿಣಾಮ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನ. ಹಾರ್ಟ್ ಸೆಂಟರ್ ಬಗ್ಗೆ ಮಾಹಿತಿ ಪಡೆದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.‌ ಸಿದ್ದಾರ್ಥ ಅಡ್ವಾನ್ಸ್ಡ್ ಹಾರ್ಟ್ಸ್ ಸೆಂಟರ್‌ನಲ್ಲಿ  ಡಾ. ತಮೀಮ್ ಅಹಮ್ಮದ್, ಡಾ. ಶ್ರೀನಿವಾಸ್, ಡಾ. ವಿಕಾಸ್, ಡಾ. ಸುರೇಶ್, ಡಾ.ತಹೂರ್, ಡಾ.ವಾಂಗ್ಚುಕ್, ಡಾ.ಮಸ್ತಾನ್, ಡಾ. ವಿವೇಕ್, ಜಾನ್ ಸೇರಿದಂತೆ ತಾಂತ್ರಿಕ ಸಿಬ್ಬಂದಿಗಳ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.

Latest Videos
Follow Us:
Download App:
  • android
  • ios