ಸಾಧಿಸುವ ಛಲವಿದ್ದರೆ ಯಶಸ್ಸು ತಾನೇ ಬರುತ್ತೆ: ರಾಜೇಶ್‌ಗೌಡ
ಕಷ್ಟಗಳು ಬಂದ ತಕ್ಷಣ ಮನುಷ್ಯ ಹೆದರಿ ಮನೆಯಲ್ಲಿ ಕುಳಿತರೆ ಜೀವನದಲ್ಲಿ ಏನನ್ನೂ್ನ ಸಾಧಿಸಲು ಸಾಧ್ಯವಿಲ್ಲ. ಎಷ್ಟೇ ಕಷ್ಟಗಳು ಬಂದರೂ ಹಿಮ್ಮೆಟಿಸಿ ಮುನ್ನಡೆಯುವುದೇ ಜೀವನ. ತಾಳ್ಮೆ, ಸಾಧಿಸುತ್ತೇನೆ ಎಂಬ ಛಲ, ಜನರ ಪ್ರೀತಿ-ವಿಶ್ವಾಸ, ದೇವರ ಕೃಪೆ ಆಶೀರ್ವಾದ ಇದ್ದರೆ ಯಶಸ್ಸು ತಾನಾಗಿಯೇ ಬರಲಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.
ಶಿರಾ : ಕಷ್ಟಗಳು ಬಂದ ತಕ್ಷಣ ಮನುಷ್ಯ ಹೆದರಿ ಮನೆಯಲ್ಲಿ ಕುಳಿತರೆ ಜೀವನದಲ್ಲಿ ಏನನ್ನೂ್ನ ಸಾಧಿಸಲು ಸಾಧ್ಯವಿಲ್ಲ. ಎಷ್ಟೇ ಕಷ್ಟಗಳು ಬಂದರೂ ಹಿಮ್ಮೆಟಿಸಿ ಮುನ್ನಡೆಯುವುದೇ ಜೀವನ. ತಾಳ್ಮೆ, ಸಾಧಿಸುತ್ತೇನೆ ಎಂಬ ಛಲ, ಜನರ ಪ್ರೀತಿ-ವಿಶ್ವಾಸ, ದೇವರ ಕೃಪೆ ಆಶೀರ್ವಾದ ಇದ್ದರೆ ಯಶಸ್ಸು ತಾನಾಗಿಯೇ ಬರಲಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕರೆತಿಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಶ್ರೀ ದಂಡಿ ಮಾರಮ್ಮ ದೇವಿ ನೂತನ ದೇವಸ್ಥಾನ ಉದ್ಘಾಟನೆ ಕಳಸ ಮತ್ತು ವಿಗ್ರಹ ಪ್ರತಿಷ್ಠಾಪನಾ ಮತ್ತು ಗೌರ ಸಮುದ್ರ ಮಾರಮ್ಮ ದೇವಿಯ ಜಲದಿ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನಗಳು ಅಭಿವೃದ್ಧಿಯಾಗಲಿ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಶಿರಾ ತಾಲೂಕಿನ ಹಲವಾರು ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹಾಲಗುಂಡೇಗೌಡ, ದಯಾನಂದ ಗೌಡ, ಗಂಗಾಧರ್,ಗೊಂಚಿಕಾರ್ ಗುಜ್ಜಾರಪ್ಪ, ಪೂಜಾರ್ ರಾಜು, ಶ್ರೀನಿವಾಸ್, ನರಸಿಂಹಪ್ಪ, ಚಂದ್ರಶೇಖರ್, ರಾಮಕೃಷ್ಣಪ್ಪ, ನಾಗರಾಜು, ಜಯಣ್ಣ, ಉಗ್ರಪ್ಪ, ನಾಗಲಿಂಗಪ್ಪ ಸೇರಿ ನೂರಾರು ಭಕ್ತರು ಹಾಜರಿದ್ದರು.
ಗ್ಯಾರಂಟಿ ಕಾರ್ಡ್‌ಗೆ ಗ್ಯಾರಂಟಿಯೇ ಇಲ್ಲ
ಶಿರಾ : ಮಾಜಿ ಸಚಿವರು ಕಳೆದ ಹತ್ತು ವರ್ಷದ ತಮ್ಮ ಅಧಿಕಾರ ಅವಧಿಯಲ್ಲಿ 2500 ಕೋಟಿ ರೂಪಾಯಿ ಅನುದಾನದಿಂದ ಅಭಿವೃದ್ಧಿ ಕಾರ್ಯ ಮಾಡಿರುವುದಾಗಿ ಹೇಳುತ್ತಾರೆ. ಆದರೆ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಅಂಗನವಾಡಿ, ಶಾಲೆಗಳು ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಗೆ ಯಾವ ಗ್ಯಾರಂಟಿನೂ ಇಲ್ಲ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ತಡಕಲೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಾನು ಶಾಸಕನಾದ ಎರಡುವರೆ ವರ್ಷದಲ್ಲಿ ಕ್ಷೇತ್ರದಲ್ಲಿ 140 ಪರ್ಸೆಂಟ್ ಅಭಿವೃದ್ಧಿ ಮಾಡಿದ್ದೇನೆ. ಬಿಜೆಪಿ ಸರಕಾರ ಕೊಟ್ಟಮಾತಿನಂತೆ, ಮದಲೂರು ಕೆರೆಗೆ ಮೂರು ಬಾರಿ ಹೇಮಾವತಿ ನೀರು ಹರಿಸಿ ಶಿರಾ ತಾಲೂಕಿನ ಕುಡಿಯುವ ನೀರಿನ ಭವಣಿಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿದೆ.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಚಂಗಾವರ ಮಾರಣ್ಣ, ಮಾತನಾಡಿದರು. ಟಿಎಪಿಎಂಎಸ್ ಅಧ್ಯಕ್ಷ ಹುಣಸೆಹಳ್ಳಿ ಶಿವಕುಮಾರ್, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಮುದ್ದುರಾಜ್, ಕಾಡುಗೊಲ್ಲ ಮುಖಂಡ ಶಶಿ, ಜಿಲ್ಲಾ ಉಪಾಧ್ಯಕ್ಷ ಗಿರಿಧರ, ಪ್ರಕಾಶ್ ಮಂಜುನಾಥ್, ಹನುಮಂತ ನಾಯಕ್, ಬೆಜ್ಜಿಹಳ್ಳಿ ಪರಮೇಶ್, ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ, ದಿಬ್ಬದ ಹಟ್ಟಿಮಹೇಶ್ ಮಂಜುನಾಥ್ , ಜಗದೀಶ್, ಹಾಲು ಒಕ್ಕೂಟದ ಅಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಹಲವಾರು ಮುಖಂಡರು ಶಾಸಕ ರಾಜೇಶ್ ಗೌಡ ಸಮಕ್ಷಮದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.