ರಾಯಚೂರು(ಆ.01): ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ತನು, ಮನ ಧನದಿಂದ ಸಹಾಯ ಮಾಡಿ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ರಾಮ ಎಂಬ ಎರಡು ಅಕ್ಷರದಲ್ಲಿ ಮೂರು ಮಂತ್ರಗಳಿವೆ. ರಾಮ ನಾಮ ಜಪ ಮಾಡಿದರೆ ಕಷ್ಟಗಳು ನಿರ್ವಹಣೆ ಮಾಡುವ ಶಕ್ತಿ ಇದೆ. ಸಾಧನೆ ಮಾಡಲು ಸಹ ರಾಮ ಮಂತ್ರ ಸಹಾಯವಾಗಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. 

ಆ. 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಇಂದು ಮಂತ್ರಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಸಹಕಾರ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಮೂಲ ವಿನ್ಯಾಸಕ್ಕಿಂತ 2 ಪಟ್ಟು ದೊಡ್ಡದಾದ ರಾಮ ಮಂದಿರ ನಿರ್ಮಾಣ

ಭೂಮಿ ಪೂಜೆಯಲ್ಲಿ ಎಲ್ಲರೂ ಭಾಗವಹಿಸಲು ಆಗುವುದಿಲ್ಲ. ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ದೈಹಿಕವಾಗಿ ಭಾಗವಹಿಸಲು ಆಗಲ್ಲ. ಎಲ್ಲರೂ ಮನೆಯಲ್ಲಿ ಇದ್ದು ರಾಮ ಮಂತ್ರ ಜಪಿಸಿ. ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ಎಂದ ಮಂತ್ರಾಲಯ ಶ್ರೀಗಳು ಕರೆ ನೀಡಿದ್ದಾರೆ.