Kodava Heritage and Culture: ಕಟ್ಟಡ ನಿರ್ಮಾಣಕ್ಕೆ ಡಿಪಿಆರ್‌ ಸಲ್ಲಿಸಿ: ಡಾ.ಎನ್‌.ವಿ. ಪ್ರಸಾದ್‌

ಕೊಡವ ಹೆರಿಟೇಜ್‌ ಕಟ್ಟಡ ನಿರ್ಮಾಣ ಸಂಬಂಧ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಕೂಡಲೇ ವಿಸ್ತೃತ ಅಂದಾಜು ಪಟ್ಟಿ(ಡೀಟೈಲ್‌ ಪ್ರಾಜೆಕ್ಟ್ ರಿಪೋರ್ಚ್‌- ಡಿಪಿಆರ್‌) ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ.ಎನ್‌.ವಿ. ಪ್ರಸಾದ್‌ ಅವರು ತಿಳಿಸಿದ್ದಾರೆ.

Submit DPR for construction of Kodava heritage building rav

ಮಡಿಕೇರಿ (ಜು.28) : ಕೊಡವ ಹೆರಿಟೇಜ್‌ ಕಟ್ಟಡ ನಿರ್ಮಾಣ ಸಂಬಂಧ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಕೂಡಲೇ ವಿಸ್ತೃತ ಅಂದಾಜು ಪಟ್ಟಿ(ಡೀಟೈಲ್‌ ಪ್ರಾಜೆಕ್ಟ್ ರಿಪೋರ್ಚ್‌- ಡಿಪಿಆರ್‌) ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ.ಎನ್‌.ವಿ. ಪ್ರಸಾದ್‌ ಅವರು ತಿಳಿಸಿದ್ದಾರೆ.

ವಿಡಿಯೋ ಸಂವಾದ(Video Conference)ದ ಮೂಲಕ ಕೊಡವ ಹೆರಿಟೇಜ್‌(Kodava Heritage) ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ(DC Dr.B.C.Satish) ಅವರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕೊಡವ ಹೆರಿಟೇಜ್‌ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಅಂದಾಜು ಪಟ್ಟಿಸಲ್ಲಿಸಬೇಕು. ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ಜೊತೆ ಮಾತನಾಡಿ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಹೇಳಿದರು. ಈಗಾಗಲೇ ಶೇ.75 ರಿಂದ 80 ರಷ್ಟುಕಾಮಗಾರಿ ಪೂರ್ಣಗೊಂಡಿದೆ. ಆ ನಿಟ್ಟಿನಲ್ಲಿ ಬಾಕಿ ಇರುವ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು ಎಂದು ಪ್ರಸಾದ್‌ ಅವರು ಹೇಳಿದರು.

ಮಾನ್ಸೂನ್ ಸೀಸನ್ ನಲ್ಲಿ ರೋಡ್ ಟ್ರಿಪ್ ಎಂಜಾಯ್ ಮಾಡಲು ಇಲ್ಲಿಗೆ ಬನ್ನಿ

ಕಾಮಗಾರಿ ವಿವರ ನೀಡಿದ ಡಿಸಿ: ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಕೊಡವ ಹೆರಿಟೇಜ್‌ ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖವಾಗಿ ಲ್ಯಾಟರೈಟ್‌ ಗೋಡೆಗಳಿಗೆ ಪಾಲಿಷಿಂಗ್‌ ಆಗಬೇಕಿದೆ. ಕಟ್ಟಡದ ಮುಂಭಾಗ ಗೇಟ್‌ ಮತ್ತು ಸುತ್ತುಗೋಡೆ ನಿರ್ಮಿಸಬೇಕಿದೆ. ಮೆಟ್ಟಿಲುಗಳಿಗೆ ರೈಲಿಂಗ್‌್ಸ ಮಾಡಬೇಕಿದೆ. ರಂಗಮಂದಿರಕ್ಕೆ ಮೇಲ್ಛಾವಣಿ ಹಾಗೂ ಇತರ ಕೆಲಸಗಳು ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಕೊಡವ ಹೆರಿಟೇಜ್‌ ಸೆಂಟರ್‌ ನಿರ್ಮಾಣ ಸಂಬಂಧ 330.45 ಲಕ್ಷ ರು.ಗಳ ಕಾಮಗಾರಿಗೆ ಅನುಮೋದನೆ ದೊರೆತಿದೆ. ಐನ್‌ಮನೆ, ಬಯಲು ರಂಗಮಂದಿರ, ವಾಟರ್‌ ಟ್ಯಾಂಕ್‌, ತಡೆಗೋಡೆ ಮತ್ತು ಸಂಪರ್ಕ ಮೆಟ್ಟಿಲುಗಳು, ವಿದ್ಯುತ್‌ ಸಂಪರ್ಕ ಮತ್ತಿತರ ಕಾಮಗಾರಿಗಳು ಪೂರ್ಣಗೊಂಡಿದೆ. ಈಗಾಗಲೇ 282.50 ಲಕ್ಷ ರು. ಬಿಡುಗಡೆಯಾಗಿದ್ದು, 47.95 ಲಕ್ಷ ರು. ಬಿಡುಗಡೆಗೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ತಿಳಿಸಿದರು.

ಕೊಡವ ಹೆರಿಟೇಜ್‌ ಕಾಮಗಾರಿ ಸಂಬಂಧ 10 ದಿನದಲ್ಲಿ ವಿಸ್ತೃತ ಅಂದಾಜು ಪಟ್ಟಿಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸತೀಶ ಹೇಳಿದರು. ನಿವೃತ್ತ ಐಎಎಸ್‌ ಅಧಿಕಾರಿ ರತಿ ವಿನಯ್‌ ಜಾ ಅವರು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡವ ಪಾರಂಪರಿಕ ಕೇಂದ್ರ ನಿರ್ಮಾಣಕ್ಕೆ ಸಾಕಷ್ಟುಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಕೋರಿದರು. 

ಮಳೆಯ ಅಬ್ಬರಕ್ಕೆ ಮತ್ತೆ ಮೈದುಂಬಿದ ಕರಿಕೆ ಜಲಪಾತಗಳು

ಕೊಡವ ಹೆರಿಟೇಜ್‌ ಕೇಂದ್ರವು ಮುಂದಿನ ಪೀಳಿಗೆಗೆ ಕೊಡವ ಸಂಸ್ಕೃತಿ ಪರಿಚಯಿಸುವಲ್ಲಿ ಸಹಕಾರಿಯಾಗಲಿದೆ. ಕೊಡವ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಕೊಡವ ಹೆರಿಟೇಜ್‌ ಸೆಂಟರ್‌ ನಿರ್ಮಾಣ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಅವರು ಹೇಳಿದರು.

ಬಳಿಕ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಮಾತನಾಡಿ ಕೊಡವ ಪಾರಂಪರಿಕ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯನ್ನು ನೇಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿ, ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್‌ ಉಳ್ಳಾಲ್‌, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಚೆನ್ನಕೇಶವ, ಸತೀಶ್‌ ಇತರರು ಇದ್ದರು.

Latest Videos
Follow Us:
Download App:
  • android
  • ios