Asianet Suvarna News Asianet Suvarna News

'ಮಹದಾಯಿ ಜಾರಿಗಾಗಿ ಸಿಎಂ ಯಡಿಯೂರಪ್ಪ ಪ್ರಧಾನಿ ಮೇಲೆ ಒತ್ತಡ ಹಾಕಲಿ'

ಮಹದಾಯಿ ಜಾರಿಗಾಗಿ ಸಿಎಂ ದೆಹಲಿಗೆ ಸರ್ವಪಕ್ಷ ನಿಯೋಗ ಒಯ್ಯಲಿ| ಮಹದಾಯಿ ಹೋರಾಟ ವೇದಿಕೆಯಲ್ಲಿ ಜಗನ್ನಾಥ ಮುಧೋಳೆ ಆಗ್ರಹ|ಗೋವಾ ರಾಜ್ಯದ ಮುಖ್ಯಮಂತ್ರಿಗಳ ಒತ್ತಡಕ್ಕೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಮಣಿದು ಅರಣ್ಯ ಹಾಗೂ ಪರಿಸರ ಇಲಾಖೆ ಪರವಾನಗಿ ಹಿಂದಕ್ಕೆ ಪಡೆದಿದ್ದು ಕರ್ನಾಟಕ ರಾಜ್ಯಕ್ಕೆ ಅನ್ಯಾಯ| 

Stuglers Demand to CM Slove the Mahadayi Issue
Author
Bengaluru, First Published Dec 22, 2019, 10:15 AM IST

ನರಗುಂದ(ಡಿ.22): ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಸರ್ವ ಪಕ್ಷ ನಿಯೋಗದೊಂದಿಗೆ ದೆಹಲಿಗೆ ಹೋಗಿ ಯೋಜನೆ ಜಾರಿಗೆ ಪ್ರಧಾನಿಗಳ ಮೇಲೆ ಒತ್ತಡ ಹಾಕಬೇಕೆಂದು ರೈತ ಸೇನಾ ಸಂಘಟನೆ ಸದಸ್ಯ ಜಗನ್ನಾಥ ಮುಧೋಳೆ ಆಗ್ರಹ ಮಾಡಿದ್ದಾರೆ.

1619ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಬಂಡಾಯ ನೆಲದಲ್ಲಿ ಮಹದಾಯಿ ಹೋರಾಟಗಾರರು ಕಳೆದ ನಾಲ್ಕು ವರ್ಷದಿಂದ ನಿರಂತರ ಹೋರಾಟ ಮಾಡಿದ್ದರಿಂದ ಈ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು ಕರ್ನಾಟಕ ರಾಜ್ಯಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳು ಅನುಮತಿ ನೀಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ಕೂಡ ನೀರು ಬಳಕೆ ಮಾಡಿಕೊಳ್ಳಲು ಅರಣ್ಯದ ಪರವಾನಗಿ ನೀಡಿತ್ತು. ಆದರೆ ಗೋವಾ ರಾಜ್ಯದ ಮುಖ್ಯಮಂತ್ರಿಗಳ ಒತ್ತಡಕ್ಕೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಮಣಿದು ಅರಣ್ಯ ಹಾಗೂ ಪರಿಸರ ಇಲಾಖೆ ಪರವಾನಗಿ ಹಿಂದಕ್ಕೆ ಪಡೆದಿದ್ದು ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ರಾಜ್ಯದ ರೈತ ನಾಯಕ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪನವರು ಮತ್ತೊಮ್ಮೆ ರಾಜ್ಯದ ಸರ್ವ ಪಕ್ಷಗಳ ಸಭೆ ಕರೆದು ಮಹದಾಯಿ ನದಿ ನೀರು ಬಳಕಗೆ ಚರ್ಚೆ ಮಾಡಿ ದೆಹಲಿಗೆ ಸರ್ವ ಪಕ್ಷಗಳ ಕರೆದುಕೊಂಡು ಹೋಗಿ ಈ ನೀರು ಕರ್ನಾಟಕ ಬಳಕೆ ಮಾಡಿಕೊಳ್ಳುವುದರಿಂದ ಗೋವಾ ರಾಜ್ಯಕ್ಕೆ ಯಾವುದೇ ರೀತಿ ಹಾನಿಯಿಲ್ಲವೆಂದು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಸಿಎಂವರು ಈ ಕಾರ್ಯ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಈ ಭಾಗದ ಮಹದಾಯಿ ಹೋರಾಟಗಾರರು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಉಗ್ರ ಹೋರಾಟ ಮಾಡಿ ನಮ್ಮ ಪ್ರಾಣವನ್ನು ನೀಡಿಯಾದರೂ ನಾವು ಈ ನೀರು ಪಡೆದುಕೊಳ್ಳಲು ಮುಂದಾಗುತ್ತೇವೆ. ಮುಂದಾಗುವ ಅನಾಹುತಕ್ಕೆ ಉಭಯ ಸರ್ಕಾರಗಳೆ ಹೊಣೆ ಆಗುತ್ತವೆಂದು ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಮೂರು ವರ್ಷದಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದರಿಂದ ಪ್ರತಿ ದಿವಸ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತೆ ಜಿಲ್ಲಾಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಈ ಕಾಮಗಾರಿ ಬೇಗ ಮುಗಿಸಲು ತಿಳಿಸಬೇಕೆಂದು ರೈತ ಸೇನಾ ಸಂಘಟನೆ ಕೋಶಾಧ್ಯಕ್ಷ ಎಸ್‌.ಬಿ. ಜೋಗಣ್ಣವರ ಆಗ್ರಹ ಮಾಡಿದರು.

ವೀರಬಸಪ್ಪ ಹೂಗಾರ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ಯಲ್ಲಪ್ಪ ಚಲವಣ್ಣವರ, ಅರ್ಜುನ ಮಾನೆ, ಚನ್ನಬಸಪ್ಪ ಆಯಿಟ್ಟಿ, ಚನ್ನಪ್ಪಗೌಡ ಪಾಟೀಲ, ಮಲ್ಲವ್ವ ಭೋವಿ, ದೇವಕ್ಕ ಚಲವಣ್ಣವರ, ಹನಮಂತ ಪಡೇಸೂರ, ಮಂಜುಳಾ ಸರನಾಯ್ಕರ, ಯಲ್ಲಪ್ಪ ಗುಡದೇರಿ, ಮಲ್ಲೇಶಪ್ಪ ಅಣ್ಣಗೇರಿ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಚನ್ನಬಸವ್ವ ಆಯಿಟ್ಟಿ, ರಾಮಚಂದ್ರ ಸಾಬಳೆ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ಈರಣ್ಣ ಗಡಗಿ, ವಾಸು ಚವಾಣ ಉಪಸ್ಥಿತರಿದ್ದರು.
 

Follow Us:
Download App:
  • android
  • ios