Asianet Suvarna News Asianet Suvarna News

Kolar : ವಿದ್ಯಾರ್ಥಿಗಳು ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಳ್ಳಿ

ವಿದ್ಯಾಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ತಮಗೆ ಆಸಕ್ತಿ ಇರುವ ಕಲಿಕಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲಿ ನೀವು ತಪ್ಪು ನಿರ್ಧಾರ ಕೈಗೊಂಡರೆ ಅದು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್‌ ಕಿವಿಮಾತು ಹೇಳಿದರು.

 Students Should Select subject of interest snr
Author
First Published Dec 29, 2022, 5:46 AM IST

 ಕೋಲಾರ :  ವಿದ್ಯಾಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ತಮಗೆ ಆಸಕ್ತಿ ಇರುವ ಕಲಿಕಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲಿ ನೀವು ತಪ್ಪು ನಿರ್ಧಾರ ಕೈಗೊಂಡರೆ ಅದು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್‌ ಕಿವಿಮಾತು ಹೇಳಿದರು.

ತಾಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್‌ ಶಾಲೆಯ (School)  ಪೋಷಕರ ಸಭೆ ಹಾಗೂ ಎಸ್ಸೆಸ್ಸೆಲ್ಸಿ (SSLC)  ನಂತರ ಮುಂದೇನು ಎಂಬ ಗೊಂದಲ ಪರಿಹರಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಯಾರದೋ ಮಾತಿಗೆ ಸೋಲದೆ ನಿಜವಾಗಿಯೂ ಆಸಕ್ತಿ ಇರುವ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸಿ ಮುಂದಿನ ವ್ಯಾಸಂಗದ ನಿರ್ಧಾರ ಮಾಡಿ ಎಂದರು.

ಉನ್ನತ ವ್ಯಾಸಂಗಕ್ಕೆ ಅವಕಾಶ

ಎಸ್‌ಎಸ್‌ಎಲ್‌ಸಿ ನಮ್ಮ ಶಿಕ್ಷಣದ ಒಂದು ಮಹತ್ವದ ಘಟ್ಟ. ಪಿಯುಸಿ ಪೂರ್ಣಗೊಂಡ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ನೂರಾರು ಆಯ್ಕೆಗಳಿವೆ. 10ನೇ ತರಗತಿ ನಂತರ, ಮುಖ್ಯವಾಗಿ ಇರುವ ಆಯ್ಕೆ ಪಿಯುಸಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕಲೆ, ವಿಜ್ಞಾನ, ವಾಣಿಜ್ಯದಲ್ಲಿ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಹಲವರಲ್ಲಿ ಇರಬಹುದು. ಇದು ಪೋಷಕರನ್ನು ಕೂಡ ಕಾಡುವ ಪ್ರಶ್ನೆ. ಈ ಎಲ್ಲ ವಿಭಾಗಗಳಲ್ಲಿಯೂ ಉನ್ನತ ವ್ಯಾಸಂಗಕ್ಕೆ ಅವಕಾಶ ಇದೆ ಮತ್ತು ವೃತ್ತಿಯ ಸಾಧ್ಯತೆಗಳಿಗೆ ಕೊರತೆ ಇಲ್ಲ ಎಂದರು.

ಕಲೆ ಅಥವಾ ಸಾಹಿತ್ಯದ ವಿಷಯದಲ್ಲಿ ಅತೀವವಾದ ಆಸಕ್ತಿ ಇರುವವರು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದೇ ಸೂಕ್ತ. ಈ ವಿಭಾಗದಲ್ಲಿ ಭಾಷೆ, ಸಾಹಿತ್ಯ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮದಂತಹ ವಿಷಯಗಳನ್ನು ಕಲಿಯಲು ಅವಕಾಶ ಇದೆ. ಈ ವಿಭಾಗದಲ್ಲಿ ಕಲಿತರೆ ಉದ್ಯೋಗ ಅವಕಾಶಗಳಿಗೆ ಕೊರತೆಯೇನೂ ಇಲ್ಲ ಎಂದರು.

ಆಸಕ್ತಿ ಇದ್ದವರಿಗೆ ವಿಜ್ಞಾನ ವಿಷಯ

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತುಡಿತ ಇರುವವರು, ಗಣಿತ, ಜೀವವಿಜ್ಞಾನ ವಿಷಯಗಳಲ್ಲಿ ತೀವ್ರ ಆಸಕ್ತಿ ಇರುವವರು ವಿಜ್ಞಾನ ವಿಷಯಗಳನ್ನು ಕಲಿಯಬಹುದು. ಈ ಕ್ಷೇತ್ರದಲ್ಲಿ ಇರುವ ಅವಕಾಶಗಳು ಅಪಾರ. ವಾಣಿಜ್ಯವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ವಿಭಾಗ. ವ್ಯಾಪಾರ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರದಂತಹ ವಿಷಯಗಳಲ್ಲಿ ಆಸಕ್ತಿ ಇರುವವರು ಈ ವಿಭಾಗಕ್ಕೆ ಸೇರಬಹುದು. ಈ ಕ್ಷೇತ್ರದಲ್ಲಿ ವೃತ್ತಿಯ ಆಯ್ಕೆ ಮತ್ತು ಅವಕಾಶಗಳು ವಿಪುಲವಾಗಿವೆ ಎಂದರು.

ಗ್ರಾಪಂ ಅಧ್ಯಕ್ಷೆ ಸಾಯೀದಾ ಖಾನಮ್‌, ಉಪಾಧ್ಯಕ್ಷೆ ರತ್ನಮ್ಮ, ನಾರಾಯಣಸ್ವಾಮಿ, ರಾಜೇಂದ್ರ ಪ್ರಸಾದ್‌, ಸೀತಿಹೊಸೂರು ಮುರಳಿಗೌಡ, ಎಸ್‌.ಡಿ.ಎಂ.ಸಿ ಅಧ್ಯಕ್ಷ ನಾರಾಯಣಮೂರ್ತಿ, ಗೌರವಧ್ಯಕ್ಷ ರಾಮಾಂಜಪ್ಪ, ಎಸ್‌.ಡಿ.ಎಂ.ಸಿ ಮಾಜಿ ಅಧ್ಯಕ್ಷ ಮುನ್‌ ಶಿರ್‌ ಪಾಷ, ಮುಖ್ಯ ಶಿಕ್ಷಕರಾದ ಓ. ಮಲ್ಲಿಕಾರ್ಜುನ, ಶಿಕ್ಷಕರಾದ ಧನ್ಯಕುಮಾರ್‌, ರಾಮಾಂಜಪ್ಪ, ರಾಜೇಶ್‌ ಇದ್ದರು. 

10 ಗ್ರಾಂ ಚಿನ್ನ

ಪಾಂಡವಪುರ (ಮ.07):   ತಾಲೂಕಿನ ಚಿನಕುರಳಿ ಎಸ್ಟಿಜಿ ಪಬ್ಲಿಕ್‌ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್‌. ಪುಟ್ಟರಾಜು ತಲಾ ಹತ್ತು ಗ್ರಾಪಂ ಚಿನ್ನ ನೀಡಿ ಅಭಿನಂದಿಸಿದರು.

ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಿಯುಸಿ ವಿಭಾಗದಲ್ಲಿ ಯು. ಪುನೀತ್‌ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಅಸ್ರಾ ಮಾಹೀನ್‌ ಎಂಬ ವಿದ್ಯಾರ್ಥಿಗೆ ಚಿನ್ನದ ನೀಡಿ ಗೌರವಿಸಿದರು. ಜತೆಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 118 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನೂರಕ್ಕೆ ನೂರು ಅಂಕ ಗಳಿಸಿದ ಗಣಿತ-62, ಕನ್ನಡ-4, ಭೌತಶಾಸ್ತ್ರ-2, ಜೀವಶಾಸ್ತ್ರ-7, ರಸಾಯನಶಾಸ್ತ್ರ-14 ವಿದ್ಯಾರ್ಥಿಗಳನ್ನು ಸಹ ಅಭಿನಂಧಿಸಲಾಯಿತು.

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಚಿನಕುರಳಿಯಲ್ಲಿ ಎಸ್ಟಿಜಿ ಸಂಸ್ಥೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಸಿಇಓ ಸಿ.ಪಿ.ಶಿವರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾದದ್ದು. ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಂಡು ಓದುತ್ತಾರೋ ಅವರು ಶೈಕ್ಷಣಿಕವಾಗಿ ಮುನ್ನಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳ ಚನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು ಎಂಬ ಕನಸು ಕಾಣುತ್ತಾರೆ. ಪೋಷಕರು ಕನಸ್ಸನ್ನು ನನಸು ಮಾಡುವ ಜವಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದ್ದು ಪೋಷಕರ ಕನಸು ನನಸು ಮಾಡಬೇಕು ಎಂದು ಕಿವಿಮಾತು ಹೇಳಿದರು.

Follow Us:
Download App:
  • android
  • ios