ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು: ಯು.ಟಿ.ಖಾದರ್‌

ಸೇವಾದಳ ದೇಶದ ದೊಡ್ಡ ಸಂಘಟನೆಯಾಗಿದೆ. ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬೇಕು ಎಂದು ವಿದಾನಸಭಾ ಅಧ್ಯಕ್ಷ ಯು.ಟಿ.ಖಾದರ್‌ ಕರೆ ನೀಡಿದರು.
 

Students should imbibe patriotism Says UT Khader gvd

ಮಂಗಳೂರು (ಡಿ.30): ಸೇವಾದಳ ದೇಶದ ದೊಡ್ಡ ಸಂಘಟನೆಯಾಗಿದೆ. ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬೇಕು ಎಂದು ವಿದಾನಸಭಾ ಅಧ್ಯಕ್ಷ ಯು.ಟಿ.ಖಾದರ್‌ ಕರೆ ನೀಡಿದರು. ಭಾರತ ಸೇವಾದಳ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸೇವಾದಳದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಕುದ್ಮುಲ್‌ ರಂಗರಾವ್‌ ಪುರಭವನದ ಗಾಂಧಿ ಪ್ರತಿಮೆ ಬಳಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳಷ್ಟು ಮಂದಿ ಯುವಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೇಶ ಸೇವೆ ಮಾಡುವ ಮನಸ್ಸು ಪ್ರತಿಯೊಬ್ಬರಲ್ಲೂ ಮೂಡಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎಲ್ಲರೂ ತಿಳಿದುಕೊಂಡು ಅವರ ಆದರ್ಶದಡಿ ಸಾಗಬೇಕು ಎಂದರು. ಪ್ರಾರಂಭದಲ್ಲಿ ಸುಮಾರು 300 ಮಂದಿ ಸೇವಾದಳದ ಶಾಲಾ ವಿದ್ಯಾರ್ಥಿಗಳು ನಗರದ ಬಲ್ಮಠದಲ್ಲಿರುವ ಸರ್ಕಾರಿ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜು ಆವರಣದಿಂದ ಪುರಭವನದ ಗಾಂಧಿ ಪಾರ್ಕ್‌ಗೆ ಜಾಥಾ ನಡೆಸಿದರು. 

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದಿಂದ ನೆರವು: ಸಚಿವ ಮುನಿಯಪ್ಪ

ಜಾಥಾಕ್ಕೆ ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಚಾಲನೆ ನೀಡಿ ಮಾತನಾಡಿ, ದೇಶದ ಭವಿಷ್ಯಕ್ಕೆ ಸೇವಾದಳದ ಅಗತ್ಯವಿದೆ. ಸೇವಾದಳದ ವಿದ್ಯಾರ್ಥಿಗಳಿಗೆ ನೀಡುವಂತಹ ಶಿಸ್ತಿನ ಪಾಠದಿಂದ ಸುಂದರ ಭಾರತ ನಿರ್ಮಾಣವಾಗಲಿ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಸದಸ್ಯ ಬಶೀರ್‌ ಬೈಕಂಪಾಡಿ, ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್‌, ತಾಲೂಕು ಅಧ್ಯಕ್ಷ ಪ್ರಭಾಕರ್‌ ಶ್ರೀಯಾನ್‌, ಪದಾಧಿಕಾರಿಗಳಾದ ಉದಯ್‌ ಕುಂದರ್‌, ಪ್ರೇಮ್‌ ಚಂದ್‌, ಕೃತಿನ್‌ ಕುಮಾರ್‌, ಸಂಘಟಕ ಮಂಜೇಗೌಡ, ಬೆಂಗ್ರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಕೇಶ್‌ ಇದ್ದರು.

ಸಿದ್ಧೇಶ್ವರ ಶ್ರೀಗಳ ಸಂದೇಶ ವಿಶ್ವಾದ್ಯಂತ ಪಸರಿಸಬೇಕಿದೆ: ಸ್ವಾಮೀಜಿಯವರು ಸದಾ ಶಾಂತಿಗೆ ಒತ್ತನ್ನು ಕೊಟ್ಟವರು. ಆದರೆ ನಾವು ಇಂದು ದ್ವೇಷದ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮ್ಮ ಗಾಳಿಯಲ್ಲಿ, ಉಸಿರಿನಲ್ಲಿಯೇ ದ್ವೇಷ ತುಂಬಿದೆ. ಇಂತಹ ಸಮಾಜದಲ್ಲಿ ನಾವು ಶ್ರೀ ಸಿದ್ದೇಶ್ವರ ಅಪ್ಪನವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನ್ಮಾರ್ಗ ಮತ್ತು ಶಾಂತಿಯುತ ಬದುಕು ನಡೆಸಲು ಸಾಧ್ಯ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್‌ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಜಾಗತಿಕ ಆಧ್ಯಾತ್ಮಿಕ ಚಿಂತನೆ ವಿಷಯದ ಕುರಿತು ನಡೆದ 3ನೇ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಪ್ಪನವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಯಾವುದೇ ಅಪೇಕ್ಷೆ ಪಡದೆ ನಾವು ಬದುಕಬೇಕು. ಸಣ್ಣ-ಪುಟ್ಟ ವಿಷಯಗಳಿಗೆ ಜಗಳವಾಡುವುದನ್ನು ಬಿಟ್ಟು ನಿಸ್ವಾರ್ಥದಿಂದ ಬದುಕಬೇಕು. ಅಂದಾಗ ನಮ್ಮ ಬದುಕು ಸುಂದರವಾಗಲು ಸಾಧ್ಯ ಎನ್ನುತ್ತಿದ್ದರು. ಅವರು ಹೇಳಿದ ಮಾತು ನಾವು ಪಾಲಿಸಿದ್ದೇ ಆದಲ್ಲಿ ಉತ್ತಮ ಬದುಕು, ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.

ಮಾದಿಗ ಸಮಾಜದ ಬೆನ್ನಿಗೆ ಬಿಜೆಪಿ ನಿಂತ್ರೆ, ಕಾಂಗ್ರೆಸ್‌ ಮತಬೇಟೆಗೆ ಮಾತ್ರ ಸೀಮಿತ: ಸಚಿವ ನಾರಾಯಣಸ್ವಾಮಿ

ಧರ್ಮ ನಮ್ಮನ್ನು ಸಂಘಟಿಸಲು ಇದೆ. ಬೇರೆ ಧರ್ಮಗಳನ್ನು ಪ್ರೀತಿಸಿ, ವಿಶ್ವಾಸದಿಂದ ಬದುಕಬೇಕು. ನಾವು ಸತ್ತ ಮೇಲೆ ನಮಗೆ ಯಾವ ಜಾತಿ ಧರ್ಮವೂ ಇರುವುದಿಲ್ಲ. ನನ್ನ ಸಾವಿನ ನಂತರ ನಮ್ಮ ಹೆಸರು ಸಹ ಉಳಿಯುವುದಿಲ್ಲ. ಹೀಗಾಗಿ ನಾವು ಎಂದಿಗೂ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಈ ನಿಟ್ಟಿನಲ್ಲಿ ಸದಾಕಾಲ ಪ್ರೇರೇಪಿಸುತ್ತಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನಾವೆಲ್ಲರೂ ಸದಾ ಚಿರಋಣಿ ಎಂದರು. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ, ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಎಲ್ಲವನ್ನು ಮರೆಯುತ್ತಿದ್ದಾರೆ. ಅದರಿಂದ ಅವರನ್ನು ಹೊರತಂದು ನಮ್ಮ ಸಂಸ್ಕೃತಿ, ಅಧ್ಯಾತ್ಮದತ್ತ ಚಿತ್ತ ಕೊಡುವಂತೆ ನೋಡಿಕೊಳ್ಳಬೇಕು ಎಂದರು.

Latest Videos
Follow Us:
Download App:
  • android
  • ios