Asianet Suvarna News Asianet Suvarna News

ಶಕ್ತಿ ಯೋಜನೆ ಪ್ರಭಾವ ಬಸ್ ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಶಕ್ತಿ ಯೋಜನೆಯಿಂದ ಬೇಸತ್ತ ವಿದ್ಯಾರ್ಥಿಗಳು ಕುಣಿಗಲ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

Students Protest For Bus Facility  snr
Author
First Published Nov 18, 2023, 9:02 AM IST

  ಕುಣಿಗಲ್ :  ಶಕ್ತಿ ಯೋಜನೆಯಿಂದ ಬೇಸತ್ತ ವಿದ್ಯಾರ್ಥಿಗಳು ಕುಣಿಗಲ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿದಿನ ತುಮಕೂರಿಗೆ ವಿದ್ಯಾರ್ಥಿಗಳು ಹೋಗಲು ಉಂಟಾಗುವ ಬಸ್ ಸಮಸ್ಯೆಯಿಂದ ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ 7.00ಯಿಂದ 9 ಗಂಟೆ ತನಕ ಕುಣಿಗಲ್ ಡಿಪೋ ದಿಂದ ಬಸ್ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಪಟ್ಟಣದ ಕೆಎಸ್ಆರ್‌ ಟಿಸಿ ಬಸ್ ನಿಲ್ದಾಣದಲ್ಲಿ ಸಂಘಟನೆಗೊಂಡ ಸಾವಿರಾರು ವಿದ್ಯಾರ್ಥಿಗಳು ಇತರ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.

ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಪ್ರತಿಭಟನಾ ವಿದ್ಯಾರ್ಥಿಗಳಿಗೆ ಮನವೊಲಿಸುವ ಪ್ರಯತ್ನ ಮಾಡಿದರು ಗಂಟೆಗಟ್ಟಲೆ ಪ್ರತಿಭಟನೆ ನಡೆಯಿತು

ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ ನವೀನ್ ಗೌಡ ವಿದ್ಯಾರ್ಥಿಗಳಿಗೆ ಮನವೊಲಿಸುವಲ್ಲಿ ಯಶಸ್ವಿಯಾಗಿ ನಂತರ ತಾತ್ಕಾಲಿಕವಾಗಿ 5 ಬಸ್ ಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ತಕ್ಷಣ ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು ಬಸ್ ಸಮಸ್ಯೆ ಮತ್ತೊಮ್ಮೆ ಮರುಕಳಿಸಿದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಪ್ರತಿದಿನ ತುಮಕೂರಿಗೆ ತೆರಳಲು ಹಾಗೂ ವಾಪಸ್ ಕುಣಿಗಲ್ ಗೆ ಬರಲು ಬಸ್ ಸಮಸ್ಯೆ ಎದುರಾಗುತ್ತಿದೆ. ಶ್ರೀ ಶಕ್ತಿ ಯೋಜನೆಯ ಮಹಿಳೆಯರು ಬಸ್ ನ ಎಲ್ಲಾ ಸೀಟ್ ವಶಕ್ಕೆ ಪಡೆದಿರುತ್ತಾರೆ. ಬಸ್ ನಲ್ಲಿ ಕನಿಷ್ಠ 100 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಇದರಿಂದ ಮಹಿಳಾ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಉಂಟಾಗುತ್ತಿದೆ ಎಂಬುದು ಈ ವಿದ್ಯಾರ್ಥಿಗಳ ಆರೋಪ.

ಸರ್ಕಾರ ಶ್ರೀ ಶಕ್ತಿ ಯೋಜನೆಗೆ ಪ್ರತ್ಯೇಕ ಬಸ್ ಗಳ ವ್ಯವಸ್ಥೆ ಮಾಡಿ ನಮ್ಮ ಬಸ್ ಗಳನ್ನು ಅವರಿಗೆ ನೀಡಿ ನಿಮ್ಮ ಯೋಜನೆ ಮಾಡುವುದು ಸರಿಯಲ್ಲ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ 

Follow Us:
Download App:
  • android
  • ios